2023-03-15 15:35:58 by ambuda-bot
This page has not been fully proofread.
ಸಂಗ್ರಹರಾಮಾಯಣ
ಬಾಣಗಳನ್ನೂ ಒಂದೇ ಬಾರಿ ಎದುರಿಸುವ ಪ್ರಸಂಗ ಬಂದು ಮೇಘನಾದನು
ಗಾವಿಲನಾಗಬೇಕಾಯಿತು ! ಅಗ್ನಿಜ್ವಾಲೆಯಂತಿರುವ ಸೌಮಿತ್ರಿಯ ಬಾಣ-
ಗಳಿಂದ ಆಹತನಾದ ಮೇಘನಾದ ಮೂರ್ಛಿತನಾಗಿ ಕುಸಿದುಬಿದ್ದ
DOX
ಸ್ವಲ್ಪ ಸಮಯದಲ್ಲಿ ಮೇಘನಾದನಿಗೆ ಅರಿವು ಮೂಡಿತು. ಮತ್ತೆ ಬಾಣ
ಗಳ ಸುರಿಮಳೆ ಆರಂಭವಾಯಿತು. ಲಕ್ಷ್ಮಣನ ಮೇಲೆ-ವಿಭೀಷನ ಮೇಲೆ-
ಕಪಿಗಳ ಮೇಲೆ ಕೂಡ ಏಕಕಾಲದಲ್ಲಿ ಬಾಣಗಳು ಬೀಳತೊಡಗಿದವು !
ಲಕ್ಷ್ಮಣನ ಮೋರೆಯಲ್ಲಿ ಅಲಕ್ಷಭಾವದ ಮಂದಹಾಸ ಮಿನುಗುತ್ತಲೇ
ಇತ್ತು. ಕೈ ಬಾಣಗಳನ್ನು ಸುರಿಸುತ್ತಲೇ ಇತ್ತು.
ಲಕ್ಷ್ಮಣನ ಒಂದು ಬಾಣಕ್ಕೆ ಮೇಘನಾದನ ಕವಚ ಮುರಿದು ಬಿತ್ತು.
ಮೇಘನಾದನೂ ಪ್ರತಿಯಾಗಿ ಬಾಣಗಳನ್ನೆಸೆದನು. ಲಕ್ಷ್ಮಣನ ಕವಚವೂ
ಮುರಿದು ಬಿತ್ತು. ನೆತ್ತರಿಂದ ತೊಯ್ದ ಮೈಯನ್ನು ಹೊತ್ತು ಇಬ್ಬರೂ
ಹೋರಾಡಿದರು.
ಇತ್ತ ವಿಭೀಷಣನು ಕಪಿಗಳನ್ನು ಹುರಿದುಂಬಿಸಿದನು :
"ಮೇಘನಾದನು ರಾವಣನ ಸರ್ವಸ್ವ. ಇವನು ಇಲ್ಲವಾದರೆ ಲಂಕೆಯ
ಮೇಲಣ ರಾವಣನ ಅಂಕೆಯೂ ಇಲ್ಲ. ಓ, ಕಪಿವೀರರೆ, ಲಕ್ಷ್ಮಣನ ಈ
ಹೋರಾಟದಲ್ಲಿ ನಿಮ್ಮದೂ ಬೆಂಬಲವಿರಲಿ, ಶತ್ರು ದಮನದಲ್ಲಿ ನಿಮ್ಮ ಹುಮ್ಮಸು
ಇಮ್ಮಡಿಯಾಗಲಿ."
ವಿಭೀಷಣನ ವಚನದಂತೆ ಜಾಂಬವಂತ ಮೊದಲಾದ ಕಸಿ ಪ್ರಧಾನರು
ಮೇಘನಾದನ ಪರಿವಾರವನ್ನು ಸಂಹರಿಸತೊಡಗಿದರು. ಕಸಿಗಳ ಜೊತೆಗೆ
ವಿಭೀಷಣನೂ ಅವನ ಅನುಚರರೂ ಸೇರಿಕೊಂಡರು.
ಲಕ್ಷ್ಮಣನು ನಾಲ್ಕು ಬಾಣಗಳಿಂದ ಎದುರಾಳಿಯ ರಥದ ನಾಲ್ಕು
ಕುದುರೆಗಳನ್ನೂ ಇನ್ನೊಂದು ಬಾಣದಿಂದ ಸೂತನನ್ನೂ ಸಂಹರಿಸಿದನು.
ಮೇಘನಾದನು ಪುರಕ್ಕೆ ತೆರಳಿ ಮತ್ತೊಂದು ವಾಹನವನ್ನೇರಿ ಬಂದು ಕಪಿಗಳ
ಮೇಲೆ ಬಾಣಗಳನ್ನು ಸುರಿಸತೊಡಗಿದನು. ಲಕ್ಷ್ಮಣನು ಬಾಣವೊಂದರಿಂದ
ಅವನ ಬಿಲ್ಲನ್ನೆ ಮುರಿದನು. ಮೇಘನಾದನು ಮತ್ತೊಂದು ಬಿಲ್ಲನ್ನು ಕೈಗೆತ್ತಿ
ಕೊಂಡನು. ಸೌಮಿತ್ರಿಯ ಬಾಣ ಅದನ್ನೂ ಭೇದಿಸಿತು. ಜತೆಗೆ ಸೌಮಿತ್ರಿಯ