This page has been fully proofread once and needs a second look.

బళ్ళ
 
(6
 
*
" ಮಹಾತ್ಮನ್, ನೀನಾರು ? ರಾಮನ ಸುದ್ದಿ ಯನ್ನು ತಂದ ಪುಣ್ಯ-
ಪುರುಷ ನೀನಾರು ? ರಾಮನನ್ನು ಬಲ್ಲ ನೀನೇ ಧನ್ಯನು. ರಾಮಚಂದ್ರನ
ಕಥೆಯನ್ನು ನನಗೂ ಕೇಳಿಸಲಾರೆಯಾ? "
 
350
 

 
ಮಾರುತಿ ರಾಮನ ಹದಿನಾಲ್ಕು ವರುಷಗಳ ಎಲ್ಲ ಅದ್ಭುತ ಗಳನ್ನೂ
ಬಣ್ಣಿಸಿದನು; ತನ್ನ ಪರಿಚಯವನ್ನೂ ಮಾಡಿಕೊಟ್ಟನು. ಭರತನ ಸಂತಸಕ್ಕೆ
ಮೇರೆಯಿಲ್ಲವಾಯಿತು. ಆತ ಆನಂದ ಗದ್ಗದಿತನಾಗಿ ಶತ್ರುಘ್ನನನ್ನು ಕರೆದು
ನುಡಿದನು :
 

 
"ತಮ್ಮ, ನಮ್ಮಣ್ಣ ರಾಮಚಂದ್ರ ಬರುತ್ತಿದ್ದಾನಂತೆ. ಅವನ ಸ್ವಾಗತಕ್ಕೆ
ರಾಷ್ಟ್ರದ ಜನ ಅಣಿಯಾಗಲಿ. ರಾಜಧಾನಿ ತಳಿರು ತೋರಣಗಳಿಂದ ಅಲಂಕೃತ
 
ವಾಗಲಿ."
 

 
ಅಯೋಧ್ಯೆಯಲ್ಲಿ ಅಲಂಕಾರದ ಸಿದ್ಧತೆ ನಡೆಯಿತು. ಸುದ್ದಿ ಊರೆಲ್ಲ
ಹಬ್ಬಿತು. " ನಮ್ಮರಸು ರಾಮಚಂದ್ರ ಬರುತ್ತಿದ್ದಾನಂತೆ " ಎಂದು ಊರಿನ
ಜನರೆಲ್ಲ ಒಟ್ಟಾದರು. ಎಲ್ಲರಿಗೂ ರಾಮಚಂದ್ರನ ಮುಖವನ್ನು ಕಾಣುವ
ಆತುರ, ಎಲ್ಲೆಲ್ಲೂ ಸಂತಸದ ಸಡಗರ.
 

 
ಭರತನು ಪಾದುಕೆಗಳನ್ನು ಹೊತ್ತುಕೊಂಡು ಪರಿವಾರ ಪರಿವೃತನಾಗಿ
ರಾಮನನ್ನು ಎದುರ್ಗೊಳ್ಳಲು ನಡೆದನು. ಅವನಿಗೆ ಇನ್ನೂ ಸಂದೇಹ, ತಾನು
ಇಂದು ರಾಮನ ಮುಖವನ್ನು ಕಾಣು ವೆನೆ ? - ಆ ಭಾಗ್ಯವನ್ನು ತಾನು ಪಡೆದು
ಬಂದಿರುವೆನೆ ? ಅವನು ತನ್ನ ಸಂಶಯವನ್ನು ಹನುಮಂತನಲ್ಲಿ ನಿವೇದಿಸಿ
ಕೊಂಡನು :
 

 
"
ಕಪೀಂದ್ರ, ನೀನು ಹಾಸ್ಯಕ್ಕಾಗಿ ಹೀಗೆ ಆಡುತ್ತಿಲ್ಲ ತಾನೆ ? ರಾಮಚಂದ್ರ
ಖಂಡಿತವಾಗಿಯೂ ಬರುವನೆ ? ಅವನ ಪಾದಸೇವೆ- ಯ ಯೋಗ ನನಗೆ ದೊರ
ಕುವುದು ನಿಜವೆ ? ಅನಾಥೆಯಾದ ಭೂಮಿ ತನ್ನ ಗಂಡನನ್ನು ಮರಳಿ ಪಡೆ-
ಯುವಳೆ ? ಇದು ನಿಜವೆ ? ಇಂದು ನನ್ನ ಜನ್ಮ ಸಫಲವಾಗುವದು ದಿಟವೆ ?
ಹೇಳು ಹನುಮಾನ್."
 

 
"ಸೌಮ್ಯ ಭರತ, ಪ್ರಕೃತಿಯ ಬದಲಾವಣೆಯನ್ನಾದರೂ ಗಮ- ನಿಸು.
ಅಕಾಲದಲ್ಲಿ ಮರಗಳೆಲ್ಲ ಹೂ ಬಿಟ್ಟಿವೆ ನೋಡು. ಮಧು ಮಾಸದಲ್ಲಿಯಂತೆ
ಪ್ರಕೃತಿ ಸಂತಸದಿಂದಿದೆ ನೋಡು.
ಅದು ರಾಮಚಂದ್ರನ ಬರವಿಗೆ ಸಾಕ್ಷಿ.
ಅದು ನನ್ನ ಮಾತಿನ ಸತ್ಯತೆಗೆ ಪುರಾವೆ.