This page has not been fully proofread.

ಮಿಂಚಿನಬಳ್ಳಿ
 
ಭರತನು ಪಾದುಕೆಗಳನ್ನು ರಾಮನ ಪಾದಗಳಿಗರ್ಪಿಸಿ ವಿನಂತಿಸಿ
ಕೊಂಡನು :
 
Esh
 
ರಾಮಭದ್ರ, ಈ ವರೆಗೆ ನಾನು ಪಾಲಿಸುತ್ತಿದ್ದ ನಿನ್ನ ರಾಜ್ಯವನ್ನು
ನಿನಗೇ ಒಪ್ಪಿಸಿದ್ದೇನೆ. ಈ ಕೋಶ, ಈ ಸೇನೆ, ನನ್ನ ಸಂಪತ್ತು ಮತ್ತು ನಾವೆ
ಲ್ಲರೂ ನಿನ್ನ ಆಜ್ಞಾನುವರ್ತಿಗಳು. ನಿನ್ನ ಅನುಗ್ರಹದಿಂದ ರಾಷ್ಟ್ರದ ಸಿರಿಯನ್ನು
ಹತ್ತು ಪಟ್ಟು ಬೆಳೆಸಿದ್ದೇನೆ."
 
ಭರತನ ಭಕ್ತಿ-ಸರಳತೆ-ನಿರ್ವ್ಯಾಜಪ್ರೇಮ ಇವನ್ನು ಕಂಡು ಕಪಿಗಳೂ
ರಾಕ್ಷಸರೂ ಅಚ್ಚರಿಯಿಂದ ಆನಂದಾಶ್ರುವನ್ನು ಸುರಿಸಿದರು. ರಾಮನು ಭರತ
ನನ್ನು ಹರಸಿ ಕುಲಗುರುಗಳಾದ ವಸಿಷ್ಠರನ್ನು ಪೂಜಿಸಿದನು.
 
ರಾಮನ ಆಜ್ಞೆಯಂತೆ ಪುಷ್ಪಕ ಕುಬೇರನಿದ್ದೆಡೆಗೆ ತೆರಳಿತು. ರಾಮ-
ಚಂದ್ರನು ಎಲ್ಲ ಪರಿವಾರದೊಡನೆ ಅರಮನೆಯ ಹೊರ ಮೈಯಲ್ಲಿರುವ ಉಪ
ವನಕ್ಕೆ ಬಂದನು. ಅನಂತರ ಭರತನು ಮತ್ತು ಸಕಲ ಪ್ರಜಾವರ್ಗದ ಬಯಕೆ
ಯಂತೆ ಸಾಮ್ರಾಜ್ಯ ಸಂಕೇತವಾದ ಸಿಂಹಾಸನವನ್ನು ಮಂಡಿಸಿದನು. ಆಗ
ಕಪಿಗಳೆಲ್ಲ ಮನುಷ್ಯರಂತೆ ಸರ್ವಾಂಗ ಸುಂದರವಾದ ರೂಪವನ್ನು ಧರಿಸಿದರು.
ಈ ಕಪಿಗಳೆಂದರೆ ಯೋಗ ಬಲವುಳ್ಳ ದೇವತೆಗಳಲ್ಲವೆ ?
 
ರಾಮ-ಲಕ್ಷ್ಮಣರನ್ನೂ ಕಪಿ-ರಾಕ್ಷಸರನ್ನೂ ಸ್ವಯಂ ಭರತ-ಶತ್ರುಘ್ನರೇ
ನಾನಾಭರಣಗಳನ್ನು ತೊಡಿಸಿ ಅಲಂಕರಿಸಿದರು. ಸೀತೆಯನ್ನು ಅಲಂಕರಿಸುವ
ಕೆಲಸವನ್ನು ದಶರಥ ಪತ್ನಿಯರೇ ವಹಿಸಿಕೊಂಡರು. ಕಪಿ ಸ್ತ್ರೀಯರನ್ನೆಲ್ಲ
ಕೌಸಲ್ಯಯೊಬ್ಬಳೆ ವಿವಿಧಾಭಾರಣಗಳಿಂದ ಅಲಂಕರಿಸಿದಳು. ಅಲಂಕೃತರಾದ
ಕಪಿಗಳೂ ಕಪಿ ಸ್ತ್ರೀಯರೂ ದೇವತೆಗಳಂತೆ ಸೊಗಯಿಸಿದರು.
 
ಪಟ್ಟಣದ ಹೆಂಗಳೆಯರೆಲ್ಲ ತಮ್ಮ ಅರಸಿ ಸೀತೆಗೂ ಕಪಿರಾಜನ ಮಡದಿಗೂ
ಉಪಾಯನವನ್ನು ತಂದರು. ಸಾಧಿಸೀತೆಯನ್ನು ಕಂಡವರ ಕಣ್ಣು ಆನಂದ
 
ದಿಂದ ಅರಳಿತು.
 
ಪಟ್ಟಾಭಿಷೇಕದ ಕುರಿತು ಮಂತ್ರಾಲೋಚನೆ ನಡೆಯಿತು. ಸುಮಂತ್ರ
ರಥವನ್ನು ಸಜ್ಜುಗೊಳಿಸಿದನು. ರಾಮಚಂದ್ರ ಸೀತೆಯೊಡನೆ ರಥವನ್ನೇರಿದನು.
ಹನುಮಂತನೂ ಸುಗ್ರೀವನೂ ಆನೆಯ ಮೇಲೇರಿ ರಾಮನ ಬೆಂಬಳಿಯ ನಡೆದರು.
ಉಳಿದ ಕಪಿಗಳೂ ರಾಕ್ಷಸರೂ ಆನೆಗಳನ್ನೋ ಕುದುರೆಗಳನ್ನೋ ಏರಿಬಂದರು.