This page has not been fully proofread.

ಮಿಂಚಿನಬಳ್ಳಿ
 
"ಭಗವನ್, ನಿನಗೆ ಪರಾಜಯವೆಂಬುದಿಲ್ಲ. ನೀನು ಸರ್ವ ವಿಜಯಿ;
ಸದಾ ವಿಜಯಿ, ನೀನು ನಮ್ಮೆಲ್ಲರ ಪ್ರಭು. ನಾವು ನಿನ್ನ ಚರಣ ದಾಸರು.
ನನ್ನ ಈ ಮಾತು ಶಾಶ್ವತ ಸತ್ಯವಾಗಿದೆ. ಎಲ್ಲೂ ಎಂದೂ ಇದು ಅನ್ಯಥಾ ಆಗ
ಲಾರದು.
 
೨೧೮
 
ನಿನ್ನ ಸದ್ಗುಣಗಳಿಗೆ ಆದಿಯೂ ಇಲ್ಲ; ಅಂತವೂ ಇಲ್ಲ. ನೀನು ಅನಂತ
ಗುಣಗಳ ಖನಿಯಾಗಿರುವೆ. ಓ ಸದ್ಗುಣಗಳ ಮೂರ್ತಿಯೆ, ನನ್ನ ಈ ಮಾತು
 
ಎಲ್ಲ ಎಂದೂ ಅನ್ಯಥಾ ಆಗಲಾರದು. ಇದು ಮೂರು ಕಾಲಕ್ಕೂ ಸತ್ಯ-
ವಾಗಿದೆ.
 
ಸ್ವತಂತ್ರನಾದ ನೀನೊಬ್ಬನೆ
 
ಅಂತ ಪಾರವಿರದಂಥ ಓ ಅನಂತನೆ,
ಸರ್ವೋತ್ತಮನು.
 
ನಾವು ನಿನ್ನ ಗುಲಾಮರು. ನಿನ್ನ ಆಜ್ಞೆಯರಿತು ಕೆಲಸ
ಮಾಡುವವರು, ನಾನು, ರುದ್ರ, ಇಂದ್ರ, ಚಂದ್ರ, ಸೂರ್ಯ, ಒಬ್ಬರೇನು
ಇಬ್ಬರೇನು-ಎಲ್ಲರೂ ಎಲ್ಲವೂ ನಿನ್ನ ಅಧೀನವಾಗಿದೆ; ನಿನಗಾಗಿ ಇದೆ.
 
ಬೆಂಕಿಯಿಂದ ಜ್ವಾಲೆ ಹೊಮ್ಮುವಂತೆ, ಭಾನುದೇವನಿಂದ ಕಿರಣಗಳು
ಹೊರಬರುವಂತೆ, ಗಾಳಿಯಿಂದ ವೇಗ ಹುಟ್ಟುವಂತೆ, ನದಿಯಿಂದ ನೀರು
ಹರಿದು ಬರುವಂತೆ, ನಾವೆಲ್ಲ ನಿನ್ನ ವಿಭೂತಿಯ ಆವಿಷ್ಕಾರಗಳು.
 
ನಿನ್ನ ಹುಬ್ಬಿನ ಕುಣಿತದಿಂದ ಜಗತ್ತು ಹುಟ್ಟಿದೆ, ಸತ್ತಿದೆ. ಬದುಕಿದೆ.
ಇಡಿಯ ಜಗತ್ತಿನ ಒಂದು ಬಿಂದು ರಾವಣ. ಅವನನ್ನು ಸಂಹರಿಸುವುದು ನಿನ
ಗೊಂದು ಲೀಲೆ ಪ್ರಳಯಕಾಲದ ಬೆಂಕಿಗೆ ಒಂದು ಹತ್ತಿಯ ರಾಶಿ ಯಾವ ಲೆಕ್ಕ.
 
ಆದರೆ ರಾವಣನ ವಧೆ ಇನ್ನೊಬ್ಬರಿಂದ ಸಾಧ್ಯವಿಲ್ಲ. ಅದಕ್ಕೆ ನೀನೊ
ಬೃನೆ ಸರಿ. ಅಂಥ ಕಾವ್ಯವನ್ನು ಮಾಡಿ ನಮ್ಮನ್ನು ಸಲಹಿದೆ, ಓ ಭಗವನ್,
ನಿನಗೆ ನನ್ನ ಕೋಟಿ ಕೋಟಿ ಪ್ರಣಾಮಗಳು; ಅನಂತ ಪ್ರಣಾಮಗಳು."
 
ರುದ್ರನಿಗೆ ಮಾತ್ರ ರಾಮಚಂದ್ರನ ಮೇಲೆ ಸ್ವಲ್ಪ ಕೋಪ ಬಂದಿತ್ತು. ತನ್ನ
ವರದಿಂದ ರಕ್ಷಿತನಾದ ರಾಕ್ಷಸನನ್ನು ಇವನು ಕೊಲ್ಲುವುದೆ ? ರುದ್ರದೇವ ತಮೋ
ಗುಣದ ಅಭಿಮಾನಿಯಲ್ಲವೆ ? ಅದಕ್ಕೆ ಸರಿಯಾಗಿ ಒಮ್ಮೊಮ್ಮೆ ಅವನು ತಮೋ
ಗುಣವನ್ನು ಪ್ರಕಟಿಸುವುದಿದೆ. ಎಂತಲೇ ಅವನು ರಾಮದೇವನನ್ನು ಯುದ್ಧಕ್ಕೆ
 
ಕರೆದನು.