This page has been fully proofread once and needs a second look.

೧೬
 
ಮಿಂಚಿನಬಳ್ಳಿ
 
ವೀರರು ಆಪತ್ತಿನಲ್ಲಿ ಕಂಗೆಡುವುದುಂಟೆ ? ಒಂದೊಂದು ಪರಾ- ಭವವೂ,
ಒಂದೊಂದು ದುಃಶಕುನವೂ ಅವನಲ್ಲಿ ಯುದ್ಧೋ- ತ್ಸಾಹವನ್ನು ಇನ್ನಷ್ಟು
ಹೆಚ್ಚಿಸಿದವು !
 

 
ರಾವಣನು ನಿಜಕ್ಕೂ ಭಗವಂತನ ಭಕ್ತನಲ್ಲವೆ ? ಭಗವಂತನ ಲೋಕದ
ದ್ವಾರಪಾಲಕನಲ್ಲವೆ ? ಸನಕಾದಿಗಳ ಶಾಪದಿಂದ ರಾಕ್ಷಸಜನ್ಮವನ್ನು ತಾಳಿ-
ದ್ದಾನೆ. ಅದರಿಂದ ಈ ದ್ವೇಷ ಔಪಾಧಿಕ. ಇದಕ್ಕೆ ಸರಿಯಾಗಿ ರಾಮ-
ಚಂದ್ರನೂ ತನ್ನ ನಿಜ ಭಕ್ತನೊಡನೆ ಅದ್ಭುತವಾದ ಯುದ್ಧದ ನಾಟಕವನ್ನಾಡಿ-
ದನು.
 
ದನು.
 
ಮಹಾವೀರರಿಬ್ಬರ ಕದನದ ಸಂರಂಭದಲ್ಲಿ ಭೂಮಿ, ಭಯ ದಿಂದ ನಡು
ಗಿತು ಬಿರುಗಾಳಿಗೆ ಸಿಕ್ಕ ಕಿರುದೋಣಿಯಂತೆ, . ಸೂರ್ಯನ ತಾಪ ಉಡುಗಿತು.
ಗಾಳಿ ಸ್ತಬ್ಧವಾಯಿತು. ದೇವತೆಗಳು ಭಗವಂತನನ್ನು ಪ್ರಾರ್ಥಿಸಿಕೊಂಡರು :
 
(6
 

 
" ಭಗವಾನ್, ಪ್ರಸನ್ನನಾಗು. ಶತ್ರುವನ್ನು ಸಂಹರಿಸಿ ನಮ್ಮನ್ನು
 

ಕಾಪಾಡು."
 

 
ದೇವತೆಗಳ ಪ್ರಾರ್ಥನೆಯನ್ನು ಭಗವಂತ ಮನ್ನಿಸದಿರು- ತ್ತಾನೆಯೆ ?
ಕೂಡಲೇ ರಾಮಚಂದ್ರ ಒಂದು ಬಾಣದಿಂದ ಒಮ್ಮೆಲೆ ರಾವಣನ ಹತ್ತು ತಲೆ
ಗಳನ್ನೂ ಕತ್ತರಿಸಿದನು. ಆದರೆ ರಾವಣ ಸಾಯಲಿಲ್ಲ. ಮತ್ತೆ ಹತ್ತು ತಲೆಗಳು
ಮೊದಲಿದ್ದಂತೆಯೇ ಮೂಡಿ- ಕೊಂಡವು. ಬ್ರಹ್ಮನ ವರಬಲದಿಂದ ರಾವಣನ
ತಲೆಗಳು ಕಡಿದಂತೆ ಚಿಗುರುತ್ತಿದ್ದವು !
 

 
ರಾಮಚಂದ್ರನು ಮುಗುಳುನಗೆ ಬೀರುತ್ತಲೆ ಇನ್ನೊಂದು ಬಾಣವನ್ನು
ಕೈಗೆತ್ತಿಕೊಂಡೆಸೆದನು. ಸರ್ವಲೋಕ ಭಯಂಕರ- ವಾದ ಬಾಣ- ರಾಮ
ನಾಮಾಂಕಿತವಾದ ಆ ಬಾಣ– ರಾವಣನ ಎದೆಗೆ ನಾಟಿತು. ಕೂಡಲೆ ಅವನ
ದೇಹ, ಪುಷ್ಪಕದಿಂದ ಕೆಳ- ಗುರುಳಿತು. ಜೀವ ಮೇಲೇರಿತು. ಬಾಣವು ಮರಳಿ
ರಾಮನ ಬತ್ತಳಿ ಕೆಯನ್ನು ಬಂದು ಸೇರಿತು. ಜಗತ್ತು ಸಂತೋಷಾತಿರೇಕದಿಂದ

'ಉಘೇ' 'ಉಘೇ' ಎಂದಿತು.
 

 
ಸತ್ತುಳಿದ ರಾವಣನ ನೃಭೃತ್ಯರು ಈ ಭಯಂಕರ ದೃಶ್ಯವನ್ನು ಕಂಡು
ಹೆದರಿ ಓಡಿದರು. ಮರ ಉರುಳಿ ಬಿದ್ದರೆ ಅದರಲ್ಲಿ ಬೀಡು ಬಿಟ್ಟಿದ್ದ ಹಕ್ಕಿಗಳು
ಹಾರದೆ ಇರುತ್ತವೆಯೆ ?