This page has been fully proofread once and needs a second look.

మంచినబళ్ళి
 
ನೂರಾರು ಅಕ್ಷೇಷೋಹಿಣಿ ಸೇನೆಗಳ ಸಾಗರ ! ಹೆದ್ದೆರೆಗಳಂತೆ ಒಂದರ
 
ಮೇಲೊಂದು ನುಗ್ಗಿ ಬರುವ ಮದ್ದಾನೆಗಳು ! ತಿಮಿಂಗಿಲ ಗಳಂತೆ ಅತ್ತಿತ್ತ
ಚಲಿಸುವ ಬೃಹದ್ರಥಗಳು ! ದಕ್ಷಿಣ ಸಾಗರವ- ನ್ನೇನೋ ಕಪಿಗಳು ದಾಟಿದರು.
ಆದರೆ ಈ ಸೇನಾಸಾಗರವನ್ನು ದಾಟುವ ಬಗೆ ಹೇಗೆ ? ಇದನ್ನು ದಮಿಸಲು
ಎಂಥ ಸೇತುವೆ ಕಟ್ಟ- ಬೇಕು ? ಯಾರು ಕಟ್ಟಬೇಕು ? ಯಾರು ಕಟ್ಟಬೇಕು ?
 
೨೦೮
 

 
ಕೈಯಲ್ಲಿ ಜ್ವಾಲೆಯಂತೆ ಹೊಳೆಯುವ ಆಯುಧಗಳು ! ಹೊಗೆಯಂತೆ
ಮುಗಿಲು ಮುತ್ತಿ ಕಣ್ಕಟ್ಟಿಸುತ್ತಿರುವ ಧೂಳು ! ಇದೇನು ರಾವಣನ ಸೇನೆಯೋ
ಪು
ಪ್ರಳಯಾಂತ ಕರವಾದ ಬೆಂಕಿಯ ಬೇನೆಯೋ !
 

 
ಕಾಲ ತುಳಿತಕ್ಕೆ ಮರಗಳುರುಳುತ್ತಿವೆ. ಭಯದಿಂದ ಲೋಕದ ಕಣ್ಣು
ಕುರುಡಾಗಿದೆ. ರಾಕ್ಷಸ ಸೇನೆಯ ಆವೇಶಕ್ಕೆ ಬಲಿಯಾದ ಕಪಿಗಳು ಬಿರುಗಾಳಿಗೆ
ಸಿಕ್ಕಿದ ತರಗೆಲೆಯಂತೆ ಒದ್ದಾಡಿದರು ! ಇದು ಎಂಥ ಸೇನೆ !
 

 
ಕಪಿಗಳನ್ನೆಲ್ಲ ಸೋಲಿಸಿದ ರಾವಣಸೇನೆ ರಾಮನಿದ್ದೆಡೆಗೆ ಸರಿಯಿತು;
ಬೆಂಕಿಯಮೇಲೆ ಮುತ್ತುವ ಪತಂಗಗಳಂತೆ ! ಏಕಕಾಲ ದಲ್ಲಿ ನೂರು ಸೈನಿಕರ
ನೂರು ಆಯುಧಗಳು ರಾಮನಮೇಲೆ ಬಿದ್ದವು.
 

 
ಒಬ್ಬ ರಾಮನು ಕೋಟಿ ರಾಕ್ಷಸರನ್ನು ಕೊಲ್ಲಬಲ್ಲನೆ ಎಂದು ಕೆಲವರು
ಶಂಕಿಸಿದರು. ಮಹಾವೀರನಾದ ರಾಮನಿಗೆ ಇವರನ್ನು ಸಂಹರಿಸುವುದು
 
ಶಂಕಿಸಿದರು.
 
ದೊಡ್ಡದಲ್ಲ ಎಂದು ಕೆಲವರು ವಾದಿಸಿದರು. ಜ್ಞಾನಿಗಳು ಮಾತ್ರ ಭಗವಂತನು
ಆಟಿಕೆಗಳೊಡನೆ ಆಡುತ್ತಿದ್ದಾನೆ ಎಂದು ಹರ್ಷಪುಲಕಿತರಾದರು. ಅವರವರ
ಬುದ್ಧಿ ಹರಿದಂತೆ ಅವರವರು ಕಲ್ಪಿಸಿಕೊಂಡರು.
 

 
ರಾಮಚಂದ್ರನು ಬಿಲ್ಲಿಗೆ ಹೆದೆಯೇರಿಸಿದನು. ಆ ಬಿಲ್ಲಿನ ಟಂಕಾರದಲ್ಲಿ
ರಾಕ್ಷಸರ ಸಾವಿನ ಸಂಕೇತವಿತ್ತು; ದೇವತೆಗಳ ವಿಜಯದ ಸಂದೇಶವಿತ್ತು.
 

 
ಒಬ್ಬ ರಾಮನು ಆನೆಗಳನ್ನು ಕಡಿದು ಚೆಲ್ಲುತ್ತಿದ್ದನು. ಇನ್ನೊಬ್ಬ
ರಾಮನ ಕೈಯಲ್ಲಿ ಕುದುರೆಗಳು ಜೀವ ಬಿಡುತ್ತಿದ್ದವು. ಒಬ್ಬ ರಾಮನ ಕೈಯಲ್ಲಿ
ಈಟಿ, ಇನ್ನೊಬ್ಬ ರಾಮನ ಕೈಯಲ್ಲಿ ಕತ್ತಿ, ಮತ್ತೊಬ್ಬ ರಾಮ ಬಿಲ್ಲಿನಿಂದ ಕೋಟಿ
ಕೋಟಿ ಬಾಣಗಳನ್ನು ದೈತ್ಯರ ಮೇಲೆ ಚೆಲ್ಲುತ್ತಿದ್ದಾನೆ ! ರಾಕ್ಷಸರು ನೋಡಿ-
-
ದಲ್ಲೆಲ್ಲ ರಾಮ ನ ರೂಪವನ್ನೆ ಕಂಡರು ! ಹುಬ್ಬಿನ ಕುಣಿತದಿಂದಲೆ ಜಗತ್ತನ್ನು

ನಿರ್ಮಿಸಬಲ್ಲ, ಸಂಹರಿಸಬಲ್ಲ ಭಗವಂತನು ವಿಶ್ವರೂಪದ ಲೀಲೆಯನ್ನಾಡಿದನು.