This page has not been fully proofread.

ಸಂಗ್ರಹರಾಮಾಯಣ
 
06
 
ಸುಂದರಿಯರಿಂದ ಪ್ರಲೋಭನಗೊಳಿಸಿ ಋಷ್ಯಶೃಂಗನನ್ನು ಅಲ್ಲಿಗೆ ಕರೆತರಿಸಿದಾಗ
ಅಲ್ಲಿ ಮಳೆಯೂ ಬೆಳೆಯೂ ಉಂಟಾಗುವುದು. ಎಸಗಿದ ಉಪಕಾರಕ್ಕೆ ಮೂಲ್ಯ
ವೆಂಬಂತೆ ಲೋಮಪಾದನು ತನ್ನ ಮಗಳಾದ ಶಾಂತೆಯನ್ನು ಋಷ್ಯಶೃಂಗನಿಗೆ
ಧಾರೆಯೆರೆಯುವನು. ಮುಂದೆ ದಶರಥನೆಂಬ ರಾಜ ಕೂಡ ಇದೇ ಋಷ್ಯಶೃಂಗ
ನಿಂದ ಯಾಗ ಮಾಡಿಸಿ, ಶ್ರೀಹರಿಯನ್ನೆ ಮಗನನ್ನಾಗಿ ಪಡೆಯುವನು. ರಾಮ-
ಭದ್ರನ ಯಶಶ್ಚಂದ್ರಿಕೆ ಲೋಕದ ತಮಸ್ಸನ್ನು ತೊಡೆದು ಪಾವನಗೊಳಿಸುವುದು?
ಇದು ಸನತ್ತು ಮಾರನು ನುಡಿದ ದೇವಗುಹ್ಯ. ಆದ್ದರಿಂದ ರಾಜನ್, ಲೋಮ-
ಪಾದನ ಅರಮನೆಯಿಂದ ಋಷ್ಯಶೃಂಗ ಮಹರ್ಷಿಯನ್ನು ಬರಿಸು."
 
ಸುಮಂತನ ಮಾತನ್ನಾಲಿಸಿದ ದಶರಥನು, ಕುಲಪುರೋಹಿತರಾದ
ವಸಿಷ್ಠರ ಅಪ್ಪಣೆ ಪಡೆದು ತಾನೇ ಹೋಗಿ ಮಹರ್ಷಿ ಋಷ್ಯಶೃಂಗನನ್ನು ಕರೆ
ತಂದನು. ಯಜ್ಞದ ಪ್ರಾರಂಭವೂ ಆಯಿತು. ಭೂಮಂಡಲವನ್ನು ಸುತ್ತುವರಿದ
ವಿಜಯಾಶ್ವ, ಮರಳಿ ಬಂದುದೂ ಆಯಿತು. ಸರಯೂ ನದಿಯ ಉತ್ತರ
ತೀರದಲ್ಲಿ ಯಾಗ ಭೂಮಿಯ ರಚನೆಯೂ ಪೂರ್ಣವಾಯಿತು. ಕರ್ಮಕಾಂಡ
ದಲ್ಲಿ ಪಂಡಿತರಾದ ವಸಿಷ್ಠ, ಋಷ್ಯಶೃಂಗರ ನೇತೃತ್ವದಲ್ಲಿ ಯಾಗವು ಸಾಂಗ
ವಾಯಿತು. ಯಜಮಾನ ದಶರಥ ಮಹಾರಾಜ, ಪುರೋಹಿತರು ಬ್ರಹ್ಮಪುತ್ರ
ರಾದ ಮಹರ್ಷಿ ವಶಿಷ್ಠ ಭಗವತ್ಪಾದರು ಮತ್ತು ಋಷ್ಯಶೃಂಗ ಮಹರ್ಷಿ, ರಾಮ
ಚಂದ್ರಮನ ಉದಯವೇ ಈ ಯಾಗದ ಫಲ. ಅಂಥ ಯಾಗವನ್ನು ಬಣ್ಣಿಸುವ
ಬಾಯಾದರೂ ಎಲ್ಲಿದೆ ?
 
ಮಹಾರಾಜ ದಶರಥನು ಪುರೋಹಿತರಿಗೆ, ಋತ್ವಿಜರಿಗೆ, ಹೇರಳವಾಗಿ
ಗೋವುಗಳನ್ನೂ ಬಂಗಾರವನ್ನೂ ಧಾರೆಯೆರೆದನು. 'ಶ್ರೀಹರಿ ಪ್ರಸನ್ನ
ನಾಗಲಿ' ಎಂದು ಎಲ್ಲ ವಿಪ್ರೋತ್ತಮರಿಗೂ ತಲೆವಾಗಿ ವಂದಿಸಿದನು. ಅಶ್ವಮೇಧ
ಯಾಗ ಮುಗಿದ ನಂತರ ಋಷ್ಯಶೃಂಗರು ಪುತ್ರಕಾಮೇಷ್ಟಿಯನ್ನು ಮಾಡಲು
ತೊಡಗಿದರು. ಯಾಗದ ಹವಿಸ್ಸನ್ನು ಸ್ವೀಕರಿಸಲು ಎಲ್ಲ ದೇವತೆಗಳೂ ಮೈವೆತ್ತು
ಬಂದಿದ್ದರು. ಹವಿಸ್ಸನ್ನೀಯುತ್ತಾ ದೇವತೆಗಳನ್ನು ಕುರಿತು ಮಹರ್ಷಿಗಳು
 
ಹೀಗೆಂದರು.
 
"ದಶರಥನು ಮಕ್ಕಳ ಹಂಬಲಿನಿಂದ ನಿಮಗೆ ಶರಣು ಬಂದಿದ್ದಾನೆ. ಅವನ
ಮೇಲೆ ದಯದೋರಿರಿ. ಮೂರು ಲೋಕಗಳಲ್ಲಿಯೂ ಅಸಮಾನರಾದ ಮಕ್ಕಳನ್ನು