This page has not been fully proofread.

బళ్ళ
 
(6
 
* ಮಹಾತ್ಮನ್, ನೀನಾರು ? ರಾಮನ ಸುದ್ದಿ ಯನ್ನು ತಂದ ಪುಣ್ಯ-
ಪುರುಷ ನೀನಾರು ? ರಾಮನನ್ನು ಬಲ್ಲ ನೀನೇ ಧನ್ಯನು. ರಾಮಚಂದ್ರನ
ಕಥೆಯನ್ನು ನನಗೂ ಕೇಳಿಸಲಾರೆಯಾ? "
 
350
 
ಮಾರುತಿ ರಾಮನ ಹದಿನಾಲ್ಕು ವರುಷಗಳ ಎಲ್ಲ ಅದ್ಭುತಗಳನ್ನೂ
ಬಣ್ಣಿಸಿದನು; ತನ್ನ ಪರಿಚಯವನ್ನೂ ಮಾಡಿಕೊಟ್ಟನು. ಭರತನ ಸಂತಸಕ್ಕೆ
ಮೇರೆಯಿಲ್ಲವಾಯಿತು. ಆತ ಆನಂದ ಗದ್ಗದಿತನಾಗಿ ಶತ್ರುಘ್ನನನ್ನು ಕರೆದು
ನುಡಿದನು :
 
"ತಮ್ಮ, ನಮ್ಮಣ್ಣ ರಾಮಚಂದ್ರ ಬರುತ್ತಿದ್ದಾನಂತೆ. ಅವನ ಸ್ವಾಗತಕ್ಕೆ
ರಾಷ್ಟ್ರದ ಜನ ಅಣಿಯಾಗಲಿ. ರಾಜಧಾನಿ ತಳಿರು ತೋರಣಗಳಿಂದ ಅಲಂಕೃತ
 
ವಾಗಲಿ."
 
ಅಯೋಧ್ಯೆಯಲ್ಲಿ ಅಲಂಕಾರದ ಸಿದ್ಧತೆ ನಡೆಯಿತು. ಸುದ್ದಿ ಊರೆಲ್ಲ
ಹಬ್ಬಿತು. " ನಮ್ಮರಸು ರಾಮಚಂದ್ರ ಬರುತ್ತಿದ್ದಾನಂತೆ" ಎಂದು ಊರಿನ
ಜನರೆಲ್ಲ ಒಟ್ಟಾದರು. ಎಲ್ಲರಿಗೂ ರಾಮಚಂದ್ರನ ಮುಖವನ್ನು ಕಾಣುವ
ಆತುರ, ಎಲ್ಲೆಲ್ಲೂ ಸಂತಸದ ಸಡಗರ.
 
ಭರತನು ಪಾದುಕೆಗಳನ್ನು ಹೊತ್ತುಕೊಂಡು ಪರಿವಾರ ಪರಿವೃತನಾಗಿ
ರಾಮನನ್ನು ಎದುರ್ಗೊಳ್ಳಲು ನಡೆದನು. ಅವನಿಗೆ ಇನ್ನೂ ಸಂದೇಹ, ತಾನು
ಇಂದು ರಾಮನ ಮುಖವನ್ನು ಕಾಣುವೆನೆ ? - ಆ ಭಾಗ್ಯವನ್ನು ತಾನು ಪಡೆದು
ಬಂದಿರುವೆನೆ ? ಅವನು ತನ್ನ ಸಂಶಯವನ್ನು ಹನುಮಂತನಲ್ಲಿ ನಿವೇದಿಸಿ
ಕೊಂಡನು :
 
ಕಪೀಂದ್ರ, ನೀನು ಹಾಸ್ಯಕ್ಕಾಗಿ ಹೀಗೆ ಆಡುತ್ತಿಲ್ಲ ತಾನೆ ? ರಾಮಚಂದ್ರ
ಖಂಡಿತವಾಗಿಯೂ ಬರುವನೆ ? ಅವನ ಪಾದಸೇವೆಯ ಯೋಗ ನನಗೆ ದೊರ
ಕುವುದು ನಿಜವೆ ? ಅನಾಥೆಯಾದ ಭೂಮಿ ತನ್ನ ಗಂಡನನ್ನು ಮರಳಿ ಪಡೆ-
ಯುವಳೆ ? ಇದು ನಿಜವೆ ? ಇಂದು ನನ್ನ ಜನ್ಮ ಸಫಲವಾಗುವದು ದಿಟವೆ ?
ಹೇಳು ಹನುಮಾನ್."
 
"ಸೌಮ್ಯ ಭರತ, ಪ್ರಕೃತಿಯ ಬದಲಾವಣೆಯನ್ನಾದರೂ ಗಮನಿಸು.
ಅಕಾಲದಲ್ಲಿ ಮರಗಳೆಲ್ಲ ಹೂ ಬಿಟ್ಟಿವೆ ನೋಡು. ಮಧುಮಾಸದಲ್ಲಿಯಂತೆ
ಪ್ರಕೃತಿ ಸಂತಸದಿಂದಿದೆ ನೋಡು.
ಅದು ರಾಮಚಂದ್ರನ ಬರವಿಗೆ ಸಾಕ್ಷಿ.
ಅದು ನನ್ನ ಮಾತಿನ ಸತ್ಯತೆಗೆ ಪುರಾವೆ.