This page has been fully proofread once and needs a second look.

ಸಂಗ್ರಹರಾಮಾಯಣ
 
ಸೀತೆ ರಾಮಚಂದ್ರನಿಗೆ ವಂದಿಸಿ ಉರಿಯುವ ಬೆಂಕಿಯನ್ನು ಪ್ರವೇಶಿಸಿ
ದಳು. ಕರುಳು ಕಿತ್ತು ಬರುವಂಥ ಈ ಕರುಣದೃಶ್ಯವನ್ನು ಕಂಡು ಕಸಿಪಿಗಳೂ
ರಾಕ್ಷಸರೂ ಕೂಗಿಬಿಟ್ಟರು. ಕಪಿ, ರಾಕ್ಷಸರ ಹಾಹಾಕಾರದ ನಡುವೆ ಬ್ರಹ್ಮಾದಿ
ಗಳು ಬಂದು ರಾಮನ ಬಳಿ ವಿಜ್ಞಾಪಿಸಿಕೊಂಡರು :
 
C
 
$ಳಿಗೆ
 

 
ರಾಮಚಂದ್ರ, ನಿನ್ನ ಸೀತೆ ಪರಮಸಾಧಿಧ್ವಿ, ನಿತ್ಯ ಪವಿತ್ರಳು. "

 
ಅಗ್ನಿದಿವ್ಯದ ನೆವದಿಂದ ಮಾಯಾ ಸೀತೆ ಬೆಂಕಿಯನ್ನು ಸೇರಿ- ದಳು.
ಕೈಲಾಸದಿಂದ ಮರಳಿ ಬಂದ ದೇವಿ ಸೀತೆಯನ್ನು ಅಗ್ನಿ- ದೇವ ರಾಮಚಂದ್ರನಿಗೆ
ಅರ್ಪಿಸಿದ. ಪುರಾವೆಯಿಂದ ಪಾವಿತ್ರ್ಯ- ವನ್ನು ಪ್ರಕಟಗೊಳಿಸಿದ ಸೀತೆಯನ್ನು
ರಾಮಚಂದ್ರ ಸ್ವೀಕರಿಸಿದ.
 

 
ಸೀತೆಯನ್ನು ಮರಳಿ ಪಡೆದಾಗ ರಾಮಚಂದ್ರನಿಗೂ ಸಂತಸ ವಾಯಿತು.
ರಾಮಚಂದ್ರನನ್ನು ಸೇರಿ ಸೀತೆಯೂ ಸಂತಸ ಗೊಂಡಳು. ಜಗನ್ಮಾತಾ ಪಿತೃ-
ಗಳಾದ ಇವರಿಬ್ಬರು ಮತ್ತೆ ಜತೆ- ಯಾದುದನ್ನು ಕಂಡು ಲೋಕಕ್ಕೆ ಲೋಕವೆ
ಸಂತಸಗೊಂಡಿತು ! ಕಪಿಗಳೂ ರಾಕ್ಷಸರೂ ಸಂತಸದ ಕಡಲಲ್ಲಿ ಓಲಾಡಿದರು.

ಸೀತೆ ಬೆಂಕಿಗೆ ಬಿದ್ದಾಗ ಬಂದಿದ್ದ ದುಃಖಾಶ್ರು ಈಗ ಆನಂದಾಶ್ರು ವಾಗಿ ಪರಿ-
ಣಮಿಸಿತು.
 

 
ರಾಮನಿಗೆ ಪಟ್ಟಾಭಿಷೇಕವಂತೆ
 

 
ಗಂಧಮಾದನ ಪರ್ವತ ತಂದ ನಂತರ ಗಾಯಗೊಂಡ ಕಪಿ ಗಳನ್ನು
ಕಪಿವೈದ್ಯನಾದ ಸುಷೇಣನು ಗುಣಪಡಿಸಿದನು. ಈ ಮಹಾಯುದ್ಧದಲ್ಲಿ ಒಬ್ಬ
ಕಪಿಯೂ ಸತ್ತಿಲ್ಲ. ಸತ್ತವರೆಲ್ಲ ಬದುಕಿ ದರು. ರಾಮನ ಕರುಣೆಯಿಂದ ಇಲ್ಲಿಗೆ
ಬಂದಷ್ಟೆ ಮಂದಿ ಹಿಂತೆರಳಿದರು.
 

 
ರಾಮಚಂದ್ರನ ಕೀರ್ತಿಯನ್ನು ಕೇಳಿ ಸ್ವರ್ಗದಿಂದ ದಶರಥನು ಮಹೇಂದ್ರ-
ನೊಡನೆ ಇಳಿದು ಬಂದು ತನ್ನ ಪ್ರೀತಿಯ ಮಗನನ್ನು ಅಪ್ಪಿಕೊಂಡನು;
ಆನಂದಾಶ್ರುಗಳಿಂದ ಅವನನ್ನು ತೋಯಿಸಿ- ದನು. ಅನಂತರ ಲಕ್ಷ್ಮಣನನ್ನೂ
ಪ್ರೀತಿಯಿಂದ ಆಲಿಂಗಿಸಿ . ರಾಮನನ್ನು ಕರೆದು ನುಡಿದನು :
 

 
"ಕುಮಾರ, ನಿನ್ನಿಂದ ನಾನು ಬಾಳ ಕಡಲನ್ನು ದಾಟಿದೆ. ನನಗೆ ಸ್ವರ್ಗ
ಬೇಡ; ಮೋಕ್ಷವೂ ಬೇಡ; ಇನ್ನಾವುದೂ ಬೇಡ, ನನಗೆ ನೀನು ಬೇಕು, ನಿನ್ನ