This page has not been fully proofread.

ಸಂಗ್ರಹರಾಮಾಯಣ
 
ಈ ಬಾರಿ ಮೇಘನಾದನ ತಂತ್ರ ಬೇರೆ ತೆರನಾಗಿತ್ತು. ಅವನು ಮಾಯೆ
ಯಿಂದ ಸೀತೆಯಂಥ ಆಕೃತಿಯನ್ನು ನಿರ್ಮಿಸಿ ಅದನ್ನು ರಾಮನೆದುರು ತಂದು
ಕತ್ತರಿಸಿ ಚೆಲ್ಲಿದನು. ರಕ್ಕಸರ ಕಪಟ ರಾಮಚಂದ್ರನಿಗೆ ತಿಳಿಯದೆ ? ಆದರೂ
ಅಭಿನಯಪಟುವಾದ ಭಗವಂತನಲ್ಲಿ ನಟನೆಗೇನು ಕೊರತೆ ? ರಾಕ್ಷಸನು
ಮರುಳಾಗುವಂತೆ ರಾಮನು ಗೊಳೋ ಎಂದು ಅತ್ತು ಬಿಟ್ಟನು !
 
೨೦೩
 
ಇತ್ತ ಹನುಮಂತನು ಮೇಘನಾದನ ಕಡೆಯವರನ್ನೆಲ್ಲ ಯಮನ ಕಡೆಗೆ
ಕಳುಹಿಸಿ ಮೇಘನಾದನನ್ನು ದೊಡ್ಡ ಬಂಡೆಯೊಂದರಿಂದ ಜಜ್ಜಿದನು. ಮೇಘ-
ನಾದನ ಪೌರುಷ ಕುಸಿಯಿತು. ರಥ ರಣರಂಗದಿಂದ ಮರಳಿ ಪುರದೆಡೆಗೆ
ತೆರಳಿತು.
 
ನಿಕುಂಭಿಲೆಯಲ್ಲಿ ಮಹಾಮಾರಣ ಹೋಮವೊಂದರ ಸಿದ್ಧತೆ ನಡೆಯಿತು.
ಈ ರಹಸ್ಯ ವಿಭೀಷಣನಿಗೆ ತಿಳಿದಿತ್ತು. ಅವನು ರಾಮನನ್ನು ಎಚ್ಚರಿಸಿದನು :
 
"ಭಗವನ್, ಮೇಘನಾದನ ಕೊನೆ ಎಷ್ಟು ಬೇಗ ಆದರೆ ಅಷ್ಟು ಚೆನ್ನು,
ಈ ಬಾರಿ ಅವನ ಹೋಮ ಸಾಂಗವಾಯಿತೆಂದರೆ ಮತ್ತೆ ಅವನನ್ನು ಕೊಲ್ಲು
ವುದು ಅಳವಿಗೆ ಮಾರಿದ ಮಾತು. ಹಾಗೆಂದು ಅವನಿಗೆ ಬ್ರಹ್ಮನ ವರವಿದೆ."
 
ರಾಮಚಂದ್ರನ ಆದೇಶದಂತೆ ಲಕ್ಷ್ಮಣನು ಮೇಘನಾದನ ವಧೆಗೆ ತೆರಳಿ-
ದನು. ಹನುಮಂತನ-ವಿಭೀಷಣನೂ ಅನೇಕ ಕಪಿಸೇನೆಗಳೊಡನೆ ಅವನ
ಜತೆಗಾರರಾದರು. ನಿಕುಂಭಿಲೆಯ ರಕ್ಷಕರಾದ ರಾಕ್ಷಸರು ಕಪಿಗಳ ಕೈಯಲ್ಲಿ ಸಿಕ್ಕು
ನುಗ್ಗಾದರು. ಕೆಲ ಕಪಿಗಳು ಯಾಗಶಾಲೆಗೂ ತೆರಳಿ ಕುಚೇಷ್ಟೆಗಳಿಂದ ಯಾಗಕ್ಕೆ
ಅಡ್ಡಿಯನ್ನುಂಟು ಮಾಡಿದರು.
 
ಮೇಘನಾದನು ಕನಲಿ ಕೊಳುಗುಳಕ್ಕಿಳಿದನು. ಕಪಿಗಳ ಕೂಟ ಕಂಗೆಟ್ಟಿತು.
ಮಾರುತಿ ಮೇಘನಾದನ ಮುಂದೆ ಬಂದು ನಿಂತನು. ಕ್ಷಣಾರ್ಧದಲ್ಲಿ ಇಂದ್ರಾರಿ
ಯಾದ ಮೇಘನಾದನು ಮಾರುತಿಯ ಮೇಲೆ ಆಯುಧಗಳ ರಾಶಿಯನ್ನೇ
ಸುರಿದನು. ಬಂದ ಆಯುಧವನ್ನೆಲ್ಲ ಕೈಯಲ್ಲಿ ಹಿಡಿದು ಕಡ್ಡಿಯಂತೆ ತುಂಡರಿಸಿ
ಚೆಲ್ಲಿದ ಹನುಮಂತ ನಗುತ್ತ ನುಡಿದನು :
 
"ಮೇಘನಾದ, ನೀನು ಇಂದ್ರನನ್ನು ಗೆದ್ದುದು ನಿಜವಾದರೆ, ನಿನ್ನಲ್ಲಿ
ಗಂಡಸುತನ ಇರುವುದು ನಿಜವಾದರೆ, ನನ್ನನ್ನು ಎದುರಿಸಲು ಹೆದರುವ