This page has not been fully proofread.

ಸಂಗ್ರಹರಾಮಾಯಣ
 
ವಿಭೀಷಣನಿಗೂ ತನ್ನ ಅಣ್ಣ ಸತ್ತು ಬಿದ್ದು ದನ್ನು ಕಂಡು ದುಃಖವಾಯಿತು.
 
(6
 
" ರಾಮಚಂದ್ರನಿಗೆ ದ್ರೋಹ ಬಗೆದು ಜೀವ ತೆತ್ತೆಯಾ" ಎಂದು ಅವನೂ
ಹಲುಬಿದನು. ರಾಕ್ಷಸರಾಜ್ಯದ ಸಿಂಹಾಸನದ ಮೇಲೆ ರಾಜಿಸುತ್ತಿದ್ದ ರಾವಣನ
ದೇಹ ನೆಲದಮೇಲೆ ಬಿದ್ದಿತ್ತು. ಮೈಯೆಲ್ಲ ಧೂಳು ಕವಿದಿತ್ತು. ಸುತ್ತಲೂ
ರಕ್ತದ ಹೊನಲೇ ಹರಿದಿತ್ತು. ಮಹಾವೀರನ ಈ ವೀರಶಯ್ಕೆಯನ್ನು ಕಂಡು
ರಾಜಪತ್ನಿಯರು ಅತ್ತು ಗೋಗರೆದರು. ಮಹಾರಾಣಿ ಮಂಡೋದರಿ ತನ್ನ
ಪತಿಯ ದೇಹವನ್ನು ಅಪ್ಪಿಕೊಂಡು ಮರುಗಿದಳು:
 
೨೧೭
 
ಪರಮ
 
"ಓ ನನ್ನ ಅರಸನೆ, ರಾಮನ ಬಳಿಯಿಂದ ಸೀತೆಯನ್ನು ಕದ್ದು ತಂದು
ಈಗ ಅವಳನ್ನು ತೊರೆದು ಎಲ್ಲಿಗೆ ಹೋದೆ ? ವಿಭೀಷಣನಂಥ
ಧಾರ್ಮಿಕನನ್ನು ತೊರೆದು ಹೊರಟು ಹೋದೆಯಾ ? ಇಂಥ ದುರ್ದೆಶೆಯಲ್ಲಿ
ನಿನಗೆ ಸಾವು ಬರುವಂತಾಯಿತೆ ! ಓ ನನ್ನ ದೈವವೆ, ನನ್ನನ್ನು ಕರೆದುಕೊಳ್ಳು.
ನಿನ್ನ ಚರಣದಾಸಿಯಾಗಿ ನಾನೂ ಬರುವೆನು."
 
ದುಃಖದ ಕಾರ್ಮೋಡ ಕವಿದು ಪರಿಸ್ಥಿತಿ ವಿಷಮವಾಗಿತ್ತು. ಆಗ
ರಾಮಚಂದ್ರ ವಿಭೀಷಣನನ್ನು ಕರೆದು ಆಜ್ಞಾಪಿಸಿದನು;
 
"ವಿಭೀಷಣ, ಮೃತನಾದ ನಿನ್ನ ಅಣ್ಣನ ಅಂತ್ಯಸಂಸ್ಕಾರ ಸಾಂಗವಾಗಿ
ನಡೆಯಲಿ. ಅಳುತ್ತಿರುವ ಈ ಹೆಂಗಸರನ್ನು ಸಮಾಧಾನಗೊಳಿಸಿ ಪುರಕ್ಕೆ
 
ಕಳುಹಿಸು."
 
"ರಾಮಚಂದ್ರ, ನಿನ್ನ ಪತ್ನಿಯನ್ನು ಅಪಹರಿಸಿದ ಪಾತಕಿಗೆ ನಾನು ಹೇಗೆ
ಅಂತ್ಯ ಸಂಸ್ಕಾರ ಮಾಡಲಿ ?"
 
ರಾಮಚಂದ್ರನು ಮುಗುಳು ನಗುತ್ತಲೆ ಉತ್ತರಿಸಿದನು :
ರಾವಣನಿಗೆ ಅಂತ್ಯಸಂಸ್ಕಾರ ಜರುಗಬೇಕು. ಅದು ನನ್ನ ಆಜ್ಞೆ."
ಪುರೋಹಿತರ ಸಹಕಾರದಿಂದ ಎಲ್ಲ ಅಪರ ಸಂಸ್ಕಾರಗಳನ್ನೂ ವಿಭೀಷ-
ಣನು ಸಾಂಗವಾಗಿ ನೆರವೇರಿಸಿದನು.
 
ಸಂತುಷ್ಟರಾದ ಬ್ರಹ್ಮಂದ್ರಾದಿಗಳು ರಾಮಚಂದ್ರನ ಬಳಿ ಬಂದು ನಮ
ಸ್ಕರಿಸಿದರು. ಭಗವಂತನ ಹೊಕ್ಕಳಿನ ಮಗನಾದ ಬ್ರಹ್ಮನಂತೂ ವೇದ ಗರ್ಭಿತ
ವಾದ ವಚನಗಳಿಂದ ರಾಮಚಂದ್ರನನ್ನು ಸ್ತುತಿಸಿದನು: