2023-03-15 15:36:01 by ambuda-bot
This page has not been fully proofread.
ಸಂಗ್ರಹರಾಮಾಯಣ
ರಾಮಚಂದ್ರ ಸೀತೆಗೆ ಪರಿಚಯವನ್ನೀಯುತ್ತಿದ್ದನು. ಅಂಥ ತಾಣಗಳಲ್ಲಿ
ತಾನು ವಿರಹಿತನಾಗಿ ಕಳೆದ ದಿನಗಳನ್ನು ಬಣ್ಣಿಸುತ್ತಿದ್ದನು. ಹನುಮಂತನನ್ನು
ಕಂಡುದು, ಸುಗ್ರೀವನ ಗೆಳೆತನ, ಶಬರಿಯ ಸದ್ಧತಿ, ಜಟಾಯುವಿನ ಪಾಡು
ಎಲ್ಲವನ್ನೂ ವಿವರಿಸಿದನು :
೨೨೩
ಕಿಷ್ಕಂಧೆ ಬಂತು. ಕೆಳಗಡೆ ಕಪಿಪತ್ನಿಯರು ಉತ್ಸುಕತೆಯಿಂದ ನಿರೀಕ್ಷಿಸು
ತಿದ್ದರು. ರಾಮಚಂದ್ರ ಅವರನ್ನೂ ವಿಮಾನದಮೇಲೆ ಕರೆಸಿಕೊಂಡನು.
ಅಂದು ಪಂಚಮಿ ತಿಥಿ, ಹದಿನಾಲ್ಕು ವರ್ಷಗಳ ಅವಧಿಯ ಕೊನೆಯ
ದಿನ, ರಾಮಚಂದ್ರ ಮುನಿಗಳ ಆತಿಥ್ಯವನ್ನು ಸ್ವೀಕರಿಸುವುದಕ್ಕಾಗಿ ಭರ-
ದ್ವಾಜಾಶ್ರಮದಲ್ಲಿ ಪರಿವಾರಸಹಿತನಾಗಿ ಉಳಿದುಕೊಂಡನು.
ಆದರೆ ಭರತ.
ನಿಗೆ ವಾರ್ತೆ ಮುಟ್ಟಿಸುವುದು ಅವಶ್ಯವಾಗಿತ್ತು. ಆ ಕೆಲಸವನ್ನು ಪೂರಯಿಸಲು
ರಾಮಚಂದ್ರ ಹನುಮಂತನನ್ನು ಭರತನೆಡೆಗೆ ಕಳಿಸಿದನು. ಹನುಮಂತ
ಮನುಷ್ಯರೂಪದಿಂದ ಅಯೋಧ್ಯೆಗೆ ತೆರಳಿದನು.
ನಂದಿಗ್ರಾಮದಲ್ಲಿ ಭರತ ರಾಮನನ್ನೇ ನಿರೀಕ್ಷಿಸುತ್ತಿದ್ದಾನೆ. ಜಡೆಗಟ್ಟಿದ
ತಲೆ, ನಾರುಡೆಯನ್ನು ಹೊದ್ದ ಮೈ, ಉಪವಾಸದಿಂದ ಬಡವಾದ ದೇಹ ಇವು
ಭರತನಲ್ಲಿ ತಾಪಸಕಳೆಯನ್ನು ತಂದಿದ್ದವು. ಬಾಯಿ ರಾಮನಾಮವನ್ನು
ಜಪಿಸುತ್ತಿದ್ದರೆ ಶಿರಸ್ಸು ಪಾದುಕೆಗಳಿಗೆ ವಂದಿಸುತಿತ್ತು. ಮನಸ್ಸು 'ರಾಮನೇಕೆ
ಇನ್ನೂ ಬರಲಿಲ್ಲ' ಎಂದು ಕಾತರವಾಗಿತ್ತು. ಇನ್ನೇನು, ಉರಿಯುವ ಬೆಂಕಿಗೆ
ಹಾರಬೇಕು. ಅಷ್ಟರಲ್ಲಿ ಮಾರುತಿ ಕಾಣಿಸಿಕೊಂಡು ತಡೆದನು :
* ವೀರನಾದ ರಾಮಾನುಜನೆ, ಸಾಹಸವನ್ನು ಮಾಡದಿರು. ನೀನು
ಅಣ್ಣನಮೇಲೆ ತೋರಿದ ಗೌರವ ನಿಜವಾಗಿಯೂ ಅಪೂರ್ವವಾದುದು. ತ್ವರೆ-
ಮಾಡಬೇಡ, ರಾಮಚಂದ್ರನು ಸೀತಾ-ಲಕ್ಷ್ಮಣರೊಡನೆ ಬರುತ್ತಿದ್ದಾನೆ. ನಿನ್ನ
ಕುಶಲವನ್ನು ವಿಚಾರಿಸಿದ್ದಾನೆ.
33
ಮನಸ್ಸು ಸಂತಸದಿಂದ ಅರಳಿತು. ಮೈ ನಿಮಿರೆದ್ದಿತು. ಕಣ್ಣು ಆನಂ
ದಾಶ್ರುವನ್ನು ಸುರಿಸಿತು. ಸಂತಸದ ಸುದ್ದಿಯನ್ನು ತಂದ ಈ ವಿಪನಿಗೆ ಏನನ್ನು
ಕೊಡುವುದೆಂದೇ ಭರತನಿಗೆ ತೋಚಲಿಲ್ಲ. ಆತ ಭಕ್ತಿಭರದಿಂದ ಮಾರುತಿಗೆ
ನಮಸ್ಕರಿಸಿ ಬೇಡಿಕೊಂಡನು :