This page has been fully proofread once and needs a second look.

ಸಂಗ್ರಹರಾಮಾಯಣ
 
ಈ ಬಾರಿ ಮೇಘನಾದನ ತಂತ್ರ ಬೇರೆ ತೆರನಾಗಿತ್ತು. ಅವನು ಮಾಯೆ
ಯಿಂದ ಸೀತೆಯಂಥ ಆಕೃತಿಯನ್ನು ನಿರ್ಮಿಸಿ ಅದನ್ನು ರಾಮನೆದುರು ತಂದು
ಕತ್ತರಿಸಿ ಚೆಲ್ಲಿದನು. ರಕ್ಕಸರ ಕಪಟ ರಾಮಚಂದ್ರನಿಗೆ ತಿಳಿಯದೆ ? ಆದರೂ
ಅಭಿನಯಪಟುವಾದ ಭಗವಂತನಲ್ಲಿ ನಟನೆಗೇನು ಕೊರತೆ ? ರಾಕ್ಷಸನು
ಮರುಳಾಗು- ವಂತೆ ರಾಮನು ಗೊಳೋ ಎಂದು ಅತ್ತು ಬಿಟ್ಟನು !
 
೨೦೩
 

 
ಇತ್ತ ಹನುಮಂತನು ಮೇಘನಾದನ ಕಡೆಯವರನ್ನೆಲ್ಲ ಯಮನ ಕಡೆಗೆ
ಕಳುಹಿಸಿ ಮೇಘನಾದನನ್ನು ದೊಡ್ಡ ಬಂಡೆ- ಯೊಂದರಿಂದ ಜಜ್ಜಿದನು. ಮೇಘ-
ನಾದನ ಪೌರುಷ ಕುಸಿಯಿತು. ರಥ ರಣರಂಗದಿಂದ ಮರಳಿ ಪುರದೆಡೆಗೆ
ತೆರಳಿತು.
 

 
ನಿಕುಂಭಿಲೆಯಲ್ಲಿ ಮಹಾಮಾರಣ ಹೋಮವೊಂದರ ಸಿದ್ಧತೆ ನಡೆಯಿತು.
ಈ ರಹಸ್ಯ ವಿಭೀಷಣನಿಗೆ ತಿಳಿದಿತ್ತು. ಅವನು ರಾಮ- ನನ್ನು ಎಚ್ಚರಿಸಿದನು :
 

 
"ಭಗವನ್, ಮೇಘನಾದನ ಕೊನೆ ಎಷ್ಟು ಬೇಗ ಆದರೆ ಅಷ್ಟು ಚೆನ್ನು,
ಈ ಬಾರಿ ಅವನ ಹೋಮ ಸಾಂಗವಾಯಿತೆಂದರೆ ಮತ್ತೆ ಅವನನ್ನು ಕೊಲ್ಲು
ವುದು ಅಳಿವಿಗೆ ಮಾಮೀರಿದ ಮಾತು. ಹಾಗೆಂದು ಅವನಿಗೆ ಬ್ರಹ್ಮನ ವರವಿದೆ."
 

 
ರಾಮಚಂದ್ರನ ಆದೇಶದಂತೆ ಲಕ್ಷ್ಮಣನು ಮೇಘನಾದನ ವಧೆಗೆ ತೆರಳಿ-
ದನು. ಹನುಮಂತನೂ-ವಿಭೀಷಣನೂ ಅನೇಕ ಕಪಿಸೇನೆ- ಗಳೊಡನೆ ಅವನ
ಜತೆಗಾರರಾದರು. ನಿಕುಂಭಿಲೆಯ ರಕ್ಷಕರಾದ ರಾಕ್ಷಸರು ಕಪಿಗಳ ಕೈಯಲ್ಲಿ ಸಿಕ್ಕು
ನುಗ್ಗಾದರು. ಕೆಲ ಕಪಿಗಳು ಯಾಗಶಾಲೆಗೂ ತೆರಳಿ ಕುಚೇಷ್ಟೆಗಳಿಂದ ಯಾಗಕ್ಕೆ
ಅಡ್ಡಿಯ- ನ್ನುಂಟು ಮಾಡಿದರು.
 

 
ಮೇಘನಾದನು ಕನಲಿ ಕೊಳುಗುಳಕ್ಕಿಳಿದನು. ಕಪಿಗಳ ಕೂಟ ಕಂಗೆಟ್ಟಿತು.
ಮಾರುತಿ ಮೇಘನಾದನ ಮುಂದೆ ಬಂದು ನಿಂತನು. ಕ್ಷಣಾರ್ಧದಲ್ಲಿ ಇಂದ್ರಾರಿ
ಯಾದ ಮೇಘನಾದನು ಮಾರುತಿಯ ಮೇಲೆ ಆಯುಧಗಳ ರಾಶಿಯನ್ನೇ
ಸುರಿದನು. ಬಂದ ಆಯುಧ- ವನ್ನೆಲ್ಲ ಕೈಯಲ್ಲಿ ಹಿಡಿದು ಕಡ್ಡಿಯಂತೆ ತುಂಡರಿಸಿ
ಚೆಲ್ಲಿದ ಹನುಮಂತ ನಗುತ್ತ ನುಡಿದನು :
 

 
"ಮೇಘನಾದ, ನೀನು ಇಂದ್ರನನ್ನು ಗೆದ್ದುದು ನಿಜವಾದರೆ, ನಿನ್ನಲ್ಲಿ
ಗಂಡಸುತನ ಇರುವುದು ನಿಜವಾದರೆ, ನನ್ನನ್ನು ಎದುರಿಸಲು ಹೆದರುವ