This page has been fully proofread once and needs a second look.

ಸಂಗ್ರಹರಾಮಾಯಣ
 
ಹಾರುವ ರಭಸಕ್ಕೆ ಭೂಮಿ ನಡುಗಿತು. ಲಂಕೆಯ ಮನೆಗಳು ಕುಸಿದು ಬಿದ್ದವು.
ತ್ರಿಕೂಟ ಪರ್ವತ ತಲೆಯಾಡಿಸಿತು. ಕೆಲವರು ಬಿದ್ದರು, ಕೆಲವರು ಸತ್ತರು,
ಕೆಲವರು ದಿಟ್ಟೂಙ್ಮೂಢರಾಗಿ ಮೂಗಿಗೆ ಬೆರಳೇರಿಸಿದರು !
 
೨೦೧
 

 
ಎಲ್ಲಿ ಲಂಕೆ ! ಎಲ್ಲಿ ಗಂಧಮಾದನ ! ಒಂದು ದಕ್ಷಿಣದ ಮೂಲೆ ಯಲ್ಲಿದ್ದರೆ
ಮತ್ತೊಂದು ಉತ್ತರದ ತುದಿಯಲ್ಲಿ. ಆದರೆ ಹನುಮಂತನಿಗೆ ಅದು ದೊಡ್ಡದಲ್ಲ.
ಅವನು ಒಂದೇ ನೆಗೆತಕ್ಕೆ ಅನಾಯಾಸದಿಂದ ಗಂಧಮಾದನವನ್ನು ತಲುಪಿದನು.
ಅಲ್ಲಿ ಔಷಧಗಳೆಲ್ಲ ಅಡಗಿ ಕುಳಿತುಬಿಟ್ಟವು. ಕುಪಿತನಾದ ಹನುಮಂತ- ನು ಬಹು
ಯೋಜನ ವಿಸ್ತ್ರತೃತವಾದ ಪರ್ವತವನ್ನೆ ಕಿತ್ತು ತೆಗೆದನು. ಒಂದು ಕೈಯಲ್ಲಿ
ಲೀಲೆಯಿಂದ ಕಂದುಕದಂತೆ ಪರ್ವತವನ್ನು ಹೊತ್ತು ತರುವ ಹನುಮಂತನನ್ನು
ಕಂಡು ಜಗತ್ತು ಬೆರಗಾಯಿತು !
 

 
ಬೆಟ್ಟದಿಂದ ಬೀಸಿದ ಗಿಡ ಮದ್ದುಗಳ ಗಾಳಿಗೇ ಕಪಿಗಳು ಎದ್ದು ನಿಂತರು.
ಸತ್ತವರು ಬದುಕಿದರು. ಗಾಯಗೊಂಡವರ ಗಾಯ ಮಾಸಿತು. ಅಂಗಹೀನರ
ಅಂಗಾಂಗಗಳು ಕೂಡಿಕೊಂಡವು ! ದೈತ್ಯ ಭಯಂಕರನೂ ದೇವತೆಗಳಿಗೆ ಅಭಯ
ಪ್ರದನೂ ಆದ ಮಾರುತಿ ಗಂಧಮಾದನವನ್ನು ಹೊತ್ತು ಲಂಕೆಯಲ್ಲಿ ನಿಂತಿರುವು-
ದನ್ನು ಕಂಡವರು ಭಗವಂತನ ತ್ರಿವಿಕ್ರಮಾವತಾರವನ್ನು ಸ್ಮರಿಸಿ- ಕೊಂಡರು.
 

 
ಸುಗ್ರೀವಾದಿಗಳು ಹನುಮಂತನನ್ನು 'ಉಪೇಘೇ' ಎಂದು ಕೊಂಡಾಡಿದರು.
ರಾಮಚಂದ್ರನು ಆನಂದದಿಂದ ಗಾಢಾಲಿಂಗನ ವನ್ನಿತ್ತು ಕರುಣಿಸಿದನು. ದೇವತೆ
ಗಳು ಮುಗಿಲಿನಲ್ಲಿ ನೆರೆದು ಮಾರುತಿಯನ್ನು ಹಾಡಿ ಕೊಂಡಾಡಿ ಹೂಮಳೆಯನ್ನು

ಸುರಿಸಿದರು.
 

 
ಪರ್ವತ ತರುವ ಕೆಲಸ ಮುಗಿಯಿತು. ಅದು ಇನ್ನು ತನ್ನ ತಾಣವನ್ನು
ಸೇರಬೇಕು. ಹನುಮಂತನಿಗೆ ಅದೇನು ದೊಡ್ಡ ಪ್ರಮೇಯವೆ ? ಅವನು
ನಿಂತಲ್ಲಿಂದಲೆ ಅದನ್ನು ಉತ್ತರಕ್ಕೆ ಎಸೆ- ದನು. ಹನುಮಂತನ ಅಳತೆಯೆಂದರೆ
ಅಳತೆ. ಒಂದಂಗುಲ ಆಚೆ ಯಿಲ್ಲ, ಒಂದಂಗುಲ ಈಚೆಯಿಲ್ಲ. ಮೊದಲು ಇದ್ದ
ತಾಣದಲ್ಲಿಲೆ ಮೊದಲು ಇದ್ದಂತೆಯೆ ಪರ್ವತ ನೆಲವನ್ನು ಕೂಡಿಕೊಂಡಿತು !

ಕಪಿಕೋಟ ಏಕಕಂಠದಿಂದ ಕೂಗಿತು :

" ರಾಮಚಂದ್ರನಿಗೆ ಜಯವಾಗಲಿ."
 
66
 

"
ರಾಮಭಕ್ತಾಗ್ರಣಿಯಾದ ಹನುಮಂತನಿಗೆ ಜಯವಾಗಲಿ, "