This page has been fully proofread once and needs a second look.

ಮಿಂಚಿನಬಳ್ಳಿ
 
ಪ್ರಜೆಗಳಿಗಂತೂ ರಾಮಚಂದ್ರನ ಅಭಿಷೇಕದ ಸಂತಸದಲ್ಲಿ ಆ ಮ
ಹೋತ್ಸವವನ್ನು ಬಣ್ಣಿಸುವ ಭರದಲ್ಲಿ ಕತ್ತಲಾದುದೂ ಗೊತ್ತಿಲ್ಲ; ಬೆಳಗಾದುದೂ
ಗೊತ್ತಿಲ್ಲ ! ರಾತ್ರಿಯೇ ಮುಗಿಯಿತಾಗಲಿ ಅವರ ಮಾತು ಮುಗಿಯಲಿಲ್ಲ !
ಮೂಡಣ ಬಾನಿನ ಮೇಲೆ ಉಷೆ ಕೆಂಪು ಚೆಲ್ಲಿದಳು.
 

 
ಬಂದಿಗಳು ಅಂತಃಪುರದಲ್ಲಿ ಭಗವಂತನನ್ನು ಎಚ್ಚರಿಸಲು ಹಾಡತೊಡ
 
ಗಿದರು :
 

 
"ಮಹಾರಾಜ, ಹಕ್ಕಿಗಳು ಎದ್ದು ಹಾಡತೊಡಗಿವೆ. ಮುತ್ತೈದೆಯರು
ಯರು ಪತಿಯ ಹಿತವಾದ ತೋಳಸೆರೆಯನ್ನು ಬಿಡಿಸಿಕೊಂಡು ಏಳುತ್ತಿದ್ದಾರೆ. ಕತ್ತಲು
ಬೆಳಕಿನಲ್ಲಿ ಲಯವಾಗುತ್ತಿದೆ. ಕುಮುದಗಳ ಸಂತಸವನ್ನು ಕದ್ದು ಚಂದ್ರನು
ಮುಳುಗುತ್ತಿದ್ದಾನೆ. ಈಗ ತಾವರೆಗಳ ಜತೆಗೆ ನಿನ್ನ ಕಣ್ದಾವರೆಗಳು ಅರ
ಳುವ ಕಾಲ, ನಿನಗೆ ಸುಪ್ರಭಾತವಾಗಲಿ. ಎಚ್ಚರು ದೇವ, ಎಚ್ಚರು."
 

 
ರಾಮಚಂದ್ರನು ಎದ್ದು ಕುಳಿತೊಡನೆ ಸೇವಕರು ಬಂಗಾರದ ಕೊಡಗಳಲ್ಲಿ
ನೀರನ್ನು ಸಿದ್ಧಗೊಳಿಸಿದರು. ನಿತ್ಯನಿರ್ಮಲನಾದ ಭಗವಂತನು ಪ್ರಾತಃಶೌಚ
ಗಳನ್ನು ತೀರಿಸಿದನು. ಸ್ನಾನ, ಸಂಧ್ಯಾವಂದನೆ, ಅಗ್ನಿ ಕಾರ್ಯಗಳನ್ನೂ
ಮುಗಿಸಿಯಾಯಿತು. ದೂತರು ಬಂದು ರಾಜಭೂಷಣಗಳನ್ನು ತೊಡಿಸಿದರು.
ಹಣೆಗೆ ತಿಲಕವಿಟ್ಟರು. ಮೈಗೆ ಚಂದನ ಬಳಿದರು. ರಾಮಚಂದ್ರನು ಪೂಜಾ
ಮಂದಿರದಿಂದ ಸಭಾಭವನಕ್ಕೆ ತೆರಳಿದನು. ಸೂರ್ಯನೂ ಅಷ್ಟರಲ್ಲಿ ಉದಯಾದಿ
ದ್ರಿಯಿಂದ ಮುಗಿಲಿಗೇರಿದ್ದನು.
 

 
ಬಂಗಾರದ ಪೀಠದಲ್ಲಿ ರಾಮಚಂದ್ರನು ಕುಳಿತುಕೊಂಡನು. ಲಕ್
ಷ್ಮಣಾದಿಗಳು-ಕಪಿಗಳು-ರಾಕ್ಷಸರು ಪಕ್ಕದಲ್ಲಿ ಕುಳಿತುಕೊಂಡರು. ಸುತ್ತ
ಸಾಮಂತರಾಜರೂ ಆಸನಾತರಾದರು.
 
ಸೀನರಾದರು.
 
ವಸಿಷ್ಠಾದಿಗಳು ಸಭೆಗೆ ಚಿತ್ತೈಸಿದಾಗ ರಾಮಚಂದ್ರನೇ ಎದ್ದು ಬಂದು
ಅವರನ್ನು ಉಚಿತಾಸನದಲ್ಲಿ ಕುಳ್ಳಿರಿಸಿದನು. ಅನಂತರ ರಾಮಚಂದ್ರನು ತಾನು
ರಾಜ್ಯಸೂತ್ರವನ್ನು ಕೈಗೆ ತೆಗೆದುಕೊಂಡ ಮೇಲೆ ಮೊದಲ ಭಾಷಣವನ್ನು
 
ಮಾಡಿದನು :
 

 
"ನನ್ನ ಪ್ರೀತಿಯ ಪ್ರಜೆಗಳೆ, ನಾನು ನಿಮಗೆ ಹೇಳಬೇಕಾದುದಿಷ್ಟೆ.

ಶಾಸ್ತ್ರದ ಮೇಲೆ ನಂಬುಗೆಯಿರಲಿ, ಧರ್ಮದ ಮೇಲೆ ಒಲವಿರಲಿ, 'ನಾನು'