2023-03-16 07:23:25 by jayusudindra
This page has been fully proofread once and needs a second look.
ಶ್ರೀನಾರಾಯಣಪಂಡಿತಾಚಾರ್ಯರ
ಸ೦ಗ್ರಹ ರಾಮಾಯಣ
ಬಾಲಕಾಂಡ
ಬೆಳೆದುಬಂದ ಸೂರ್ಯವಂಶ
ಬಹುಕಾಲದ ಹಿಂದಿನ ಮಾತು. ಭಗವಂತನು ತನ್ನ ಸೃಷ್ಟಿಲೀಲೆಯಲ್ಲಿ
ತೊಡಗುವ ಮೊದಲಿನ ಮಾತು. ಆಗ ಎಲ್ಲಿ ನೋಡಿದರಲ್ಲಿ ಕಪ್ಪು ನೀರಿನ
ಕಡಲೇ ಕಾಣಿಸುತ್ತಿತ್ತು. ಕಾಣುವುದೇನು ಬಂತು ? ಮಾನವ ಪ್ರಾಣಿಯೇ
ಇಲ್ಲದ ಆ ಕಾಲದಲ್ಲಿ ಕಾಣುವ ಕಣ್ಣಾದರೂ ಎಲ್ಲಿಂದ ಬರಬೇಕು ? ರಮೆಯರಸ
ನೊಬ್ಬನಲ್ಲದೆ ಇನ್ನಾವನೂ ಈ ಪ್ರಳಯ ಜಲಧಿಯ ಸೆಳೆತದಿಂದ ತಪ್ಪಿಸಿ
ಕೊಳ್ಳಲಾರ.
ಸೃಷ್ಟಿಯ ಆದಿಯಲ್ಲಿ ಕಡಲಿನಲ್ಲಿ ಕ್ರೀಡಿಸುತ್ತಿದ್ದ ಶ್ರೀಹರಿ ನಾಲ್ಕು
ಮೋರೆಯ
ಮಗನೊಬ್ಬನನ್ನು ಸೃಜಿಸಿದನು. ಈ ಸೃಷ್ಟಿಚತುರನಾದ ಚತುರಾನನ
ನಿಂದಲೇ ಸೃಷ್ಟಿ- ಕಾರ್ಯ ಮೊದಲಾಯಿತು. ಈ ಚತುರ್ಮುಖನಿಂದ ಪಂಚ
ಮುಖನಾದ ರುದ್ರ ಜನಿಸಿದನು; ಸಪ್ತರ್ಷಿಗಳು ಜನಿಸಿದರು. ಸಪ್ತರ್ಷಿಗಳಲ್ಲಿ
ಒಬ್ಬನಾದ ಮರೀಚಿಯ ಮಗನೇ ಕಶ್ಯಪ ಪ್ರಜಾಪತಿ, ಆದುದರಿಂದಲೇ ಅವನನ್ನು
'ಮಾರೀಚ' ಎನ್ನುವರು. ಮಾರೀಚನಿಂದ ಅದಿತಿಯಲ್ಲಿ- ಮಂತ್ರಪೂತವಾದ
ಅರಣಿಯಲ್ಲಿ ಅಗ್ನಿ ಮೂಡಿ ಬರುವಂತೆ ಆದಿತ್ಯನ ಉದಯವಾಯಿತು. ಈ
ಸೂರ್ಯದೇವನ ಮಗ ಶ್ರಾದ್ಧ ದೇವ,. ಇವನನ್ನು 'ವೈವಸ್ವತ ಮನು' ಎಂದೂ
ಕರೆಯುವರು. ಇವನಿಂದ ಇಕ್ಷಾಷ್ವಾಕುವೇ ಮೊದಲಾದ ಸೂರ್ಯವಂಶದ ರಾಜ
ಪರಂಪರೆ ಬೆಳೆದು ಬಂದಿತು,
.
ಸ೦ಗ್ರಹ ರಾಮಾಯಣ
ಬಾಲಕಾಂಡ
ಬೆಳೆದುಬಂದ ಸೂರ್ಯವಂಶ
ಬಹುಕಾಲದ ಹಿಂದಿನ ಮಾತು. ಭಗವಂತನು ತನ್ನ ಸೃಷ್ಟಿಲೀಲೆಯಲ್ಲಿ
ಸೃಷ್ಟಿಯ ಆದಿಯಲ್ಲಿ ಕಡಲಿನಲ್ಲಿ ಕ್ರೀಡಿಸುತ್ತಿದ್ದ ಶ್ರೀಹರಿ ನಾಲ್ಕು
ಮುಖನಾದ ರುದ್ರ ಜನಿಸಿದನು; ಸಪ್ತರ್ಷಿಗಳು ಜನಿಸಿದರು. ಸಪ್ತರ್ಷಿಗಳಲ್ಲಿ
'ಮಾರೀಚ' ಎನ್ನುವರು. ಮಾರೀಚನಿಂದ ಅದಿತಿಯಲ್ಲಿ- ಮಂತ್ರಪೂತವಾದ
ಕರೆಯುವರು. ಇವನಿಂದ ಇಕ್