This page has been fully proofread once and needs a second look.

ಸಂಗ್ರಹರಾಮಾಯಣ
 
ನೆಲದಲ್ಲಿ ರಾಮ, ಮುಗಿಲಲ್ಲಿ ರಾಮ, ಸನಿಯದಲ್ಲಿ ರಾಮ, ದೂರಸರಿದರೆ
ಅಲ್ಲೂ ರಾಮ, ಸ್ವಪಕ್ಷದಲ್ಲೂ, ಶತ್ರುಪಕ್ಷದಲ್ಲೂ ರಾಮನೇ ರಾಮ. ಎತ್ತಲೂ
ರಾಮ ! ರಾಮನಿರದ ತಾಣವೆಲ್ಲಿ 2? ವಿಶ್ವಮೂರ್ತಿಯಾದ ರಾಮನಿಗೆ ಶತ್ರು-
ಗಳನ್ನು ಸಂಹರಿಸಲು ಕಪಿಗಳ ಆಶ್ರಯ ಬೇಕೆ ? ಎಲ್ಲ ಪರಮಚೇತನನ ಲೀಲೆ
ಎಂದು ದೇವತೆಗಳು ಪುಲಕಿತರಾಗಿ ಕೈ ಮುಗಿದರು.
 

 
ಅನಂತ ರಾಮರು, ಅನಂತ ಆಯುಧಗಳಿಂದ ರಾವಣನ ಸೇನೆ- ಯನ್ನು
ಸಂಹರಿಸಿದರು ! ರಾಕ್ಷಸರ ಹೆಮ್ಮೆಯ ಮೂಲಬಲ ನಿರ್ಮೂಲವಾಯಿತು !
ಏಕ ಅನೇಕವಾದುದರ ಕೃತ್ಯ ಮುಗಿ- ಯಿತು. ಮತ್ತೆ ಅನೇಕ ಏಕವಾಯಿತು.

"ಪೂರ್ಣಮದಃ ಪೂರ್ಣಮಿದಮ್.
 
"
 
ಅಚ್ಚರಿಯಿಂದ ಕಣ್ಣರಳಿಸಿ ನಿಂತ ಕಪಿಗಳು ಈ ಅದ್ಭುತವನ್ನು ಕಂಡು
ಕೃತಾರ್ಥರಾದರು. ಪುಣ್ಯಚೇತನರು "ಪೂರ್ಣತತ್ವಕ್ಕೆ ನಮೋ" ಎಂದರು.
 

 
ಇತಿಹಾಸದ ಮಹಾಯುದ್ಧ
 

 
ಒಬ್ಬ ರಾಮನಿಂದ ಮೂಲ ಬಲವೆಲ್ಲ ನಾಶವಾಯಿತು ಎಂಬ ವಾರ್ತೆ
ಕೇಳಿದ ಮೇಲೆ ರಾವಣನಿಗೆ ಬದುಕುವ ಆಸೆ ಉಳಿದಿರಲಿಲ್ಲ. ಆದರೆ ಹೇಡಿ
ಯಂತೆ ಶರಣಾಗತನಾಗುವುದು ಅವನಿಗೆ ಬೇಕಿಲ್ಲ. ಕೊನೆಯುಸಿರು ಇರುವ
ತನಕವೂ ಹೋರಾಡಿ ಸಾಯುವುದೇ ಸರಿ ಎಂದು ಅವನ ಮತ
 
.
 
ಕೋಪದಿಂದ ಮೈ ಕೆಂಪೇರಿತು. ಕಣ್ಣು ಕಿಡಿಕಾರಿತು. "ಮಂಗಗಳೂ
ಮನುಷ್ಯರೂ ಈ ನೆಲದಲ್ಲಿ ಹುಟ್ಟಿಯೇ ಇಲ್ಲ ಎಂದು ಮಾಡಿಬಿಡುವೆನು"
ಎನ್ನುತ್ತ ಯುದ್ಧ ಸನ್ನದ್ಧನಾಗಿ ಪುಷ್ಪಕವನ್ನೇರಿದನು.
 

 
ವಿರೂಪಾಕ್ಷ, ಯೂಪಾಕ್ಷ, ಮಹಾಪಾರ್ಶ್ವ, ಮಹೋದರರೆಂಬ

ನಾಲ್ವರು ಮಂತ್ರಿಗಳು ಅವನ ಜತೆಗೆ ಬಂದರು. ಸತ್ತು ಉಳಿದ ಕೆಲ ಕ್ಕಸ
ರೂ ರಾವಣನ ಹಿಂದೆ ಸೇರಿಕೊಂಡರು.
 

 
ದಾರಿಯಲ್ಲಿ ರಾವಣನ ಕಣ್ಣಿಗೆ ಮೊದಲು ಬಿದ್ದುದು ಶತ್ರು- ಗಳಲ್ಲ-ಅಪ
ಶಕುನಗಳು ! ಮುಗಿಲಿನಿಂದ ಕೆನ್ನೀರಿನ ಮಳೆ ಸುರಿ- ಯುತ್ತಿತ್ತು. ನಗರದ ಸುತ್ತ
ನರಿಗಳು ಊಳಿಡುತ್ತಿದ್ದವು. ಸಾಲದ್ದಕ್ಕೆ ರಾವಣನ ಎಡಮೈ ಅದುರಿತು. ಇದು