This page has been fully proofread once and needs a second look.

ಸಂಗ್ರಹರಾಮಾಯಣ
 
ಓ ಅಲ್ಲಿ ದೂರದ ಆಕಾಶದಲ್ಲಿ ಪುಷ್ಪ ಕಾಣಿಸುತ್ತಿಲ್ಲವೆ ? ರಾಮ ದೂತ
ರಾದ ಕಪಿಗಳ ಕೋಲಾಹಲ ಕೇಳಿಸುತ್ತಲಿಲ್ಲವೆ ? ನೋಡಲ್ಲಿ ವಿಮಾನದ
ನಡುವೆ ರಾಮಚಂದ್ರ ಕುಳಿತಿದ್ದಾನೆ. ಅವನ ತೊಡೆಯ ಮೇಲೆ ಮುಗುಳು-
ನಗೆಯ ಸುಂದರಿ ಸೀತೆ ಕುಳಿತಿದ್ದಾಳೆ. ಬಳಿಯಲ್ಲಿ ಲಕ್ಷ್ಮಣ ನಿಂತಿದ್ದಾನೆ.
ಸುಗ್ರೀವ-ವಿಭೀಷಣರಿದ್ದಾರೆ. ನೋಡು ಭರತ."
 
9.98
 

 
ಗುರೂಪದೇಶದಿಂದ ಶಿಷ್ಯನಿಗೆ ಭಗವದ್ದರ್ಶನವಾಗುವಂತೆ ಭರತನಿಗೆ
ಮಾರುತಿಯ ವಾಣಿಯಿಂದ ರಾಮನ ದರ್ಶನ- ವಾಯಿತು. ಮುಗುಳುನಗೆಯ
ಬೆಳುದಿಂಗಳನ್ನು ಬೀರುವ ಪೂರ್ಣ ಚಂದ್ರನನ್ನು ಕಂಡು ನಿಂತಲ್ಲಿ ತಲೆಬಗ್ಗಿಸಿ
ನಮಸ್ಕರಿಸಿದನು. ಊರೆಲ್ಲ ಗುಲ್ಲು, ಎಲ್ಲರ ಬಾಯಲ್ಲು ಒಂದೇ ಸೊಲ್ಲು:
 

 
"
ರಾಮಚಂದ್ರ ಬಂದಿದ್ದಾನೆ. ಸೀತೆಯ ನಾಥ ಬಂದಿದ್ದಾನೆ. ರಾವಣ-
ನನ್ನು ಕೊಂದ ನಮ್ಮರಸು ಬಂದಿದ್ದಾನೆ. ಬನ್ನಿ, ನಮ್ಮ ರಾಜನನ್ನು ನೋಡ
ಬನ್ನಿ."
 

 
ಮುಪ್ಪಿನ ಜನವೂ ಹರೆಯದ ಹುಮ್ಮಸಿನಿಂದ ರಾಮನನ್ನು ನೋಡ
ಹೊರಟಿತು. ವಿಮಾನವನ್ನು ಕಂಡ ಜನ ಭಕ್ತಿಯಿಂದ ನಮ್ರವಾಗಿ ಕೈಮುಗಿಯಿತು.
ವಿಮಾನ ಮೆಲ್ಲನೆ ನಗರದ ಬಳಿ ನೆಲಕ್ಕಿಳಿಯಿತು. ಆ ಗಳಿಗೆ ಅಯೋಧ್ಯೆಯ
ಜನದ ಕಣ್ಮನಗಳಿಗೆ ಹಬ್ಬ.
 

 
ಭರತನು ವಿಮಾನದಿಂದ ಇಳಿಯುತ್ತಿರುವ ರಾಮಚಂದ್ರನ ಚರಣಗಳಿಗೆ
ಅಭಿನಂವಂದಿಸಿ 'ಧನ್ಯನಾದೆ' ಎಂದುಕೊಂಡನು.
ರಾಮ
ರಾಮ ನು ಪ್ರೀತಿಯ ತಮ್ಮ
ಭರತನನ್ನು ಎತ್ತಿ ಆಲಿಂಗಿಸಿಕೊಂಡನು. ಭರತನಿಗೆ ಆಗ ಒಂದೆಡೆ ಸಂಕೋಚ,
ಒಂದೆಡೆ ಸಂತೋಷ, ಒಂದೆಡೆ ಭಕ್ತಿ; ಹೀಗೆ ಅವನ ಚಿತ್ ಭಾವತುಮುಲಗಳಿ
ಗೊಳ- ಗಾಗಿತ್ತು.
 

 
ಭರತನು ಅಲ್ಲಿಂದ ಸೀತೆಗೂ ಲಕ್ಷ್ಮಣನಿಗೂ ವಂದಿಸಿದನು; ಸುಗ್ರೀವ-
ವಿಭೀಷಣಾದಿಗಳನ್ನು ಆಲಿಂಗಿಸಿ ಉಪಚರಿಸಿದನು. ಶತ್ರುಘ್ನನೂ ಕ್ರಮವಾಗಿ
ಪೂಜ್ಯರನ್ನು ಅಭಿನಂವಂದಿಸಿ ಗೌರವಿಸಿದನು.
 

 
ಪಟ್ಟಣದ ಜನವೆಲ್ಲ ಕೈಮುಗಿದು ರಾಮದೇವನಿಗೆ ಸ್ವಾಗತವನ್ನು ಬಯ
ಸಿತು. ರಾಮಚಂದ್ರನು ಮುಗುಳು ನಗೆಯಿಂದ ಅವರನ್ನು ಹರಸಿ, ಸೀತೆ
ಲಕ್ಷ್ಮಣರೊಡನೆ ತಾಯಂದಿರಿಗೆ ನಮಸ್ಕರಿಸಿದನು.