This page has been fully proofread once and needs a second look.

ಮಿಂಚಿನಬಳ್ಳಿ
 
ಅಪೂರ್ವವಾಗಿತ್ತು. ಅವನು ಮಾಡಿದ ಯುದ್ಧ ಅದ್ಭುತವಾಗಿತ್ತು. ಇನ್ನೊಬ್ಬ
ವ್ಯಕ್ತಿ ಅದನ್ನು ಕಲ್ಪಿಸಲೂ ಆರ.
 
ಲಾರ.
 
ಕಡಲು ಕಡಲಿನಂತಿದೆ. ಮುಗಿಲು ಮುಗಿಲಿನಂತಿದೆ. ರಾಮ-ರಾವಣರ
ಯುದ್ಧ ರಾಮ-ರಾವಣರ ಯುದ್ಧದಂತೆಯೆ ಇದೆ. ಇದಕ್ಕೆ ಇನ್ನೊಂದು ಉಪ
ಮಾನ ಸಿಗಲಾರದು. ಕವಿಗಳ ಕಲ್ಪನಾ- ವಿಲಾಸ ಇಲ್ಲಿ ಸೋತಿದೆ. ಕವಿಗಳ
ಉಪನಾಮಾ ಶಕ್ತಿ ಇಲ್ಲಿ ಬರಡಾ- ಗಿದೆ. ನಿರುಪಮಾನನಾದ ಭಗವಂತನ ಯುದ್ಧಕ್ಕೆ
ಉಪಮಾನ ವೆಲ್ಲಿಯದು ? ಪ್ರಪಂಚದ ಇತಿಹಾಸದಲ್ಲಿ ಅಂಥ ಮಹಾಯುದ್ಧ

ಇನ್ನೊಂದು ನಡೆದಿಲ್ಲ. ಅದಕ್ಕೆ ಸರಿಸಾಟಿಯಾದ ಯುದ್ಧ ಇನ್ನೊಂದಿಲ್ಲ ಎನ್ನು
ವುದೇ ಅದಕ್ಕೆ ಭೂಷಣ.
 

 
ರಾವಣನು ಸರ್ವ ಪ್ರಯತ್ನದಿಂದ ರಾಮಚಂದ್ರನ ರಥದ ಮೇಲೆ, ಸಾರ-
ಥಿಯ ಮೇಲೆ, ಕುದುರೆಗಳ ಮೇಲೆ ಬಾಣವನ್ನೆಸೆದನು. ಇದನ್ನು ಕಂಡು ರಾಮ
ಚಂದ್ರನು ಕುಪಿತನಾದನು. ಕರುಣಾ- ಮೂರ್ತಿಯಾದ ರಾಮಚಂದ್ರನಿಗೆ ಕೋಪ
ವೆಲ್ಲಿಯದು ? ಭಗವಂತನು ಭಕ್ತರನ್ನು ಕರುಣಿಸುವ ರೀತಿಗಳಲ್ಲಿ ಇದೂ

ಒಂದಿರಬೇಕು.
 

 
ನಿತ್ಯವೂ ಮಂದಹಾಸವನ್ನೆ ಬೀರುತ್ತಿದ್ದ ರಾಮನ ಮೋರೆ- ಯಲ್ಲಿ ಹುಬ್ಬು
ಗಂಟಿಕ್ಕಿದ್ದನ್ನು ಕಂಡು ಲೋಕವೇ ಬೆದರಿತು. ರಾವಣನ ಎದೆಯೂ ನಡುಗ
ದಿರಲಿಲ್ಲ. ಅವನು ಆಪದ್ಧನದಂತಿರ ತಕ್ಕ ಶೂಲವನ್ನು ಕೈಗೆತ್ತಿಕೊಂಡನು;
ಪ್ರಳಯಕಾಲದ ಬೆಂಕಿ- ಯಂತೆ ಭೀಷಣವಾದ ಆ ಶೂಲ ತನ್ನ ಮೈಯನ್ನು
ಮುಟ್ಟುವ ಮುನ್ನವೇ ರಾಮಚಂದ್ರನು ಶಕ್ತಾತ್ಯಾಯುಧದಿಂದ ಅದನ್ನು ಕತ್ತರಿ

ಸಿದನು. ಜತೆಗೆ ರಾಮನ ಬಾಣಗಳು ರಾವಣನ ಕೈ-ಮೈಗಳನ್ನೂ ಗಾಯ
 
ಗೊಳಿಸಿದವು.
 

 
ಬಾಣಗಳಿಗೆ ಪ್ರತಿಯಾಗಿ ಬಾಣಗಳನ್ನು ಎಸೆಯುತ್ತಲೆ ರಾಮಚಂದ್ರನು
ರಾವಣನಿಗೆ ಕೊನೆಯ ಎಚ್ಚರಿಕೆಯನ್ನಿತ್ತನು :
 

 
"ನೀನು ಮಹರ್ಷಿ ವಿಶ್ರವಸನ ಮಗ, ಕುಬೇರನ ಸೋದರ. ಜಗತ್ತಿನ
ಮಹಾವೀರ, ನಿನ್ನ ತೋಳ್ ಬಲದಿಂದ ದಿಕ್‌ಚಕ್ರವನ್ನೆ ಗೆದ್ದ ಧೀರ. ಎಲ್ಲ
ನಿಜ, ಆದರೆ ಎಲ್ಲ ಗುಣಗಳನ್ನೂ ನುಂಗುವ ಒಂದು ತಪ್ಪನ್ನು ನೀನು ಮಾಡಿದೆ.
ಜನ್ಮ ಸಿದ್ಧವಾದ ನೀಚ ಬುದ್ಧಿ ಯನ್ನು ನೀನು ತೋರಿದೆ. ಸ್ತ್ರೀ ಚೌರ್ಯದಿಂದ