This page has been fully proofread once and needs a second look.

ಸಂಗ್ರಹ ರಾಮಾಯಣ
 
ಕಪಿಗಳು ಲಕ್ಷ್ಮಣನನ್ನು ಸುತ್ತುವರಿದು ಕೊಂಡಾಡಿದರು. ಮೂರುದಿನ
ರಾತ್ರಿ-ಹಗಲು ಅಖಂಡವಾಗಿ ನಡೆದ ಯುದ್ಧ ಕೊನೆಗೆ ಸುಖಾಂತವಾಗಿ ಕೊನೆ
ಗೊಂಡಿತು ! ದೇವತೆಗಳ ಹರಕೆ ಸಫಲವಾಯಿತು. ಸತ್ಯ ಗೆದ್ದಿತು; ಅನೃತ
 
ಸೋತಿತು.
 
968
 

 
ಇಂದ್ರಾರಿಯ ಮರಣದಿಂದ ಸಂತಸಗೊಂಡ ದೇವತೆಗಳು ಹೂಮಳೆ
ಸುರಿಸಿ ಲಕ್ಷ್ಮಣನನ್ನು ಉಪಚರಿಸಿದರು.
 

 
ಲಕ್ಷ್ಮಣನು ಹನುಮಂತನೊಡನೆ ಬಂದು ರಾಮನ ಕಾಲಿಗೆ- ರಗಿದನು.
ರಾಮಚಂದ್ರನ ಮಂದಹಾಸ ಸೌಮಿತ್ರಿಯನ್ನು ಹರಸಿತು. ಕಣ್ಣು ಕಾರುಣ್ಯ-
ವನ್ನು ಹರಿಸಿತು. ತೋಳುಗಳು ತಮ್ಮನನ್ನು ತಬ್ಬಿಕೊಂಡವು.
 

 
" ರಾಮೋ ಧರಣ್ಯಾಂ ಗಗನೇ ಚ ರಾಮಃ....! "

 
ರಾಮಸೇನೆಯ ಹರ್ಷಧ್ವನಿಯೊಡನೆ ರಾಕ್ಷಸ ಸೇನೆಯ ಶೋಕ ಧ್ವನಿ
 
ಮೇಳವಿಸಿತು.
 

 
ರಾವಣನ ದುಃಖದ ಹೊನಲು ಕಟ್ಟೆಯೊಡೆದು ಹರಿಯಿತು:
 

 
"ಇಂದ್ರನನ್ನು ಗೆಲಿದ ಓ ನನ್ನ ಕಂದನೇ, ತಾಯಿ ತಂದೆಗಳನ್ನು ತೊರೆದು
ಎತ್ತ ಹೋದೆ ? ನನ್ನನ್ನೂ ನಿನ್ನೆಡೆಗೆ ಕರೆದುಕೊ. ನಾನೂ ನಿನ್ನ ಜತೆಗೆ
 
ಬಂದುಬಿಡುವೆ."
 

 
ಸಿಟ್ಟಿನ ಭರದಲ್ಲಿ ರಾವಣನಿಗೆ ಸೀತೆಯನ್ನು ಕಡಿದು ಬಿಡಬೇಕು ಎನ್ನಿಸಿತು.
ಬೇರನ್ನೆ ಕಿತ್ತೆಸೆದರೆ ಮತ್ತೆ ಯಾರಿಗಾಗಿ ಈ ಯುದ್ಧ ? ರಾವಣನ ಕೈಯಲ್ಲಿ
ಕತ್ತಿ ಝಳಪಿಸಿತು. ಕಾಲು ಅಶೋಕವನದೆಡೆಗೆ ತೆರಳಿತು. ನಡುವೆ ಸುಪಾರ್ಶ್ವ
ಬಂದು ' ಅಂಥ ಕೆಲಸ ಮಾಡ ಬಾರದು' ಎಂದು ವಿನಂತಿಸಿಕೊಂಡನು. ಮಾತು
ನಾಟಿತು. ಮನಸ್ಸು ಒಪ್ಪಿತು. ಕತ್ತಿ ಒರೆಯನ್ನು ಸೇರಿತು. ರಾವಣ ಅಶೋಕ

ವನದಿಂದ ಸಭಾಭವನಕ್ಕೆ ನಡೆದ.
 

 
ಸಭೆಯಲ್ಲಿ ನಿರ್ಣಯವಾದಂತೆ ಅಸಂಖ್ಯವಾದ ಮೂಲ ಬಲವನ್ನು
ಯುದ್ಧಕ್ಕೆ ಕಳಿಸಲಾಯಿತು. ಅದು ಎಂಥ ಸೇನೆ ! ಕಂಡವರ ಎದೆ ನಡುಗಿ
ಸುವ ಸೇನೆ !