This page has been fully proofread once and needs a second look.

మింబనబళ్ళ
 
ಪಂಚಬಾಣಗಳು ಅವನ ಹೃದಯವನ್ನೂ ಗಾಸಿಗೊಳಿಸಿದವು. ಸಾಲದುದಕ್ಕೆ
ಸೂತನೂ ಬಾಣಾಹತನಾಗಿ ನೆಲಕ್ಕುರುಳಿದನು !
 
೨೦೬
 

 
ಮೇಘನಾದನು ಇಷ್ಟರಿಂದಲೆ ಕಳವಳಪಡಲಿಲ್ಲ. ರಥವನ್ನು ತಾನೇ ನಡೆಸಿ
ಕೊಂಡು ಕಾದಾಡತೊಡಗಿದನು. ಮತ್ತೆ ಬಾಣಗಳ ಮಾಲೆ ಮೇಘನಾದನನ್ನು
ಮುತ್ತಿತು. ಹಣೆಯೊಡೆದು ನೆತ್ತರು ಬಸಿಯಿತು. ಪ್ರತಿಯಾಗಿ ಮೇಘನಾದನ
ಬಾಣಗಳಿಂದ ಲಕ್ಷ್ಮಣನ ಹಣೆಗೂ ಬಾಣಗಳ ಆಘಾತವಾಯಿತು. ನೆತ್ತರು
ಹರಿದು ಮೈ ಬಟ್ಟೆ ಕೆಂಪಾಯಿತು. ಇಬ್ಬರೂ ಹೂಬಿಟ್ಟ ಕಿಂಶುಕದಂತೆ
 
ಸೊಗಯಿಸಿದರು.
 

 
ವಿಭೀಷಣನಮೇಲೂ ಮೇಘನಾದನ ಬಾಣಗಳು ಬರತೊಡ ಗಿದವು.
ಒಡನೆ ವಿಭೀಷಣನು ಮೇಘನಾದನ ಕುದುರೆಗಳನ್ನು ಕೆಡವಿದನು. ಆಗ
ಮೇಘನಾದನು ಪ್ರತಿಯಾಗಿ ಶಕ್ತಾತ್ಯಾಯುಧವನ್ನು ಪ್ರಯೋಗಿಸಿದನು. ಲಕ್
ಷ್ಮಣನು ಅದನ್ನು ಅರ್ಧಮಾರ್ಗದಲ್ಲಿಯೆ ಕತ್ತರಿಸಿದನು.
 

 
ಮೇಘನಾದನು ಯಮಪ್ರದತ್ತವಾದ ಬಾಣವೊಂದನ್ನು ವಿಭೀಷಣನ
ಮೇಲೆಸೆದನು. ಲಕ್ಷ್ಮಣನು ಕುಬೇರದತ್ತವಾದ ಬಾಣ ವನ್ನು ಅದಕ್ಕೆ ಎದುರಾಗಿ
ಎಸೆದನು. ಎರಡು ಬಾಣಗಳಿಗೂ ಕೆಲ- ಕಾಲ ಮುಗಿಲಿನಲ್ಲಿ ತಿಕ್ಕಾಟ ನಡೆಯಿತು.
ಕೊನೆಗೆ ಎರಡೂ ನಿರ್ಬಲಗಳಾಗಿ ನೆಲಕ್ಕೆ ಬಿದ್ದವು.
 

 
ಮತ್ತೆ ಇಬ್ಬರೂ ಅಸ್ತ್ರಯುದ್ಧಕ್ಕೆ ತೊಡಗಿದರು. ವಾರುಣಾಸ್ತ್ರಕ್ಕೆ ಪ್ರತಿ
ಯಾಗಿ ರೌದ್ರಾಸ್ತ್ರ, ಅಗ್ನ್ಯಸ್ತ್ರಕ್ಕೆ ಬದಲಾಗಿ ಸೌರಾಸ್ತ್ರ, ಅಸುರಾಸ್ತ್ರಕ್ಕೆ ಎದುರಾಗಿ
ಮಹೇಶ್ವರಾಸ್ತ್ರ ಹೀಗೆ ನಡೆಯಿತು ಸಂಗ್ರಾಮ.
 

 
ದೇವತೆಗಳು ಮುಗಿಲಿನಲ್ಲಿ ನಿಂತು "ರಾಮಾನುಜನಿಗೆ ಮಂಗಳ ವಾಗಲಿ.
ಸತ್ವಕ್ಕೆ, ಸತ್ಯಕ್ಕೆ ಜಯವಾಗಲಿ" ಎಂದು ಹರಸುತ್ತಿದ್ದರು.
 

 
ಲಕ್ಷ್ಮಣನು ಮಹತ್ತರವಾದ ಬಾಣವೊಂದನ್ನು ಬಿಲ್ಲಿಗೇರಿಸಿ "ರಾಮ
ಚಂದ್ರನಿಗೆ ಜಯವಾಗಲಿ" ಎಂದು ಮನದಲ್ಲಿ ನೆನೆದು ಶತ್ರುವಿನಮೇಲೆ
ಪ್ರಯೋಗಿಸಿದನು. ಇಂದ್ರವೈರಿಯ ತಲೆ ಕಡಿದು ನೆಲಕ್ಕೆ ಬಿತ್ತು. ಇಂದ್ರನನ್ನು
ಸೋಲಿಸಿದ ಹಮ್ಮು ಮಣ್ಣು ಮುಕ್ಕಿತು !
 

 
ಉಳಿದ ರಾಕ್ಷಸರು ಇದನ್ನು ಕಂಡು ಹೆದರಿ ಓಡಿದರು.