This page has been fully proofread once and needs a second look.

ಮಿಂಚಿನಬಳ್ಳಿ
 
ಮೊದಲಬಾರಿ ಪತಿಯ ಮುಖವನ್ನು ನೋಡುತ್ತಿದ್ದಾಳೆ ಈ ಸಾಧಿ,ಧ್ವಿ. ಎಂಥ
ಸಂತಸದ ನೋಟ ! ಎಂಥ ಸಂತಸದ ಕ್ಷಣ ! ದಾಂಪತ್ಯದ ಸೊಗಸು ಕಾಣು
ವುದು ಇಂಥ ಗಳಿಗೆಯಲ್ಲಿ. ಜೀವನ ರಸಮಯ ವಾಗುವದು ಇಂಥ ಸಮಯದಲ್ಲಿ.
 
೨೨
 

 
ಆದರೆ ರಾಮಚಂದ್ರನ ಮುಖಭಂಗಿಯೇಕೋ ಬೇರೆ ತೆರ- ನಾಗಿತ್ತು.
ಅವನ ಮುಖದಿಂದ ಮಾತುಗಳು ಕಿಡಿಯಂತೆ ಸಿಡಿದವು:
 

 
"ಭದ್ರೆ, ನನ್ನ ಬಾಹುಬಲದಿಂದ ಶತ್ರುವನ್ನು ಕೊಂದು ನಿನ್ನನ್ನು ಪಡೆ
ದಿದ್ದೇನೆ. ' ಹೆಂಡತಿಯನ್ನು ಕದ್ದರೂ ಸುಮ್ಮನಿದ್ದ ಕಳಪೆ' ಎಂಬ ಅಪಮಾನ
ದಿಂದ ನಾನು ದೂರಾಗಿದ್ದೇನೆ. ನನ್ನ ಕೆಲಸ ತೀರಿತು. ಪರಪುರುಷರ ಮನೆ
ಯಲ್ಲಿ ಬಾಳಿದ ಹೆಣ್ಣನ್ನು ಕುಲೀನ- ರು ಸ್ವೀಕರಿಸುವುದು ವಾಡಿಕೆಯಿಲ್ಲ.
ನಾವಂತೂ ಎಲ್ಲದರ ಸಂಗ ವನ್ನೂ ತೊರೆದವರು. ಯಾವುದರ ಹಂಗೂ ಇಲ್ಲ
ದವರು. ಸುಂದರಿ, ನಾನು ನಿನ್ನನ್ನು ಮತ್ತೆ ಸ್ವೀಕರಿಸಲಾರೆ. ಬಯಸಿದಲ್ಲಿಗೆ
ಹೋಗಲು ನೀನು ಸ್ವತಂತ್ರಳಿರುವೆ."
 

 
ಸಿಡಿಲಿನಂತೆ ಬಂದೆರಗಿದ ಮಾತುಗಳಿಂದ ಸೀತೆ ಕಂಗೆಡಲಿಲ್ಲ. "ರಾಮ-
ಚಂದ್ರನನ್ನು ಹೊರತು ಇನ್ನೊಬ್ಬನನ್ನು ಈ ಮನಸ್ಸು ನೆನಸಲಾರದು" ಎಂದು
ಆಕೆ ದೃಢವಾಗಿ ನುಡಿದಳು. ಭಗವಂತನ ಭಾವ ಅವಳಿಗೂ ಗೊತ್ತು. ಅಗ್ನಿದಿವ್ಯ
ದಿಂದ ನನ್ನ ಪಾವಿತ್ರ್ಯವನ್ನು ಜಗತ್ತಿಗೆ ಸಾರಬೇಕಾಗಿದೆ ಅಲ್ಲವೆ ? ಆಕೆ
ಲಕ್ಷ್ಮಣನನ್ನು ಕರೆದು ನುಡಿದಳು:
 

 
"ಸೌಮಿತ್ರಿ, ನಿನ್ನ ಅತ್ತಿಗೆಗಾಗಿ ಒಂದು ಚಿತೆಯನ್ನು ಸಿದ್ಧ- ಗೊಳಿಸು."
 

 
ಕಪಿಕೋಟಿ ಕಣ್ಣೀರು ಸುರಿಸುತ್ತ ಬೆರಗಾಗಿ ನಿಂತಿತ್ತು. ವಿಭೀ- ಷಣನೂ
ಕಣ್ಣೀಣೊರಿಸಿಕೊಂಡು ಮೂಕನಾಗಿ ನಿಂತನು. ಲಕ್ಷ್ಮಣನ ಕಣ್ಣ ತೇವಗೊಳ್ಳ
ದಿರಲಿಲ್ಲ. ಆದರೆ ಅಣ್ಣನ ಭಾವವನ್ನರಿತ ಆತ ತುಟಿ ಬಿಚ್ಚದೆ ತನ್ನ ಅತ್ತಿಗೆಗೆ
ಚಿತೆಯನ್ನು ನಿರ್ಮಿಸಿದನು.
 

 
ಸೀತೆ ಚಿತೆಯೇರುವ ಮುನ್ನ ಹೀಗೆ ನುಡಿದಳು :
 
C C
 

 
"
ನಾನು ರಾಮಚಂದ್ರನನ್ನ ನೆನೆಯುವುದು ನಿಜವಾದರೆ, ಅಬಲೆ
 
ಹೆಂಗಸಿನ ಪಾತಿವ್ರತ್ಯಕ್ಕೆ ಬೆಲೆಯಿರುವುದು ದಿಟವಾದರೆ ಅಗ್ನಿದೇವ ನನ್ನನ್ನು
ಕಾಪಾಡಲಿ,. "