2023-03-15 15:35:59 by ambuda-bot
This page has not been fully proofread.
ಸಂಗ್ರಹರಾಮಾಯಣ
ಅಂಗದ ಸಂದಿಗ್ಧ ಪರಿಸ್ಥಿತಿಯಲ್ಲಿದ್ದಾನೆ. ಸೇನೆ ಎದ್ದು ಹೋರಾಡುವ
ಸ್ಥಿತಿಯಲ್ಲಿಲ್ಲ. ಇದನ್ನು ಕಂಡು ಸುಮ್ಮನಿರುವುದು ಸಾಧ್ಯವೆ ? ಕೂಡಲೆ
ಸುಗ್ರೀವನು ಸುಷೇಣನನ್ನು ಸೇನಾರಕ್ಷಣೆಗೆ ನಿಯಮಿಸಿ ತಾನು ಶತ್ರುಗಳನ್ನು
ಎದುರಿಸಿದನು. ಸುಗ್ರೀವನು ತಂದೊಗೆದ ಮಹಾಪರ್ವತವೊಂದರ ಪೆಟ್ಟಿಗೆ
ಇಬ್ಬರೂ ರಾಕ್ಷಸರು ಒಟ್ಟಿಗೇ ನುಗ್ಗಾದರು. ಬಂಡೆಯಡಿಗೆ ಸಿಕ್ಕಿದ ಮಣ್ಣು -
ಮುದ್ದೆ ಯಂತೆ !
೨೧೧.
ನಾಲ್ವರೂ ಮಂತ್ರಿಗಳು ಮೃತರಾದಾಗ ರಾವಣನಿಗೆ ಸಹನೆಯಾಗಲಿಲ್ಲ.
ಅವನು ಉಲ್ಬಣವಾದ ಬಾಣವೊಂದರಿಂದ ಸುಗ್ರೀವನ ಎದೆಯನ್ನು ಗಾಯ
ಗೊಳಿಸಿದನು. ಕಪಿರಾಜ ಮೂರ್ಛಿತನಾಗಿ ನೆಲಕ್ಕುರುಳಿದ !
ಉಳಿದ ಕಪಿಗಳು ಬೆಂಕಿಯಂತೆ ಮುನ್ನುಗ್ಗುತ್ತಿರುವ ರಾವಣನನ್ನು ಕಂಡೇ
ಹಿಮ್ಮೆಟ್ಟಿದರು. ರಾವಣನು ರಾಮನನ್ನರಸಿಕೊಂಡು ನಡೆದನು. ನಡುವೆ
ಲಕ್ಷ್ಮಣನು ಅವನನ್ನು ತಡೆದನು. ಹತ್ತು ತಲೆಯ ರಾವಣನಿಗೂ ಹರೆಯದ
ಸೌಮಿತ್ರಿಗೂ ವಿಚಿತ್ರವಾದ ಕದನ ನಡೆಯಿತು.
ಇತ್ತ ವಿಭೀಷಣನ ಗದೆ ರಾವಣನ ಸೈನ್ಯಕ್ಕೆ ಬುದ್ಧಿ ಕಲಿಸುತ್ತಿತ್ತು. ಅದನ್ನು
ಕಂಡು ರಾವಣನು ಭಯಾನಕವಾದ ಶಕ್ತಾಯುಧವನ್ನು ತಮ್ಮನ ಮೇಲೆಸೆ-
ದನು. ಅದನ್ನು ಅರ್ಧಮಾರ್ಗದಲ್ಲಿ ಲಕ್ಷ್ಮಣನ ಮೂರು ಬಾಣಗಳು ಕತ್ತರಿ-
ಸಿದವು. ಕಪಿಗಳು ಸಂತಸದಿಂದ 'ಹೋ' ಎಂದು ಕೂಗಿಬಿಟ್ಟರು. ರಾಮನ
ತಮ್ಮನ ಜತೆಗೆ ತನ್ನ ತಮ್ಮನೂ ತನಗೆ ಎದುರುನಿಂತುದನ್ನು ಕಂಡು ರಾವಣನು
ಕನಲಿ ಕೆಂಡವಾದನು. ಅವನ ವೀರವಾಣಿ ಲಕ್ಷ್ಮಣನನ್ನು ಮೂದಲಿಸಿತು :
* ಲಕ್ಷಣ, ನಿನ್ನಿಂದ ವಿಭೀಷಣ ಬದುಕಿಕೊಂಡ.
ಮಾತಲ್ಲ. ನೀನು ಬಲಿಷ್ಠನಾದುದು ನಿಜವಾದರೆ ನನ್ನ ಈ ಕಾಲದಂಡದಿಂದ
ನಿನ್ನನ್ನು ಬದುಕಿಸಿಕೊಳ್ಳಿ"
ಅದು ದೊಡ್ಡ-
66
ರಾವಣನು ಲಕ್ಷ್ಮಣನ ಮೇಲೆಸೆದ ಶಕ್ತಿ ಬ್ರಹ್ಮನಿಂದ ಮಯನಿಗೂ ಮಯ
ಎಂದ ರಾವಣನಿಗೂ ಅನುಕ್ರಮವಾಗಿ ಬಂದಿತ್ತು. ಕಾಲದಂಡದಂಥ ಶಕ್ತಾ-
ಯುಧ ಕ್ಷಣಾರ್ಧದಲ್ಲಿ ಲಕ್ಷ್ಮಣನ ಎದೆಯನ್ನು ಸೀಳಿತು. ಲಕ್ಷ್ಮಣನು ಮೂರ್ಛಿತ
ನಾದನು.
ಲಕ್ಷ್ಮಣನು ಬಿದ್ದುದೇ ತಡ; ಹನುಮಂತ ದೊಡ್ಡ ಬೆಟ್ಟವೊಂದನ್ನು
ತಂದು ರಾವಣನ ಮೇಲೆ ಹೊಡೆದನು. ಬೆಟ್ಟದ ಪೆಟ್ಟಿಗೆ ರಾವಣನ ಮೈಯ