This page has been fully proofread once and needs a second look.

ಉತ್ತರಕಾಂಡ
 

 
ಬಂದ ಅತಿಥಿಗಳು ಮರಳಿದರು
 

 
ಸೀತಾ-ರಾಮರು ಸಿಂಹಾಸನದಲ್ಲಿ ಕುಳಿತಿದ್ದಾಗ ಸಂತುಷ್ಟರಾದ ಋಷಿ
ಗಳು ಗುಣಗಾನ ಮಾಡಿದರು. ದಂಡಹಸ್ತನಾದ ಕಂಚುಕಿಯು " ಋಷಿಗಳು
ಮಾತನಾಡುತ್ತಿದ್ದಾರೆ. ಜನ ಮೌನದಿಂದ ಆಲಿಸ- ಬೇಕು " ಎಂದು ನಿವೇದಿಸಿದನು.
ಅಗಸ್ಯರು ಎದ್ದು ನಿಂತು ನುಡಿಯತೊಡಗಿದರು:
 

 
" ರಾಮಚಂದ್ರ, ನಿನ್ನ ಅನುಗ್ರಹದಿಂದ ಸಜ್ಜನರಿಗೆ ಮಂಗಳ ವಾಗಲಿ
ಓ ಪ್ರಭುವೆ, ಓ ರಘುವಂಶದ ನಂದಾದೀಪವೆ, ನಿನ್ನ ಕೀರ್ತಿಯನ್ನು ಕೊಂಡಾ
ಡಲು ಹನುಮಂತ ಬಲ್ಲ; ಚತುರಾನನ ಬಲ್ಲ. ನಮಗೆಲ್ಲಿ ಆ ಶಕ್ತಿ?
 

 
ಸುಮಾಲಿ-ಮಾಲಿ ಮೊದಲಾದ ರಕ್ಕಸರನ್ನು ಮೂಲ ರೂಪ- ದಿಂದಲೆ
ಸಂಹರಿಸಿದೆ. ರಾಮನಾಗಿ ಅವತರಿಸಿ ರಾವಣನನ್ನು ಕೊಂದೆ. ನಿನ್ನಿಂದ
ಜಗತ್ತು ನೆಮ್ಮದಿಯ ಉಸಿರೆಳೆವಂತಾಗಿದೆ.
 

 
ಜಗನ್ನಾಥನಾದ ನೀನು ನಮ್ಮ ಮೇಲೆ ದಯೆ ತೋರದಿದ್ದರೆ ಇನ್ನಾರಿಗೆ
ರಾಕ್ಷಸರನ್ನು ಕೊಲ್ಲಲು ಸಾಧ್ಯ ? ಕಗ್ಗತ್ತಲೆ ಅಳಿಯ- ಬೇಕಾದರೆ ಸೂರ್ಯನೇ
 
ಉದಿಸಬೇಕು."
 

 
ಎಲ್ಲ ಮಹರ್ಷಿಗಳೂ ಮನದಣಿಯೆ ಭಗವಂತನನ್ನು ಕೊಂಡಾಡಿದರು.
ರಾಮಚಂದ್ರನು ಎಲ್ಲರನ್ನೂ ಗೌರವಿಸಿ ಯಜ್ಞ ಕಾರ್ಯಗಳಿಗಾಗಿ ಬೀಳ್ಕೊಟ್ಟನು.
ಹೊತ್ತು ಮುಳುಗುವುದರಲ್ಲಿತ್ತು. ರಾಮಚಂದ್ರನು ಸಂಧ್ಯಾವಂದನೆಗೆಂದು
ಅಂತಃಪುರವನ್ನು ಪ್ರವೇಶಿಸಿದನು.
 

 
ಸಂಧ್ಯಾವಂದನೆಯ ನಂತರ ಅಮೃತತುಲ್ಯವಾದ ರಾಜ- ಭೋಜನವಾ
ಯಿತು. ಹಾಲ್ನೊರೆಯಂತೆ ಬಿಳುಪಾದ ನವುರಾದ ಹಾಸುಗೆ ಸಜ್ಜೆನೆಯಲ್ಲಿ
ಸಿದ್ಧವಾಗಿತ್ತು. ಹಾವಿನ ಮೇಲೆ ಮಲಗುವ ಹರಿ ಹಾಸುಗೆಯಲ್ಲೊರಗಿದನು !
 

 
ನಿತ್ಯ ಮುಕ್ತನಾದ ರಾಮಚಂದ್ರನನ್ನು ಸೀತೆ ತೋಳುಗಳಿಂದ ಬಂಧಿಸಿ
ದಳು; ರಜೋವಿದೂರನನ್ನು ರಂಜಿಸಿದಳು; ಆತ್ಮಾರಾಮನನ್ನು ತನ್ನ
*
- ನನ್ನು ತನ್ನ ನಲುಮೆಯ ಬಗೆಗಳಿಂದ ರಮಿಸಿದಳು.