This page has not been fully proofread.

35
 
ಮಿಂಚಿನಬಳ್ಳಿ
 
ನೆನಪು ಬೇಕು. ನಿನ್ನನ್ನು ನೋಡಬೇಕು. ನಿನ್ನ ಗುಣಗಳನ್ನು ಕೇಳುತ್ತಿರ
ಬೇಕು.
 
ಕೌಸಲ್ಯ-ಸುಮಿತ್ರೆಯರು ಭಾಗ್ಯಶಾಲಿನಿಯರು. ಅಯೋಧ್ಯೆಯ ನಾಗರಿ-
ಕರು ಪುಣ್ಯವಂತರು. ಅವರೆಲ್ಲ ನಿನ್ನ ಪಟ್ಟಾಭಿಷೇಕವನ್ನು ಕಣ್ಣಾರೆ ಕಂಡು
ನಲಿಯಲಿದ್ದಾರೆ.
 
ಸೊಸೆ ಜಾನಕಿ, ಸ್ತ್ರೀಯರಲ್ಲಿಲ್ಲ ನಿನ್ನಷ್ಟು ಪುಣ್ಯವಂತೆಯರು ಧನ್ಯರು
ಇನ್ನೊಬ್ಬರಿಲ್ಲ. ನನ್ನ ಮಗನನ್ನು ನಾರಾಯಣನ ಲೀಲಾಮೂರ್ತಿಯನ್ನು
ಪತಿಯಾಗಿ ಪಡೆದ ಪಾವನಚರಿತೆ ನೀನು.
 
ವತ್ಸ ಲಕ್ಷ್ಮಣ, ರಾಮಚಂದ್ರನ ಶುಶೂಷೆಯಿಂದ ನಿನ್ನ ಬಾಳು ಧನ್ಯ
ವಾಯಿತು. ವೇದಾಂತವನ್ನು ಬಲ್ಲವರು ರಾಮಚಂದ್ರನನ್ನು ಭಗವಂತನ
ಲೀಲಾ ವಿಭೂತಿ ಎಂದು ಕೊಂಡಾಡುತ್ತಾರೆ.?
 
ರಾಮಚಂದ್ರನು ದಶರಥನನ್ನೂ ದೇವತೆಗಳನ್ನೂ ಅಭಿನಂದಿಸಿ ಕಳಿಸಿ-
ಕೊಟ್ಟನು.
 
ಆಗ ವಿಭೀಷಣನು ವಿಜ್ಞಾಪಿಸಿಕೊಂಡನು:
 
"ಸ್ವಾಮಿನ್, ನೀನು ಸೀತೆಯೊಡನೆ ನಮ್ಮ ಅರಮನೆಯಲ್ಲಿ ವಾಸಿಸ
ಬೇಕು. ಎಲ್ಲ ರಾಜಭೋಗಗಳೂ ನಿನ್ನವೇ ಆಗಿವೆ."
 
ವಿಭೀಷಣ, ವ್ರತೋಪವಾಸಗಳಿಂದ ಕೃಶನಾಗಿ ನನಗಾಗಿ ಕಾಯುತ್ತಿ
ರುವ ಭರತನನ್ನು ಕಾಣುವ ವರೆಗೆ ನನಗೆ ಯಾವ ರಾಜ್ಯವೂ ಬೇಡ; ಯಾವ
ಭೋಗವೂ ಬೇಡ."
 
ರಾಮನ ಆಜ್ಞೆಯಂತೆ ವಿಭೀಷಣನು ಎಲ್ಲ ಕಪಿಗಳಿಗೂ ಮುತ್ತು-ಬಂಗಾರ
ಗಳನ್ನಿತ್ತು ಸತ್ಕರಿಸಿದನು. ರಾಮಚಂದ್ರನಿಗಂತೂ ಲಂಕೆಯ ಹೆಮ್ಮೆಯೆನಿಸಿದ
ಪುಷ್ಪಕವನ್ನೇ ಅರ್ಪಿಸಿದನು.
 
ಪುಷ್ಪಕವನ್ನೇರಿ ಕುಳಿತ ಸೀತಾ-ರಾಮರ ಜೋಡಿ ಮಿಂಚು-ಮೋಡಗಳ
ಜೋಡಿಯಂತಿತ್ತು. ಲಕ್ಷ್ಮಣ, ಹನುಮಂತ, ಸುಗ್ರೀವ ಸಮಸ್ತ ಕಪಿಗಳು,
ವಿಭೀಷಣ ಎಲ್ಲರೂ ಅನುಕ್ರಮವಾಗಿ ವಿಮಾನವನ್ನೇರಿದರು.
 
ಮುಗಿಲಿನಲ್ಲಿ ಮೂಡಿದ ಎರಡನೆಯ ಸೂರ್ಯನೆನ್ನುವಂತೆ ಹೊಳೆಯುತ್ತ
ವಿಮಾನ ಸಾಗಿತು. ನಡುದಾರಿಯಲ್ಲಿ ಕಾಣಬರುವ ನದಿ-ಬೆಟ್ಟಗಳ ಕುರಿತು