This page has been fully proofread once and needs a second look.

ಸಂಗ್ರಹರಾಮಾಯಣ
 
ಇಂದ್ರನ ಸಾರಥಿಯಾದ ಮಾತಲಿ ರಥವನ್ನು ರಾಮಚಂದ್ರನ ಮುಂದೆ
ತಂದು ನಿಲ್ಲಿಸಿ ವಿಜ್ಞಾಪಿಸಿಕೊಂಡನು:
 

 
"ಜಗನ್ನಾಥನಾದ ನಿನಗೆ ವಿಜಯವಾಗಲಿ. ಇಂದ್ರನು ನಿನಗಾಗಿ ಕಳಿಸಿದ
ಈ ರಥವನ್ನೇರುವ ಕೃಪೆ ಮಾಡಬೇಕು."
 

 
ಮಾತಲಿಯ ಮಾತನ್ನು ಮನ್ನಿಸಿ ರಾಮಚಂದ್ರ ರಥವೇರಿದನು ಭಾನು
ದೇವ ಉದಯಾದಿದ್ರಿಯನ್ನೇರುವಂತೆ. ರಾವಣನ ಬಗೆಬಗೆಯ ಬಾಣಗಳು
ರಾಮಚಂದ್ರನ ಮೇಲೆ ಧಾಳಿಯಿಡತೊಡಗಿದವು. ಆದರೆ ರಣರಂಗದಲ್ಲೂ
ತ್ರಿಲೋಕ ಜೀವನವಾದ ಮಂದಹಾಸ ವನ್ನು ಬೀರುತ್ತಿರುವ ರಾಮಚಂದ್ರ ಅವು
ಗಳನ್ನು ನಡುದಾರಿ ಯಲ್ಲಿಲೆ ಕತ್ತರಿಸಿ ರಾವಣನ ಮೇಲೆಯೆ ಒಂದಿಷ್ಟು ಬಾಣ
ಗಳನ್ನು ಸುರಿಸಿದನು. ಜಗತ್ತೆ ಅಚ್ಚರಿ ಪಡುವಂತೆ ರಾಮ ರಾವಣರ ಯುದ್ಧ

ನಡೆಯಿತು ! ಇಬ್ಬರ ಬಾಣಗಳಿಂದಲೂ ಮುಗಿಲು ಮುತ್ತಿ- ಹೋಗಿತ್ತು. ಕತ್ತಲೆ
ಕವಿದು ನೆಲ ಕುರುಡಾಯಿತು; ರಾಕ್ಷಸರ ಬಾಳು ಬರಡಾಯಿತು !
 
೨೧೩
 

 
ಕಪಿಗಳೂ ರಾಕ್ಷಸರೂ ಈ ಅದ್ಭುತವನ್ನು ಕಂಡು ಬೆರಗಾಗಿ ಮೂಗಿನ
 
ಮೇಲೆ ಬೆರಳೇರಿಸಿದರು !
 

 
ರಾವಣನು ಪುಂಖಾನುಪುಂಖವಾಗಿ ಬಿಟ್ಟ ಸಾವಿರಾರು ಬಾಣಗಳು
ಸಜ್ಜನರ ಹೃದಯದಂತೆ- ಹೂವಿನಂತೆ ರಾಮನೆಡೆಗೆ ಬಂದಾಗ ಮಿದುವಾಗಿ
ಬಿಡುತ್ತಿದ್ದವು. . ಆದರೆ ರಾಮಚಂದ್ರನ ಒಂದೊಂದು ಬಾಣವೂ ರಾವಣನಿಗೆ
ಪ್ರಾಣಾಂತಿಕ ವೇದನೆ- ಯನ್ನುಂಟು ಮಾಡುತ್ತಿತ್ತು.
 

 
ಬ್ರಹ್ಮಂಮೇಂದ್ರಾದಿಗಳು ರಾಮಚಂದ್ರನ ದಾಸರಲ್ಲವೆ ? ಭಗವಂತನ ಭಕ್ತ
ರಲ್ಲವೆ ? ಅವರ ಶಕ್ತಿ ಇವನ ಅನುಗ್ರಹದ ಫಲ- ವಲ್ಲವೆ ? ಅಂಥ ರಾಮಚಂದ್ರ
ನಿಗೆ ಎಂಥ ದಿವ್ಯಾಸ್ತ್ರಗಳು ಏನು ಮಾಡಬಲ್ಲವು ? ರಾವಣನ ಎಲ್ಲ ಅಸ್ತ್ರಗಳೂ
ರಾಮಚಂದ್ರನ ಪ್ರತ್ಯಸ್ತ್ರಗಳ ಮುಂದೆ ಸೋಲನ್ನೊಪ್ಪಿದವು.
 

 
ಯಾವುದನ್ನು ಇನ್ನೊಬ್ಬರು ಮಾಡಲಾರರೊ ಯಾವುದನ್ನು ಜಗತ್ತು
ಅಸಂಭವವೆಂದು ತಿಳಿಯುವದೋ ಅಂಥ ಸಾಹಸವನ್ನು ರಾವಣ ಯುದ್ಧದಲ್ಲಿ
ತೋರಿಸಿದನು. ಆದರೆ ರಾಮಚಂದ್ರನ ಮುಂದೆ ಅದು ನಿಷ್ಲವಾಯಿತು.
ಬೆಂಕಿಯ ಮುಂದೆ ಪತಂಗದ ಸಾಹಸ ಏತರದು ? ಸೂರ್ಯನ ಮುಂದೆ
 
ತಾರಗೆರೆಗಳ ಮಿಣುಕು ಯಾವ ಲೆಕ್ಕ? ಆದರೂ ರಾವಣನು ತೋರಿದ ಸಾಹಸ