This page has been fully proofread once and needs a second look.

ಸಂಗ್ರಹರಾಮಾಯಣ
 
ಅಂಗದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾನೆ. ಸೇನೆ ಎದ್ದು ಹೋರಾಡುವ
ಸ್ಥಿತಿಯಲ್ಲಿಲ್ಲ. ಇದನ್ನು ಕಂಡು ಸುಮ್ಮನಿರುವುದು ಸಾಧ್ಯವೆ ? ಕೂಡಲೆ
ಸುಗ್ರೀವನು ಸುಷೇಣನನ್ನು ಸೇನಾರಕ್ಷಣೆಗೆ ನಿಯಮಿಸಿ ತಾನು ಶತ್ರುಗಳನ್ನು
ಎದುರಿಸಿದನು. ಸುಗ್ರೀವನು ತಂದೊಗೆದ ಮಹಾಪರ್ವತವೊಂದರ ಪೆಟ್ಟಿಗೆ
ಇಬ್ಬರೂ ರಾಕ್ಷಸರು ಒಟ್ಟಿಗೇ ನುಗ್ಗಾದರು. ಬಂಡೆಯಡಿಗೆ ಸಿಕ್ಕಿದ ಮಣ್ಣು -
ಮುದ್ದೆ ಯಂತೆ !
 
೨೧೧.
 

 
ನಾಲ್ವರೂ ಮಂತ್ರಿಗಳು ಮೃತರಾದಾಗ ರಾವಣನಿಗೆ ಸಹನೆ- ಯಾಗಲಿಲ್ಲ.
ಅವನು ಉಲ್ಬಣವಾದ ಬಾಣವೊಂದರಿಂದ ಸುಗ್ರೀವನ ಎದೆಯನ್ನು ಗಾಯ
ಗೊಳಿಸಿದನು. ಕಪಿರಾಜ ಮೂರ್ಛಿತನಾಗಿ ನೆಲಕ್ಕುರುಳಿದ !
 

 
ಉಳಿದ ಕಪಿಗಳು ಬೆಂಕಿಯಂತೆ ಮುನ್ನುಗ್ಗುತ್ತಿರುವ ರಾವಣ- ನನ್ನು ಕಂಡೇ
ಹಿಮ್ಮೆಟ್ಟಿದರು. ರಾವಣನು ರಾಮನನ್ನರಸಿ- ಕೊಂಡು ನಡೆದನು. ನಡುವೆ
ಲಕ್ಷ್ಮಣನು ಅವನನ್ನು ತಡೆದನು. ಹತ್ತು ತಲೆಯ ರಾವಣನಿಗೂ ಹರೆಯದ
ಸೌಮಿತ್ರಿಗೂ ವಿಚಿತ್ರ ವಾದ ಕದನ ನಡೆಯಿತು.
 

 
ಇತ್ತ ವಿಭೀಷಣನ ಗದೆ ರಾವಣನ ಸೈನ್ಯಕ್ಕೆ ಬುದ್ಧಿ ಕಲಿಸುತ್ತಿತ್ತು. ಅದನ್ನು
ಕಂಡು ರಾವಣನು ಭಯಾನಕವಾದ ಶಕ್ತಾತ್ಯಾಯುಧ- ವನ್ನು ತಮ್ಮನ ಮೇಲೆಸೆ-
ದನು. ಅದನ್ನು ಅರ್ಧಮಾರ್ಗದಲ್ಲಿ ಲಕ್ಷ್ಮಣನ ಮೂರು ಬಾಣಗಳು ಕತ್ತರಿ-
ಸಿದವು. ಕಪಿಗಳು ಸಂತಸ ದಿಂದ 'ಹೋ' ಎಂದು ಕೂಗಿಬಿಟ್ಟರು. ರಾಮನ
ತಮ್ಮನ ಜತೆಗೆ ತನ್ನ ತಮ್ಮನೂ ತನಗೆ ಎದುರುನಿಂತುದನ್ನು ಕಂಡು ರಾವಣನು

ಕನಲಿ ಕೆಂಡವಾದನು. ಅವನ ವೀರವಾಣಿ ಲಕ್ಷ್ಮಣನನ್ನು ಮೂದಲಿಸಿತು :
*

 
"
ಲಕ್ಷಣ, ನಿನ್ನಿಂದ ವಿಭೀಷಣ ಬದುಕಿಕೊಂಡ.
ಅದು ದೊಡ್ಡ
ಮಾತಲ್ಲ. ನೀನು ಬಲಿಷ್ಠನಾದುದು ನಿಜವಾದರೆ ನನ್ನ ಈ ಕಾಲದಂಡದಿಂದ
ನಿನ್ನನ್ನು ಬದುಕಿಸಿಕೊಳ್ಳಿ "
 
ಅದು ದೊಡ್ಡ-
66
 

 
ರಾವಣನು ಲಕ್ಷ್ಮಣನ ಮೇಲೆಸೆದ ಶಕ್ತಿ ಬ್ರಹ್ಮನಿಂದ ಮಯ- ನಿಗೂ ಮಯ
ಎಂ
' ಮಯನಿಂದ ರಾವಣನಿಗೂ ಅನುಕ್ರಮವಾಗಿ ಬಂದಿತ್ತು. ಕಾಲದಂಡದಂಥ ಶಕ್ತಾ-
ತ್ಯಾಯುಧ ಕ್ಷಣಾರ್ಧದಲ್ಲಿ ಲಕ್ಷ್ಮಣನ ಎದೆಯನ್ನು ಸೀಳಿತು. ಲಕ್ಷ್ಮಣನು ಮೂರ್ಛಿತ
ನಾದನು.
 

 
ಲಕ್ಷ್ಮಣನು ಬಿದ್ದುದೇ ತಡ; ಹನುಮಂತ ದೊಡ್ಡ ಬೆಟ್ಟ- ವೊಂದನ್ನು
ತಂದು ರಾವಣನ ಮೇಲೆ ಹೊಡೆದನು. ಬೆಟ್ಟದ ಪೆಟ್ಟಿಗೆ ರಾವಣನ ಮೈಯ