This page has not been fully proofread.

ಉತ್ತರಕಾಂಡ
 
ಬಂದ ಅತಿಥಿಗಳು ಮರಳಿದರು
 
ಸೀತಾ-ರಾಮರು ಸಿಂಹಾಸನದಲ್ಲಿ ಕುಳಿತಿದ್ದಾಗ ಸಂತುಷ್ಟರಾದ ಋಷಿ
ಗಳು ಗುಣಗಾನ ಮಾಡಿದರು. ದಂಡಹಸ್ತನಾದ ಕಂಚುಕಿಯು "ಋಷಿಗಳು
ಮಾತನಾಡುತ್ತಿದ್ದಾರೆ. ಜನ ಮೌನದಿಂದ ಆಲಿಸಬೇಕು" ಎಂದು ನಿವೇದಿಸಿದನು.
ಅಗಸ್ಯರು ಎದ್ದು ನಿಂತು ನುಡಿಯತೊಡಗಿದರು:
 
"ರಾಮಚಂದ್ರ, ನಿನ್ನ ಅನುಗ್ರಹದಿಂದ ಸಜ್ಜನರಿಗೆ ಮಂಗಳವಾಗಲಿ
ಓ ಪ್ರಭುವೆ, ಓ ರಘುವಂಶದ ನಂದಾದೀಪವೆ, ನಿನ್ನ ಕೀರ್ತಿಯನ್ನು ಕೊಂಡಾ
ಡಲು ಹನುಮಂತ ಬಲ್ಲ; ಚತುರಾನನ ಬಲ್ಲ. ನಮಗೆಲ್ಲಿ ಆ ಶಕ್ತಿ?
 
ಸುಮಾಲಿ-ಮಾಲಿ ಮೊದಲಾದ ರಕ್ಕಸರನ್ನು ಮೂಲ ರೂಪದಿಂದಲೆ
ಸಂಹರಿಸಿದೆ. ರಾಮನಾಗಿ ಅವತರಿಸಿ ರಾವಣನನ್ನು ಕೊಂದೆ. ನಿನ್ನಿಂದ
ಜಗತ್ತು ನೆಮ್ಮದಿಯ ಉಸಿರೆಳೆವಂತಾಗಿದೆ.
 
ಜಗನ್ನಾಥನಾದ ನೀನು ನಮ್ಮ ಮೇಲೆ ದಯೆ ತೋರದಿದ್ದರೆ ಇನ್ನಾರಿಗೆ
ರಾಕ್ಷಸರನ್ನು ಕೊಲ್ಲಲು ಸಾಧ್ಯ ? ಕಗ್ಗತ್ತಲೆ ಅಳಿಯಬೇಕಾದರೆ ಸೂರ್ಯನೇ
 
ಉದಿಸಬೇಕು."
 
ಎಲ್ಲ ಮಹರ್ಷಿಗಳೂ ಮನದಣಿಯೆ ಭಗವಂತನನ್ನು ಕೊಂಡಾಡಿದರು.
ರಾಮಚಂದ್ರನು ಎಲ್ಲರನ್ನೂ ಗೌರವಿಸಿ ಯಜ್ಞ ಕಾರ್ಯಗಳಿಗಾಗಿ ಬೀಳ್ಕೊಟ್ಟನು.
ಹೊತ್ತು ಮುಳುಗುವುದರಲ್ಲಿತ್ತು. ರಾಮಚಂದ್ರನು ಸಂಧ್ಯಾವಂದನೆಗೆಂದು
ಅಂತಃಪುರವನ್ನು ಪ್ರವೇಶಿಸಿದನು.
 
ಸಂಧ್ಯಾವಂದನೆಯ ನಂತರ ಅಮೃತತುಲ್ಯವಾದ ರಾಜಭೋಜನವಾ
ಯಿತು. ಹಾಲ್ನೊರೆಯಂತೆ ಬಿಳುಪಾದ ನವುರಾದ ಹಾಸುಗೆ ಸಜ್ಜೆ ವನೆಯಲ್ಲಿ
ಸಿದ್ಧವಾಗಿತ್ತು. ಹಾವಿನ ಮೇಲೆ ಮಲಗುವ ಹರಿ ಹಾಸುಗೆಯಲ್ಲೊರಗಿದನು !
 
ನಿತ್ಯ ಮುಕ್ತನಾದ ರಾಮಚಂದ್ರನನ್ನು ಸೀತೆ ತೋಳುಗಳಿಂದ ಬಂಧಿಸಿ
ದಳು; ರಜೋವಿದೂರನನ್ನು ರಂಜಿಸಿದಳು; ಆತ್ಮಾರಾಮನನ್ನು ತನ್ನ
*ನಲುಮೆಯ ಬಗೆಗಳಿಂದ ರಮಿಸಿದಳು.