2023-03-15 15:35:59 by ambuda-bot
This page has not been fully proofread.
ಮಿಂಚಿನಬಳ್ಳಿ
ಮೃತ್ಯುವಿನ ಬರವಿಗೆ ಸೂಚನೆಯಲ್ಲವೆ? ಆದರೆ ರಾಕ್ಷಸೇಶ್ವರನು ಇದನ್ನು ಲಕ್ಷಿಸಲೇ
ಇಲ್ಲ. ಅವನಿಗಿರುವುದು ಒಂದೇ ದಾರಿ, ಯುದ್ಧ ! ರಾಮನೊಡನೆ ಯುದ್ಧ !
ಮುನ್ನುಗ್ಗುತ್ತಿರುವ ರಾಕ್ಷಸ ಸೇನೆಯನ್ನು ಕಪಿಗಳು ಅಡ್ಡಗಟ್ಟಿದರು.
ರಾವಣನು ಕಪಿಗಳ ಮೇಲೆ ಬಾಣಗಳನ್ನು ಸುರಿಸಿದನು. ಕೆಲ ಕಪಿಗಳು ಹೆದರಿ
ಓಡಿದರು. ಕೆಲವರು ಮುನ್ನುಗ್ಗಿ ರಾಕ್ಷಸರನ್ನು ಸದೆಬಡಿಯುತ್ತಲೇ ಇದ್ದರು.
ರಾವಣನ ಅಪಾರ ಶರವರ್ಷದ ಮಧ್ಯದಲ್ಲಿ ಕಪಿಗಳು ರಾಕ್ಷಸ ಸೇನೆಯ ಬಹು
ಭಾಗವನ್ನು ನಾಶಗೊಳಿಸಿಬಿಟ್ಟರು!
೨೧ರಿ
ಆಗ ಕಪಿಗಳ ಕೈಯಿಂದ ರಾಕ್ಷಸರನ್ನು ಉಳಿಸುವುದಕ್ಕಾಗಿ ಭಾರೀ
ದೇಹದ ಮಹೋದರ ಮುಂದೆ ಬಂದನು. ಅವನ ಪರ್ವತದಂಥ ಮೈಯನ್ನು
ಕಂಡು, ಅವನ ಬಾಣಗಳ ಪ್ರವಾಹವನ್ನು ಕಂಡು ಇವನು ಸಾಮಾನ್ಯನಲ್ಲ;
ಕುಂಭಕರ್ಣನೇ ೬ರುಗಿ ಬದುಕಿ ಬಂದಿರಬೇಕು" ಎಂದು ಕಪಿಗಳು ಭೀತರಾಗಿ
ಓಡತೊಡಗಿದರು. ಆಗ ಅಂಗದನು ಅವರನ್ನು ಸಂತೈಸಿದ :
* ಇದು ಬರಿಯ ಬೆದರಿಕೆ ಮಾತ್ರ. ಈ ಬೊಜ್ಜು ಮೈಯ ರಕ್ಕಸನಿಂದ
ಏನೂ ಸಾಗುವಂತಿಲ್ಲ. ಇವನಿಗೆ ಹೆದರಿ ನೀವಾರೂ ಓಡಬಾರದು. >>
ಕಪಿಗಳನ್ನು ಹುರಿದುಂಬಿಸಿ ಸ್ವಯಂ ಅಂಗದನೇ ಮಹೋದರನ ಜತೆ
ಕಾದಾಡಲು ಹೋದನು. ಇಬ್ಬರೂ ಅದ್ಭುತವಾದ ಯುದ್ಧ ಕೌಶಲವನ್ನು
ತೋರಿದರು. ಮಹೋದರ ಬಾಣಗಳನ್ನು ಸುರಿಸುತ್ತಿದ್ದಂತೆಯೇ ಅಂಗದನು
ಮುಂದುವರಿದು ಅವನ ಜುಟ್ಟಕ್ಕೇ ಕೈ ಕೊಟ್ಟನು. ಅಲ್ಲಿಗೆ ಮಹೋದರನ
ಪೌರುಷ ಮುಗಿಯಿತು. ಅಂಗದ ಅವನನ್ನು ನೆಲಕ್ಕೆ ಕೆಡವಿ ತುಳಿದು
ಕೊಂದನು.
ಮಹೋದರ ಸತ್ತುದನ್ನು ಕಂಡು ಮಹಾಪಾರ್ಶ್ವ ಅಂಗದನ ಮೇಲೇರಿ-
ಬಂದನು. ಅಂಗದ ಹಾರಿ ಅವನ ಧನುಸ್ಸನ್ನೆ ಕಸಿದುಕೊಂಡನು. ಮಹಾ-
ಪಾರ್ಶ್ವ ಖಡ್ಗವನ್ನು ಝಳಪಿಸಿದನು. ಖಡ್ಗಕ್ಕೂ ಹಿಂದಿನದೇ ಗತಿಯಾಯಿತು.
ಅಂಗದ ಆ ಖಡ್ಗವನ್ನೂ ಅವನಿಂದ ಕಸಿದುಕೊಂಡು ಶತ್ರುವಿನ ಆಯುಧದಿಂದಲೆ
ಶತ್ರುವನ್ನು ತುಂಡರಿಸಿದನು.
ಈಗ ರೂಪಾಕ್ಷ, ವಿರೂಪಾಕ್ಷರ ಸರದಿ. ಅವರಿಬ್ಬರೂ ಜತೆಯಾಗಿ
ಸುರಿಸಿದ ಬಾಣಗಳಿಂದ ತಪ್ಪಿಸಿಕೊಳ್ಳುವುದು ಅಂಗದನಿಗೂ ಅಶಕ್ಯವಾಯಿತು.
ಪಂಜರದಲ್ಲಿ ಸಿಕ್ಕಿಬಿದ್ದ ಹುಲಿಯಂತಾಯಿತು ಅಂಗದನ ಪಾಡು.