This page has been fully proofread once and needs a second look.

ಸಂಗ್ರಹರಾಮಾಯಣ
 
"ರಾಮಭದ್ರ, ನನಗೆ ನಿನ್ನ ನಾಪಾದಸೇವೆ ದೊರಕಿದೆ. ಅದು ಸ್ವರ್ಗಭೋಗ
ಕ್ಕಿಂತಲೂ ಮಿಗಿಲು. ಸಾಮ್ರಾಜ್ಯ ಭೋಗಕ್ಕಿಂತಲೂ ಹೆಚ್ಚು. ಅದರ ಮುಂದೆ
ಮೋಕ್ಷವೂ ಕ್ಷುಲ್ಲಕ ಪದಾರ್ಥ, ನನಗೆ ನಿನ್ನ ಪಾದಸೇವೆಯೊಂದೇ ಸದಾ
ಬೇಕು. ಯುವರಾಜತ್ವದ ಹೊರೆಯನ್ನು ನನ್ನ ಮೇಲೆ ಹೊರಿಸದಿರುವ ಕೃಪೆ
 
ಮಾಡಬೇಕು."
 
೨೩೫
 

 
ಲಕ್ಷ್ಮಣನ ಅಕೃತ್ರಿಮ ಪ್ರೇಮಕ್ಕೆ ಮೆಚ್ಚಿ ರಾಮಚಂದ್ರನು ಅವನಿಗೆ
ಸ್ನೇಹಾಲಿಂಗನವನ್ನು ಕರುಣಿಸಿದನು. ಭರತನು ಯುವರಾಜನಾದನು.
 

 
ಅಷ್ಟರಲ್ಲಿ ಕುಬೇರನು ಪುಷ್ಪಕವನ್ನು ರಾಮಚಂದ್ರನಿಗೆ ಮರಳಿ ಕಳಿಸಿ
ಕೊಟ್ಟಿದ್ದನು. ರಾಮಚಂದ್ರನು ನೆನಸಿದಾಗ ತನ್ನೆಡೆಗೆ ಬರುವಂತೆ ಆಜ್ಞಾಪಿಸಿ
ಅದನ್ನು ಕುಬೇರನಿಗೇ ಹಿಂದಕ್ಕೆ ಕಳಿಸಿ ಕೊಟ್ಟನು.
 

 
ಪ್ರಜೆಗಳು ರಾಮನ ರಾಜ್ಯದಲ್ಲಿ ಇಂದ್ರಲೋಕದಲ್ಲೆಂಬಂತೆ ಸುಖಮಯ
ವಾದ ಬಾಳನ್ನು ಬಾಳಿದರು.
 

 
ಚಿರವಿರಹಿಗಳಾದ ವಿದ್ಯೆ -ಸಂಪತ್ತಿತುಗಳು ರಾಮರಾಜ್ಯದಲ್ಲಿ ಜತೆ ಯಾಗಿ
ಬಾಳಿದವು. ಪ್ರತಿಯೊಬ್ಬರೂ ಬಲ್ಲವರು. ಪ್ರತಿಯೊಬ್ಬರೂ ಬಲ್ಲಿದರು. ಪ್ರತಿ
ಯೊಬ್ಬನ ಮನೆಯಲ್ಲೂ ವೈಭವದ ಬಾಳು,
ಸಂಪದದ ಹೊನಲು, ಪ್ರತಿ
ಯೊಂದೆಡೆಯಲ್ಲೂ ವಿಜ್ಞಾನ-ವೈಭವಗಳು ಜತೆಯಾಗಿ ಹರಿದವು. ಚಕ್ರಪಾಣಿ
ಯಾದ ಭಗವಂತ- ನೇ ಚಕ್ರವರ್ತಿಯಾಗಿ ಅವರನ್ನು ಪಾಲಿಸುತ್ತಿರುವನಲ್ಲವೆ ?
 

 
ರಾಮನ ರಾಜ್ಯದಲ್ಲಿ ಸರ್ವೇಂದ್ರಿಯಗಳಿಗೂ ಸುಖದ ಅವುಣ. ಅನಿಷಿದ್ಧ
ವಾದ ವಿಷಯ ಸುಖದಲ್ಲಿ ನಿರತರಾದ ಜನ ಬಾಳಿ- ನಲ್ಲಿದ್ದೂ ನಿರ್ಲಿಪ್ತರಾಗಿದ್ದರು.
ರೋಗ-ರುಜಿನಗಳ ಪೀಡೆಯಿಲ್ಲದ ಜೀವನ, ದೃಹೃಷ್ಟ-ಪುಷ್ಟವಾದ ಮೈ ಕಟ್ಟು,
ಆಕರ್ಷಕವಾದ ನಿಲುವು, ಪರಿಪೂರ್ಣವಾದ ಆಯುಸ್ಸು, ಇನ್ನೇನು ಬೇಕು

ಜೀವನದ ಸೊಬಗಿಗೆ ? ಅಕಾಲ ಮರಣವೆಂದರೇನೆಂದೇ ಅವರಿಗೆ ತಿಳಿಯದು.
ದುರ್ಮರಣದ ವಾರ್ತೆಯೇ ಅತ್ತ ಸುಳಿಯದು.
 

 
ರಾಮರಾಜ್ಯದ ಹೆಂಗಳೆಯರೆಲ್ಲ ಗಂಡನಿಗೆ ಒಪ್ಪಾಗಿ-ಹದಿಬದೆಯರಾಗಿ
ಬಾಳಿದರು; ಮುತ್ತೈದೆಯರಾಗಿಯೆ ತೆರಳಿದರು. ಐದೆತನದ ಸಾಕ್ಷಿಯಾದ
 
ಕೊರಳ ಸೂತ್ರವನ್ನು ಕಳಚುವ, ಹಣೆಯ ಬೊಟ್ಟನ್ನು ಒರಸುವ ವಿಪತ್ತು