2023-03-15 15:36:03 by ambuda-bot
This page has not been fully proofread.
ಮಿಂಚಿನಬಳ್ಳಿ
ಜಗತ್ಪತಿ ಅಯೋಧ್ಯಾಪತಿಯಾದನು
ಮೂಡುದಿಸೆಯಲ್ಲಿ ಭಾನುದೇವ ಕಾಣಿಸಿಕೊಂಡನು. ಬ್ರಾಹ್ಮಣರು
ಸ್ವಸ್ತಿ ವಾಚನವನ್ನು ಗೈದರು. ರಾಮಚಂದ್ರನು ಅಭಿಷೇಕ ಮಂಟಪಕ್ಕೆ ತೆರಳಿ-
ದನು. ಮಂತ್ರತಂತ್ರಗಳಲ್ಲಿ ಕೋವಿದರಾದ ವಸಿಷ್ಠಾದಿಗಳು ಮಣಿಖಚಿತವಾದ
ಸಿಂಹಾಸನದಲ್ಲಿ ರಾಮಭದ್ರನನ್ನು ಕುಳ್ಳಿರಿಸಿದರು.
ಬೆಡಗಿ ಸೀತೆ ಮೆಲುನಡೆಯಿಂದ ರಾಜಾಸನದ ಬಳಿ ಸಾರಿ ನಸು ನಾಚುಗೆ
ಯಿಂದ ತಲೆಬಾಗಿ ನಿಂತಳು. ರಾಮಚಂದ್ರ ಅವಳನ್ನು ಕೈ ಹಿಡಿದು ತನ್ನ
ಪಕ್ಕದಲ್ಲಿ ಕುಳ್ಳಿರಿಸಿಕೊಂಡನು. ಭಗವಂತನ ಅರ್ಧಾಸನವನ್ನು ಪಡೆವ ಭಾಗ್ಯ
ಸೀತೆಗಲ್ಲದೆ ಇನ್ನಾರಿಗಿದೆ ?
ಭಾನು ಬೆಳಕುಗಳಂತೆ, ಚಂದ್ರು-ಚಂದ್ರಿಕೆಗಳಂತೆ ಸೀತಾ-ರಾಮರ ಮಿಲನ
ಸೊಗಯಿಸಿತು ಎಂದು ಕವಿಗಳು ಬಣ್ಣಿಸಿದರು. ಕವಿಗಳಿಗೆ ಬಣ್ಣಿಸುವ ಚಪಲ
ಅವರು ಎಲ್ಲ ಬಣ್ಣನೆಯಲ್ಲಿ ಉಪಮಾನದ ಮೆರುಗನ್ನು ಬೆರೆಸಿ ತಮ್ಮ ನಾಲಿ
ಗೆಯ ತೀಟೆಯನ್ನು ಪರಿಹರಿಸಿಕೊಳ್ಳುತ್ತಾರೆ ! ನಿಜ ಹೇಳುವುದಾದರೆ ಅಸದೃಶ
ನಾದ ಭಗವಂತನ ದಾಪಂತ್ಯಕ್ಕೆ ಉಪಮಾನವೆಂಥದು ? ಮಾತಿಗೆ ನಿಲುಕದ
ಭಗವತ್ತತ್ವದ ದಾಂಪತ್ಯವನ್ನು ಯಾವ ಮಾತಿನಿಂದ ಬಣ್ಣಿಸಬೇಕು ? "ಯತೋ
ವಾಚೋ ನಿವರ್ತಂತೇ."
ಗುಗ್ಗಳ-ಗಂಧಗಳ ಲೋಬಾನದ ನರುಗಂಪು ಸುತ್ತ ಹರಡಿತ್ತು. ಮೃದಂಗ
ಭೇರಿ, ಪಟಹ, ಶಂಖ ಮೊದಲಾದ ವಾದ್ಯಗಳ ಮೊಳಗು-ವೀಣೆ, ಕೊಳಲುಗಳ
ಇಂಚರ ಇವುಗಳ ತುಮುಲದಲ್ಲಿ ಉಳಿದ ಸದ್ದುಗಳು ತಲೆ ಮರಸಿಕೊಂಡವು.
ಗಂಧರ್ವರು ಹಾಡಿದರು. ಅಪ್ಸರೆಯರು ಕುಣಿದರು.
ವಸಿಷ್ಠನನ್ನು ಮುಂದಿರಿಸಿಕೊಂಡು ಎಲ್ಲ ಮಹರ್ಷಿಗಳೂ ರತ್ನಖಚಿತ
ವಾದ ಬಂಗಾರದ ಕೊಡದಲ್ಲಿ ತುಂಬಿದ ತೀರ್ಥ ಸಲಿಲಗಳನ್ನು ರಾಮನ ಮೇಲೆ
ಸುರಿದರು. ಭಗವದಭಿಷೇಕದ ಭಾಗ್ಯದಲ್ಲಿ ಎಲ್ಲ ಋಷಿಗಳೂ ಪಾಲುಗೊಂಡರು.
(6
ಶತ್ರುಘ್ನನು ಬಂಗಾರದ ಹಿಡಿಯ ಬೆಳ್ಕೊಡೆಯನ್ನು ಹಿಡಿದನು. ಸುಗ್ರೀ
ವನೂ-ವಿಭೀಷಣನೂ ಪಾರ್ಶ್ವದಲ್ಲಿ ಚಾಮರಗ್ರಾಹಿಗಳಾದರು.
ಕೋಸಲದ ಅರಸುಮಾತ್ರವೇ ಅಲ್ಲ; ಭೂಮಂಡಲಕ್ಕೆ ಇವನು ನಾಥ
ಇವನು