This page has been fully proofread once and needs a second look.

ಸಂಗ್ರಹರಾಮಾಯಣ
 
೨೩೩
 
'ನನ್ನದು' ಎನ್ನುವ ಹಮ್ಮು ನಿಮ್ಮ ಬಳಿ ಸುಳಿಯದಿರಲಿ, ವಿಷಯ- ದ ಬಲೆಗೆ
ಬೀಳುವ ಜನರು ಗಾಳದ ಮಾಂಸಕ್ಕಾಗಿ ಹಾರುವ ಮಾಮೀನಿನಂತೆ ಅಪಾಯವನ್ನೆ
ಸ್ವಾಗತಿಸುತ್ತಿರುತ್ತಾರೆ ಎನ್ನುವ ವಿಷಯ ತಿಳಿದಿರಲಿ.
 

 
ಸಂಗರಹಿತರಾಗಿ ಬಾಳಬೇಕು. ಭಗವಂತನ ಪದವನ್ನು ನೆನೆವುದಕ್ಕಾಗಿ
ಬಾಳಬೇಕು. ದೊರಕಿದುದಷ್ಟೆ ನಮ್ಮದು ಎಂದು ಸಂತಸ ತಾಳಬೇಕು. ಇಂಥ
ವರ ಬಾಳು ಸೂರ್ಯನಂತೆ ಉಜ್ವಲ ವಾಗಿರುತ್ತದೆ. ಅಂಥವರಿಂದ ಮಳೆ
ಬೆಳೆಗಳು; ಅಂಥವರಿಂದ ಇಹ-ಪರಗಳು, ಅಂಥವರ ಬಾಳು ಧನ್ಯ! ಅಂಥವ
ರನ್ನು ಪಡೆದ ನಾಡು ಧನ್ಯ !"
 
*
 
*
 

 
ಕೆಲ ದಿನಗಳುರುಳಿದವು. ಅಭಿಷೇಕಕ್ಕೆಂದು ಬಂದಿದ್ದ ವಿದೇಹ-ಕೇಕಯ
ಮೊದಲಾದ ದೇಶಗಳ ಅರಸರನ್ನು ರಾಮಚಂದ್ರನು ಗೌರವಿಸಿ ಕಳಿಸಿಕೊಟ್ಟನು.

 
ಒಮ್ಮೆ ರಾಮಚಂದ್ರನು ಬಳಿಯಲ್ಲಿದ್ದ ಹನುಮಂತನನ್ನೂ-ಸುಗ್ರೀವ
ವಿಭೀಷಣಾದಿಗಳನ್ನೂ ಕರೆದು ಪ್ರಸ್ತಾವಿಸಿದನು:
 
CG
 

 
"
ನೀವು ನನಗೆ ಮಾತು-ಮೈ-ಮನಗಳಿಂದ ಸಹಕರಿಸಿದ್ದೀರಿ. ಅದರಿಂದ
ನನ್ನ ದಾಸ್ಯದ ಭಾಗ್ಯ ನಿಮಗೆ ದೊರಕಿದೆ. ಪರಮ ಪದವಿಯನ್ನು ಪಡೆಯುವ
ಪುಣ್ಯವೂ ನಿಮ್ಮದಾಗಿದೆ.
 

 
ಭಕ್ತಾಗ್ರಣಿಯಾದ ಹನುಮಂತನಿಗೆ ನಾನು ಏನು ಕೊಟ್ಟರೂ ಕಡಮಿಡಿಮೆಯೆ.
ಅವನು ಮಾಡಿದ ಸೇವೆಯ ಮುಂದೆ ಮೋಕ್ಷವೂ ಸಣ್ಣದು: ಅವನು ನನ್ನ
ಸಹಭೋಗವನ್ನು ಪಡೆವ ಭಾಗ್ಯಶಾಲಿ ಯಾಗುವನು. ಇಷ್ಟೇ ಅಲ್ಲ ಹನುಮನ್,
ಇನ್ನೂ ಏನನ್ನಾದರೂ ನೀನು ಬಯಸುವೆಯಾದರೆ ಅದನ್ನೂ ಪಡೆಯುವೆ"
ಎಂದು ತನ್ನ ಕಂಠದಿಂದ ಅಮೂಲ್ಯಹಾರವೊಂದನ್ನು ತೆಗೆದು ಹನುಮಂತನ

ಕೊರಳಿಗೆ ತೊಡಿಸಿದನು. ಹನುಮಂತನು ನಮ್ರವಾಗಿ ನಿವೇದಿಸಿ ಕೊಂಡನು:
 
66
 

 
" ನನಗೆ ನಿನ್ನ ಮೇಲೆ ಭಕ್ತಿ-ನಿನಗೆ ನನ್ನ ಮೇಲೆ ಪ್ರೀತಿ ಇವೆರಡೂ
ಅನ್ನೋ
ಅನ್ಯೋನ್ಯವಾಗಿ ಬೆಳೆಯುತ್ತಿರಲಿ. ನಾನು ನಿನ್ನ ಚರಣ ಕಮಲಗಳಲ್ಲಿ ಬೇಡಿ
ಕೊಳ್ಳುವುದು ಇಷ್ಟೆ. '
 

 
ರಾಮಚಂದ್ರನು ಸಂತಸದಿಂದ ಹನುಮಂತನನ್ನು ಲಂಗಿಸಿದನು.
ಸುಗ್ರೀವ-ವಿಭೀಷಣಾದಿಗಳಿಗೂ ಅಮೂಲ್ಯ ವಸ್ತ್ರಾಭರಣಗಳನ್ನಿತ್ತು ಸತ್ಕರಿಸಿ