This page has been fully proofread once and needs a second look.

ಸಂಗ್ರಹರಾಮಾಯಣ
 
ರಾಮಚಂದ್ರ ಸೀತೆಗೆ ಪರಿಚಯವನ್ನೀಯುತ್ತಿದ್ದನು. ಅಂಥ ತಾಣ ಗಳಲ್ಲಿ
ತಾನು ವಿರಹಿತನಾಗಿ ಕಳೆದ ದಿನಗಳನ್ನು ಬಣ್ಣಿಸುತ್ತಿದ್ದನು. ಹನುಮಂತನನ್ನು
ಕಂಡುದು, ಸುಗ್ರೀವನ ಗೆಳೆತನ, ಶಬರಿಯ ಸದ್ತಿ, ಜಟಾಯುವಿನ ಪಾಡು
ಎಲ್ಲವನ್ನೂ ವಿವರಿಸಿದನು :
 
೨೨೩
 

 
ಕಿಷ್ಕಂಧೆ ಬಂತು. ಕೆಳಗಡೆ ಕಪಿಪತ್ನಿಯರು ಉತ್ಸುಕತೆಯಿಂದ ನಿರೀಕ್ಷಿಸು
ತಿದ್ದರು. ರಾಮಚಂದ್ರ ಅವರನ್ನೂ ವಿಮಾನದಮೇಲೆ ಕರೆಸಿಕೊಂಡನು.
 

 
ಅಂದು ಪಂಚಮಿ ತಿಥಿ, ಹದಿನಾಲ್ಕು ವರ್ಷಗಳ ಅವಧಿಯ ಕೊನೆಯ
ದಿನ, ರಾಮಚಂದ್ರ ಮುನಿಗಳ ಆತಿಥ್ಯವನ್ನು ಸ್ವೀಕರಿಸು ವುದಕ್ಕಾಗಿ ಭರ-
ದ್ವಾಜಾಶ್ರಮದಲ್ಲಿ ಪರಿವಾರಸಹಿತನಾಗಿ ಉಳಿದು ಕೊಂಡನು.
ಆದರೆ ಭರತ.
ನಿಗೆ ವಾರ್ತೆ ಮುಟ್ಟಿಸುವುದು ಅವಶ್ಯ ವಾಗಿತ್ತು. ಆ ಕೆಲಸವನ್ನು ಪೂರಯಿಸಲು
ರಾಮಚಂದ್ರ ಹನುಮಂತನನ್ನು ಭರತನೆಡೆಗೆ ಕಳಿಸಿದನು. ಹನುಮಂತ

ಮನುಷ್ಯ ರೂಪದಿಂದ ಅಯೋಧ್ಯೆಗೆ ತೆರಳಿದನು.
 

 
ನಂದಿಗ್ರಾಮದಲ್ಲಿ ಭರತ ರಾಮನನ್ನೇ ನಿರೀಕ್ಷಿಸುತ್ತಿದ್ದಾನೆ. ಜಡೆಗಟ್ಟಿದ
ತಲೆ, ನಾರುಡೆಯನ್ನು ಹೊದ್ದ ಮೈ, ಉಪವಾಸದಿಂದ ಬಡವಾದ ದೇಹ ಇವು
ಭರತನಲ್ಲಿ ತಾಪಸಕಳೆಯನ್ನು ತಂದಿ- ದ್ದವು. ಬಾಯಿ ರಾಮನಾಮವನ್ನು
 
ಜಪಿಸುತ್ತಿದ್ದರೆ ಶಿರಸ್ಸು ಪಾದುಕೆಗಳಿಗೆ ವಂದಿಸುತಿತ್ತು. ಮನಸ್ಸು 'ರಾಮನೇಕೆ
ಇನ್ನೂ ಬರಲಿಲ್ಲ' ಎಂದು ಕಾತುರವಾಗಿತ್ತು. ಇನ್ನೇನು, ಉರಿಯುವ ಬೆಂಕಿಗೆ
ಹಾರಬೇಕು. ಅಷ್ಟರಲ್ಲಿ ಮಾರುತಿ ಕಾಣಿಸಿಕೊಂಡು ತಡೆದನು :
 
*

 
"
ವೀರನಾದ ರಾಮಾನುಜನೆ, ಸಾಹಸವನ್ನು ಮಾಡದಿರು. ನೀನು
ಅಣ್ಣನಮೇಲೆ ತೋರಿದ ಗೌರವ ನಿಜವಾಗಿಯೂ ಅಪೂರ್ವ- ವಾದುದು. ತ್ವರೆ-
ಮಾಡಬೇಡ, ರಾಮಚಂದ್ರನು ಸೀತಾ-ಲಕ್ಷ್ಮಣ- ರೊಡನೆ ಬರುತ್ತಿದ್ದಾನೆ. ನಿನ್ನ
ಕುಶಲವನ್ನು ವಿಚಾರಿಸಿದ್ದಾನೆ.
 
33
 

 
ಮನಸ್ಸು ಸಂತಸದಿಂದ ಅರಳಿತು. ಮೈ ನಿಮಿರೆದ್ದಿತು. ಕಣ್ಣು ಆನಂ
ದಾಶ್ರುವನ್ನು ಸುರಿಸಿತು. ಸಂತಸದ ಸುದ್ದಿಯನ್ನು ತಂದ ಈ ವಿಪ್ರನಿಗೆ ಏನನ್ನು
ಕೊಡುವುದೆಂದೇ ಭರತನಿಗೆ ತೋಚಲಿಲ್ಲ. ಆತ ಭಕ್ತಿಭರದಿಂದ ಮಾರುತಿಗೆ
ನಮಸ್ಕರಿಸಿ ಬೇಡಿಕೊಂಡನು :