This page has not been fully proofread.

ಸಂಗ್ರಹರಾಮಾಯಣ
 
ಸೀತೆ ರಾಮಚಂದ್ರನಿಗೆ ವಂದಿಸಿ ಉರಿಯುವ ಬೆಂಕಿಯನ್ನು ಪ್ರವೇಶಿಸಿ
ದಳು. ಕರುಳು ಕಿತ್ತು ಬರುವಂಥ ಈ ಕರುಣದೃಶ್ಯವನ್ನು ಕಂಡು ಕಸಿಗಳೂ
ರಾಕ್ಷಸರೂ ಕೂಗಿಬಿಟ್ಟರು. ಕಪಿ, ರಾಕ್ಷಸರ ಹಾಹಾಕಾರದ ನಡುವೆ ಬ್ರಹ್ಮಾದಿ
ಗಳು ಬಂದು ರಾಮನ ಬಳಿ ವಿಜ್ಞಾಪಿಸಿಕೊಂಡರು :
 
C
 
$ಳಿಗೆ
 
ರಾಮಚಂದ್ರ, ನಿನ್ನ ಸೀತೆ ಪರಮಸಾಧಿ, ನಿತ್ಯ ಪವಿತ್ರಳು. "
ಅಗ್ನಿದಿವ್ಯದ ನೆವದಿಂದ ಮಾಯಾ ಸೀತೆ ಬೆಂಕಿಯನ್ನು ಸೇರಿದಳು.
ಕೈಲಾಸದಿಂದ ಮರಳಿ ಬಂದ ದೇವಿ ಸೀತೆಯನ್ನು ಅಗ್ನಿದೇವ ರಾಮಚಂದ್ರನಿಗೆ
ಅರ್ಪಿಸಿದ. ಪುರಾವೆಯಿಂದ ಪಾವಿತ್ರ್ಯವನ್ನು ಪ್ರಕಟಗೊಳಿಸಿದ ಸೀತೆಯನ್ನು
ರಾಮಚಂದ್ರ ಸ್ವೀಕರಿಸಿದ.
 
ಸೀತೆಯನ್ನು ಮರಳಿ ಪಡೆದಾಗ ರಾಮಚಂದ್ರನಿಗೂ ಸಂತಸವಾಯಿತು.
ರಾಮಚಂದ್ರನನ್ನು ಸೇರಿ ಸೀತೆಯೂ ಸಂತಸಗೊಂಡಳು. ಜಗನ್ಮಾತಾ ಪಿತೃ-
ಗಳಾದ ಇವರಿಬ್ಬರು ಮತ್ತೆ ಜತೆಯಾದುದನ್ನು ಕಂಡು ಲೋಕಕ್ಕೆ ಲೋಕವೆ
ಸಂತಸಗೊಂಡಿತು ! ಕಪಿಗಳೂ ರಾಕ್ಷಸರೂ ಸಂತಸದ ಕಡಲಲ್ಲಿ ಓಲಾಡಿದರು.
ಸೀತೆ ಬೆಂಕಿಗೆ ಬಿದ್ದಾಗ ಬಂದಿದ್ದ ದುಃಖಾಶ್ರು ಈಗ ಆನಂದಾಶ್ರುವಾಗಿ ಪರಿ-
ಣಮಿಸಿತು.
 
ರಾಮನಿಗೆ ಪಟ್ಟಾಭಿಷೇಕವಂತೆ
 
ಗಂಧಮಾದನ ಪರ್ವತ ತಂದ ನಂತರ ಗಾಯಗೊಂಡ ಕಪಿಗಳನ್ನು
ಕಪಿವೈದ್ಯನಾದ ಸುಷೇಣನು ಗುಣಪಡಿಸಿದನು. ಈ ಮಹಾಯುದ್ಧದಲ್ಲಿ ಒಬ್ಬ
ಕಪಿಯೂ ಸತ್ತಿಲ್ಲ. ಸತ್ತವರೆಲ್ಲ ಬದುಕಿದರು. ರಾಮನ ಕರುಣೆಯಿಂದ ಇಲ್ಲಿಗೆ
ಬಂದಷ್ಟೆ ಮಂದಿ ಹಿಂತೆರಳಿದರು.
 
ರಾಮಚಂದ್ರನ ಕೀರ್ತಿಯನ್ನು ಕೇಳಿ ಸ್ವರ್ಗದಿಂದ ದಶರಥನು ಮಹೇಂದ್ರ-
ನೊಡನೆ ಇಳಿದು ಬಂದು ತನ್ನ ಪ್ರೀತಿಯ ಮಗನನ್ನು ಅಪ್ಪಿಕೊಂಡನು;
ಆನಂದಾಶ್ರುಗಳಿಂದ ಅವನನ್ನು ತೋಯಿಸಿದನು. ಅನಂತರ ಲಕ್ಷ್ಮಣನನ್ನೂ
ಪ್ರೀತಿಯಿಂದ ಆಲಿಂಗಿಸಿ ರಾಮನನ್ನು ಕರೆದು ನುಡಿದನು :
 
"ಕುಮಾರ, ನಿನ್ನಿಂದ ನಾನು ಬಾಳ ಕಡಲನ್ನು ದಾಟಿದೆ. ನನಗೆ ಸ್ವರ್ಗ
ಬೇಡ; ಮೋಕ್ಷವೂ ಬೇಡ; ಇನ್ನಾವುದೂ ಬೇಡ, ನನಗೆ ನೀನು ಬೇಕು, ನಿನ್ನ