This page has not been fully proofread.

ಸಂಗ್ರಹ ರಾಮಾಯಣ
 
ಕಪಿಗಳು ಲಕ್ಷ್ಮಣನನ್ನು ಸುತ್ತುವರಿದು ಕೊಂಡಾಡಿದರು. ಮೂರುದಿನ
ರಾತ್ರಿ-ಹಗಲು ಅಖಂಡವಾಗಿ ನಡೆದ ಯುದ್ಧ ಕೊನೆಗೆ ಸುಖಾಂತವಾಗಿ ಕೊನೆ
ಗೊಂಡಿತು ! ದೇವತೆಗಳ ಹರಕೆ ಸಫಲವಾಯಿತು. ಸತ್ಯ ಗೆದ್ದಿತು; ಅನೃತ
 
ಸೋತಿತು.
 
968
 
ಇಂದ್ರಾರಿಯ ಮರಣದಿಂದ ಸಂತಸಗೊಂಡ ದೇವತೆಗಳು ಹೂಮಳೆ
ಸುರಿಸಿ ಲಕ್ಷ್ಮಣನನ್ನು ಉಪಚರಿಸಿದರು.
 
ಲಕ್ಷ್ಮಣನು ಹನುಮಂತನೊಡನೆ ಬಂದು ರಾಮನ ಕಾಲಿಗೆರಗಿದನು.
ರಾಮಚಂದ್ರನ ಮಂದಹಾಸ ಸೌಮಿತ್ರಿಯನ್ನು ಹರಸಿತು. ಕಣ್ಣು ಕಾರುಣ್ಯ-
ವನ್ನು ಹರಿಸಿತು. ತೋಳುಗಳು ತಮ್ಮನನ್ನು ತಬ್ಬಿಕೊಂಡವು.
 
" ರಾಮೋ ಧರಣ್ಯಾಂ • ಗಗನೇ ಚ ರಾಮಃ....! "
ರಾಮಸೇನೆಯ ಹರ್ಷಧ್ವನಿಯೊಡನೆ ರಾಕ್ಷಸ ಸೇನೆಯ ಶೋಕಧ್ವನಿ
 
ಮೇಳವಿಸಿತು.
 
ರಾವಣನ ದುಃಖದ ಹೊನಲು ಕಟ್ಟೆಯೊಡೆದು ಹರಿಯಿತು:
 
"ಇಂದ್ರನನ್ನು ಗೆಲಿದ ಓ ನನ್ನ ಕಂದನೇ, ತಾಯಿ ತಂದೆಗಳನ್ನು ತೊರೆದು
ಎತ್ತ ಹೋದೆ ? ನನ್ನನ್ನೂ ನಿನ್ನೆಡೆಗೆ ಕರೆದುಕೊ ನಾನೂ ನಿನ್ನ ಜತೆಗೆ
 
ಬಂದುಬಿಡುವೆ."
 
ಸಿಟ್ಟಿನ ಭರದಲ್ಲಿ ರಾವಣನಿಗೆ ಸೀತೆಯನ್ನು ಕಡಿದು ಬಿಡಬೇಕು ಎನ್ನಿಸಿತು.
ಬೇರನ್ನೆ ಕಿತ್ತೆಸೆದರೆ ಮತ್ತೆ ಯಾರಿಗಾಗಿ ಈ ಯುದ್ಧ ? ರಾವಣನ ಕೈಯಲ್ಲಿ
ಕತ್ತಿ ಝಳಪಿಸಿತು. ಕಾಲು ಅಶೋಕವನದೆಡೆಗೆ ತೆರಳಿತು. ನಡುವೆ ಸುಪಾರ್ಶ್ವ
ಬಂದು ಅಂಥ ಕೆಲಸ ಮಾಡಬಾರದು' ಎಂದು ವಿನಂತಿಸಿಕೊಂಡನು. ಮಾತು
ನಾಟಿತು. ಮನಸ್ಸು ಒಪ್ಪಿತು. ಕತ್ತಿ ಒರೆಯನ್ನು ಸೇರಿತು. ರಾವಣ ಅಶೋಕ
ವನದಿಂದ ಸಭಾಭವನಕ್ಕೆ ನಡೆದ.
 
ಸಭೆಯಲ್ಲಿ ನಿರ್ಣಯವಾದಂತೆ ಅಸಂಖ್ಯವಾದ ಮೂಲ ಬಲವನ್ನು
ಯುದ್ಧಕ್ಕೆ ಕಳಿಸಲಾಯಿತು. ಅದು ಎಂಥ ಸೇನೆ ! ಕಂಡವರ ಎದೆ ನಡುಗಿ
ಸುವ ಸೇನೆ !