This page has not been fully proofread.

ಸಂಗ್ರಹರಾಮಾಯಣ
 
ರಾಮಚಂದ್ರನು ಬಿಲ್ಲಿಗೆ ಬಾಣವನ್ನು ಹೂಡಿದಾಗ ಇಡಿಯ ಭೂಮಿ
ನಡುಗಿತು. ಭೂಮಿಯ ಜತೆಗೆ ಶಿವನ ದೇಹವೂ ಚಲಿತವಾಯಿತು. ತಮೋ
ಭಾವ ತಿರೋಹಿತವಾಯಿತು. ಭಕ್ತಿಭರಿತನಾದ ಶಿವ ರಾಮನ ಪಾದಗಳ
ಮೇಲೆರಗಿದನು. ದೇವತೆಗಳೂ ಭಗವಂತನ ಆಟಕ್ಕೆ ಅನುಸಾರವಾಗಿ ನಾಟಕ
ನಾಡುತ್ತಾರೆ.
 
DCF
 
ದೇವತೆಗಳ ಗಡಣವೇ ರಾಮಚಂದ್ರನನ್ನು ವಂದಿಸಿತು; ಅಭಿನಂದಿಸಿತು.
ರಾಮಚಂದ್ರನೂ ಪ್ರತಿಯಾಗಿ ದೇವತೆಗಳನ್ನು ಅಭಿನಂದಿಸಿದನು'
 
ರಾಮನ ಆಜ್ಞೆಯಂತೆ ಲಕ್ಷ್ಮಣನು ವಿಭೀಷಣನಿಗೆ ರಾಕ್ಷಸರಾಜ್ಯದ
ಸಿಂಹಾಸನದಲ್ಲಿ ಅಭಿಷೇಕಗೈದನು. ಎಲ್ಲ ಕಪಿಗಳೂ ಏಕಕಂಠದಿಂದ ಕೂಗಿದರು:
* ಲಂಕಾಧಿಪತಿಯಾದ ವಿಭೀಷಣನಿಗೆ ಜಯವಾಗಲಿ."
 
ಇತ್ತ ಹನುಮಂತನು ರಾಮಚಂದ್ರನ ನಿರ್ದೇಶದಂತೆ ಸೀತೆಯಬಳಿಗೆ
ಬಂದು ವಿಜ್ಞಾಪಿಸಿಕೊಂಡನು :
 
" ಪರಮಸಾಧಿಯಾದ ಓ ನನ್ನ ತಾಯಿ, ನಿನ್ನ ಪತಿಯು ರಾವಣನನ್ನು
ಕೊಂದಿದ್ದಾನೆ; ವಿಜಯಶ್ರೀಯಿಂದ ಶೋಭಿಸುತ್ತಿದ್ದಾನೆ.
 
"3
 
ಸೀತೆಗೆ ಇದಕ್ಕಿಂತಲೂ ಸಂತಸದ ವಾರ್ತೆ ಇನ್ನೊಂದಿದೆಯೆ ? ವರ್ಷದ
ವೇದನೆಯೆಲ್ಲ ಮಾಯವಾಯಿತು. ಆಕೆ ಸಂತಸದಿಂದ ಉಬ್ಬಿ ನುಡಿದಳು :
 
66
 
* ವತ್ಸ, ಮಾರುತಿ ! ಸಂತಸದ ವಾರ್ತೆಯನ್ನು ತಂದ ನಿನಗೆ ಮಂಗಳ-
ವಾಗಲಿ. ನನ್ನ ಬಾಳು ಧನ್ಯವಾಯಿತು. ನಾನು ಪಟ್ಟ ಕಷ್ಟದ ಫಲ ದೊರ-
ಕಿತು. ಇಂದು ಪ್ರಪಂಚದಲ್ಲೆಲ್ಲ ಹೆಚ್ಚು ಭಾಗ್ಯಶಾಲಿನಿ, ಹೆಚ್ಚು ಸಂತುಷ್ಟಳು
ನಾನು. ಹನುಮನ್, ದೇವದೇವನಾದ ನನ್ನ ಪ್ರಿಯನನ್ನು ನಾನು ಕಾಣಲು
ಕಾತರಳಾಗಿದ್ದೇನೆ ಎಂದು ಆತನಿಗೆ ತಿಳಿಸುವೆಯಾ ? "
 
ಹನುಮಂತ ಮರಳಿ ಬಂದು ರಾಮನ ಬಳಿ ಸೀತೆಯ ಬಿನ್ನಹವನ್ನರುಹಿ
ದನು. ರಾಮನ ಒಪ್ಪಿಗೆ ದೊರೆಯಿತು. ವಿಭೀಷಣನು ಆಕೆಯನ್ನು ಕರೆತಂದನು.
ಜನಸಮೂಹದ ನಡುವೆ ನಡೆದು ಬರುವ ಬೆಡಗಿ ಸೀತೆ ನಾಚುಗೆಯಿಂದ
ತನ್ನೊಳಗೇ ತಾನು ಅಡಗಿಕೊಂಡಳು ! ಆದರೂ ದುರ್ಲಭದರ್ಶನನಾದ ರಾಮ-
ಚಂದ್ರನನ್ನು ಕದ್ದು ನೋಡದಿರಲಿಲ್ಲ. ಒಂದು ವರ್ಷದ ರಾಕ್ಷಸ ದಿವ್ಯದ ನಂತರ