This page has been fully proofread once and needs a second look.

ಸಂಗ್ರಹರಾಮಾಯಣ
 
ಎಂದು ಜನ ಕೊಂಡಾಡಿದರು. ರಾಮಚಂದ್ರನ ಮಂದಹಾಸವೇ ಅದಕ್ಕೆ
ಉತ್ತರವಾಯಿತು.
 

 
ಸಾವಿರಾರು ಗೋವುಗಳನ್ನೂ ಅಪಾರವಾದ ಬೆಳ್ಳಿ-ಬಂಗಾರ ವನ್ನೂ
ವಿಪ್ರರಿಗೆ ದಾನವಾಗಿ ರಾಮಚಂದ್ರನು ಕೊಟ್ಟನು. ಅಮೂಲ್ಯಗಳಾದ ಒಡವೆ
ತೊಡವೆಗಳನ್ನು ರಾಮಚಂದ್ರನು ಸಂತಸದ ಕೊಡುಗೆಯಾಗಿ ಸೀತೆಗೆ ಒಪ್ಪಿಸಿದನು.
ಹಾಗೆಯೇ ಕಪಿಗಳಿಗೂ ರಾಕ್ಷಸರಿಗೂ ಸಮೃದ್ಧವಾದ ಸಂಭಾವನೆ ದೊರಕಿತು.
 

 
ಸೀತೆಯ ಮೈತುಂಬ ಬಂಗಾರ, ನಿಸರ್ಗಸುಂದರಿಯಾದ ಆಕೆಗೆ ಬಂಗಾರ
ಗಳಿಂದೇನು ? ಚಿನ್ನದಿಂದ ಆಕೆಗೆ ಚೆಲುವಲ್ಲ. ಅವಳಿಂದ ಚಿನ್ನಕ್ಕೆ ಚೆಲುವು.
ಸೀತೆ ತಾನು ತೊಟ್ಟಿರುವ ಆಭರಣಗಳಲ್ಲಿ ಅತ್ಯುತ್ತಮವಾದ ಹಾರವೊಂದನ್ನು
ಕೈಯಲ್ಲಿ ಹಿಡಿದುಕೊಂಡು ರಾಮಚಂದ್ರನೆಡೆಗೆ ದಿಟ್ಟಿಸಿದಳು.
 

 
ಒಮ್ಮೆ ತನ್ನೆಡೆಗೆ ಒಮ್ಮೆ ಸರದೆಡೆಗೆ ದೃಷ್ಟಿ ಬೀರಿ ನಸುನಗು- ತ್ತಿರುವ
ಸೀತೆಯ ಇಂಗಿತ ರಾಮನಿಗೆ ತಿಳಿಯಿತು. ಅವನೂ ಜಾನಕಿ ಯೆಡೆಗೆ ಕುಡಿ-
ನೋಟವನ್ನು ಬೀರಿ ನುಡಿದನು:
 
(C
 

 
"
ಸಾಧಿಧ್ವಿ, ಬ್ರಹ್ಮಚರ್ಯಾದಿ ಸದ್ಗುಣಗಳಲ್ಲಿ , ಶಾಸ್ತ್ರ ಪಾಂಡಿತ್ಯದಲ್ಲಿ
ಯಾರನ್ನು ಮಾ
ದಲ್ಲಿ ಯಾರನ್ನು ಮೀರಿಸುವವ ಇನ್ನಿಲ್ಲವೋ ಅಂಥವನಿಗೆ ಈ ಸರವನ್ನು ಉಡುಗರೆ
ಯಾಗಿ ಕೊಡು.
 

 
ಸುಂದರಿ, ಯಾರ ಪರಾಕ್ರಮ ನಿನಗೆ ಮೆಚ್ಚಿಗೆಯಾಗಿದೆಯೋ, ಯಾರ
ಪರಾಕ್ರಮ ತ್ರಿಭುವನದಲ್ಲಿ ಅಪೂರ್ವವಾಗಿದೆಯೋ ಅಂಥವನು ಈ ಸರವನ್ನು
ಪಡೆಯುವ ಭಾಗ್ಯಶಾಲಿಯಾಗಲಿ.
 

 
ಯಾರು ನನಗೆ ಹೆಚ್ಚು ಮೆಚ್ಚಿನವರು ಎಂದು ನೀನು ಬಲ್ಲೆ ಯೋ
, ಯಾರ ಸಾಹಸ ಸೇವೆಗಳು ನಿನ್ನನ್ನು ಮೆಚ್ಚಿಸಿವೆಯೋ ಅಂಥ ಮಹಾನುಭಾವ-
ನಿಗೆ ಈ ಪ್ರೀತಿಯ ಉಪಹಾರ ದೊರೆಯಲಿ,. "
 

 
ಸೀತೆ ಹನುಮಂತನೆಡೆಗೆ ನೋಡಿ ಮುಗುಳುನಕ್ಕಳು. ಇತರರಿಗೆ

ದುರ್ಲಭವಾದ ತಾಯಿಯ ಅನುಗ್ರಹದ ಹಾರ ಹನುಮಂತನ ಕತ್ತಿನಲ್ಲಿ ವಿರಾಜಿ
ಸಿತು ! ಮಾರುತಿಯ ಎದೆಯಲ್ಲಿ ಇಳಿದುಬಂದ ಹಾರ ಹಿಮಶಿಖರದಿಂದ
ಧುಮ್ಮಿಕ್ಕುವ ಭಾಗೀರಥಿಯಂತೆ ಕಾಣಿಸಿತು !