This page has not been fully proofread.

ಮಿಂಚಿನಬಳ್ಳಿ
 
ಮೊದಲಬಾರಿ ಪತಿಯ ಮುಖವನ್ನು ನೋಡುತ್ತಿದ್ದಾಳೆ ಈ ಸಾಧಿ, ಎಂಥ
ಸಂತಸದ ನೋಟ ! ಎಂಥ ಸಂತಸದ ಕ್ಷಣ ! ದಾಂಪತ್ಯದ ಸೊಗಸು ಕಾಣು
ವುದು ಇಂಥ ಗಳಿಗೆಯಲ್ಲಿ ಜೀವನ ರಸಮಯವಾಗುವದು ಇಂಥ ಸಮಯದಲ್ಲಿ.
 
೨೨
 
ಆದರೆ ರಾಮಚಂದ್ರನ ಮುಖಭಂಗಿಯೇಕೋ ಬೇರೆ ತೆರನಾಗಿತ್ತು.
ಅವನ ಮುಖದಿಂದ ಮಾತುಗಳು ಕಿಡಿಯಂತೆ ಸಿಡಿದವು:
 
"ಭದ್ರೆ, ನನ್ನ ಬಾಹುಬಲದಿಂದ ಶತ್ರುವನ್ನು ಕೊಂದು ನಿನ್ನನ್ನು ಪಡೆ
ದಿದ್ದೇನೆ. ಹೆಂಡತಿಯನ್ನು ಕದ್ದರೂ ಸುಮ್ಮನಿದ್ದ ಕಳಪೆ' ಎಂಬ ಅಪಮಾನ
ದಿಂದ ನಾನು ದೂರಾಗಿದ್ದೇನೆ. ನನ್ನ ಕೆಲಸ ತೀರಿತು. ಪರಪುರುಷರ ಮನೆ
ಯಲ್ಲಿ ಬಾಳಿದ ಹೆಣ್ಣನ್ನು ಕುಲೀನರು ಸ್ವೀಕರಿಸುವುದು ವಾಡಿಕೆಯಿಲ್ಲ.
ನಾವಂತೂ ಎಲ್ಲದರ ಸಂಗವನ್ನೂ ತೊರೆದವರು. ಯಾವುದರ ಹಂಗೂ ಇಲ್ಲ
ದವರು. ಸುಂದರಿ, ನಾನು ನಿನ್ನನ್ನು ಮತ್ತೆ ಸ್ವೀಕರಿಸಲಾರೆ. ಬಯಸಿದಲ್ಲಿಗೆ
ಹೋಗಲು ನೀನು ಸ್ವತಂತ್ರಳಿರುವೆ."
 
ಸಿಡಿಲಿನಂತೆ ಬಂದೆರಗಿದ ಮಾತುಗಳಿಂದ ಸೀತೆ ಕಂಗೆಡಲಿಲ್ಲ. "ರಾಮ-
ಚಂದ್ರನನ್ನು ಹೊರತು ಇನ್ನೊಬ್ಬನನ್ನು ಈ ಮನಸ್ಸು ನೆನಸಲಾರದು" ಎಂದು
ಆಕೆ ದೃಢವಾಗಿ ನುಡಿದಳು. ಭಗವಂತನ ಭಾವ ಅವಳಿಗೂ ಗೊತ್ತು. ಅಗ್ನಿದಿವ್ಯ
ದಿಂದ ನನ್ನ ಪಾವಿತ್ರ್ಯವನ್ನು ಜಗತ್ತಿಗೆ ಸಾರಬೇಕಾಗಿದೆ ಅಲ್ಲವೆ ? ಆಕೆ
ಲಕ್ಷ್ಮಣನನ್ನು ಕರೆದು ನುಡಿದಳು:
 
"ಸೌಮಿತ್ರಿ, ನಿನ್ನ ಅತ್ತಿಗೆಗಾಗಿ ಒಂದು ಚಿತೆಯನ್ನು ಸಿದ್ಧಗೊಳಿಸು."
 
ಕಪಿಕೋಟಿ ಕಣ್ಣೀರು ಸುರಿಸುತ್ತ ಬೆರಗಾಗಿ ನಿಂತಿತ್ತು. ವಿಭೀಷಣನೂ
ಕಣ್ಣೀರಿಸಿಕೊಂಡು ಮೂಕನಾಗಿ ನಿಂತನು. ಲಕ್ಷ್ಮಣನ ಕಣ್ಣ ತೇವಗೊಳ್ಳ
ದಿರಲಿಲ್ಲ. ಆದರೆ ಅಣ್ಣನ ಭಾವವನ್ನರಿತ ಆತ ತುಟಿ ಬಿಚ್ಚದೆ ತನ್ನ ಅತ್ತಿಗೆಗೆ
ಚಿತೆಯನ್ನು ನಿರ್ಮಿಸಿದನು.
 
ಸೀತೆ ಚಿತೆಯೇರುವ ಮುನ್ನ ಹೀಗೆ ನುಡಿದಳು :
 
C C
 
ನಾನು ರಾಮಚಂದ್ರನನ್ನ ನೆನೆಯುವುದು ನಿಜವಾದರೆ, ಅಬಲೆ
 
ಹೆಂಗಸಿನ ಪಾತಿವ್ರತ್ಯಕ್ಕೆ ಬೆಲೆಯಿರುವುದು ದಿಟವಾದರೆ ಅಗ್ನಿದೇವ ನನ್ನನ್ನು
ಕಾಪಾಡಲಿ, "