2023-03-15 15:36:04 by ambuda-bot
This page has not been fully proofread.
೨೩೪.
ಮಿಂಚಿನಬಳ್ಳಿ
ತಮ್ಮ ದೇಶಕ್ಕೆ ಮರಳುವಂತೆ ಆಜ್ಞಾಪಿಸಿದನು. ಭಗವಂತನ ಬಳಿಯಿಂದ
ಮರಳುವುದಕ್ಕೆ ಯಾರಿಗೆ ಮನಸ್ಸು ಬಂದೀತು ? ಅವರು ಒಮ್ಮೆಲೆ ಇದನ್ನು
ಒಪ್ಪಲಿಲ್ಲ.
ಭಗವನ್, ನಿನ್ನ ಪಾದಮೂಲವನ್ನು ತೊರೆದು ನಮ್ಮನ್ನು ಸಂಕಟಗಳ
ಆಗರವಾದ ರಾಜ್ಯಕ್ಕೆ ಹೋಗುವಂತೆ ಏಕೆ ಆಜ್ಞಾಪಿಸುತ್ತಿರುವೆ ? ಕಲ್ಪವೃಕ್ಷ
ವನ್ನು ತೊರೆದು ಮುಳ್ಳಿನ ಗಿಡವನ್ನು ಯಾರು ಆಶ್ರಯಿಸುತ್ತಾರೆ ? "
(C
ನೀವು ನನ್ನ ಸೇವೆ ಮಾಡಬಯಸುವುದು ಸಹಜ. ಆದರೆ ಅದು ಇಲ್ಲಿ
ಅಲ್ಲ. ನಿಮ್ಮ ರಾಜ್ಯಕ್ಕೆ ಮರಳಿ ನಿಮ್ಮ ಪ್ರಜೆಗಳನ್ನು ಧರ್ಮದಿಂದ ಪಾಲಿಸ
ಬೇಕು. ಅದೇ ನೀವು ನನಗೆ ಮಾಡುವ ಸೇವೆ." ಹೀಗೆಂದು ರಾಮಚಂದ್ರನು
ತಮ್ಮ ಕುಲಕ್ರಮಾಗತವಾದ ವಿಮಾನವನ್ನು ವಿಭೀಷಣನಿಗೆ ಉಡುಗರೆಯಾಗಿ
ತನು. ಅನಂತರ ಸುಗ್ರೀವನೆಡೆಗೆ ತಿರುಗಿ " ಸುಗ್ರೀವ, ನೀನು ಬಹುಕಾಲ
ರಾಜ್ಯವಾಳಿದ ನಂತರ ನನಗೆ ಪ್ರಿಯರಾದ ಸುಷೇಣ, ತಾರಾದಿಗಳ ಜತೆಗೆ ಮತ್ತೆ
ನನ್ನ ಬಳಿ ಬರುವೆಯಂತೆ" ಎಂದು ಸಂತೈಸಿದನು.
ಕೆಲವರು ರಾಮನ ಗುಣಗಾನ ಮಾಡುತ್ತಿದ್ದರು. ಕೆಲವರು ನಮಸ್ಕರಿ
ಸುತ್ತಿದ್ದರು. ಮತ್ತೆ ಕೆಲವರು ಭಗವಂತನನ್ನು ಸುತ್ತುವರಿಯುತ್ತಿದ್ದರು. ಎಲ್ಲ
ರಿಗೂ ರಾಮನ ಸನ್ನಿಧಾನದಿಂದ ವಂಚಿತರಾಗುವೆವಲ್ಲ ಎನ್ನುವ ಚಿಂತೆ, ಅಯೋ
ಧೈಯನ್ನು ಬಿಟ್ಟು ತೆರಳುವಾಗ ಎಲ್ಲರ ಕಣ್ಣ ತೇವಗೊಂಡಿತ್ತು.
ರಾಮಚಂದ್ರನನ್ನೂ ಅಯೋಧ್ಯೆಯನ್ನೂ ಅವರು ಬಿಟ್ಟು ತೆರಳಿದರೇನಂತೆ?
ರಾಮಚಂದ್ರ ಅವರನ್ನು ತೊರೆಯಲಿಲ್ಲ. ಪ್ರತಿಯೊಬ್ಬನ ಅಂತರಂಗದಲ್ಲಿ
ಅಭಿರಾಮನಾದ ರಾಮ ನೆಲಸಿಯೇ ಇದ್ದ.
ರಾಮರಾಜ್ಯದ ಸೊಬಗು
ಒಮ್ಮೆ ರಾಮಚಂದ್ರನು ಲಕ್ಷ್ಮಣನನ್ನು ಕರೆದು ನುಡಿದನು :
"ವತ್ಸ ಲಕ್ಷಣ, ನಿನ್ನ ಸೇವೆಯಿಂದ ನನಗೆ ಸಂತಸವಾಗಿದೆ. ನಿನ್ನ
ನಡತೆ ನನಗೆ ಮೆಚ್ಚಿಗೆಯಾಗಿದೆ. ಸಂಪ್ರದಾಯದಂತೆ ನೀನು ಯುವರಾಜ
ಪದವಿಯ ಹೊಣೆಯನ್ನು ಹೊರಬೇಕು."