This page has been fully proofread once and needs a second look.

ಮಿಂಚಿನ ಬಳ್ಳಿ
 
ಮುಂದೆ ಸಾಗಿದಾಗ ಜಾಂಬವಂತ ಕಾಣಿಸಿಕೊಂಡನು. ಬವಳಿ ಕೊಂಡು ಬಿದ್ದಿ
ರುವ ಆ ಮುದುಕನ ಮೇಲೆ ನೀರು ಚಿಮ್ಮಿ ವಿಭೀಷಣ ಮೆಲ್ಲನೆ ವಿಚಾರಿಸಿದನು.
"ಬದುಕಿರುವೆಯಾ ಜಾಂಬವಂತ."
 
೨೦೦
 

 
ಜಾಂಬವಂತ ಮೆಲ್ಲನೆ ಚೇತರಿಸಿಕೊಂಡು ನುಡಿದನು :
 

 
"ಯಾರಿಂದ ಅಂಜನೆ ಸುಪುತ್ರವತಿಯಾದಳೋ ಅಂಥ ಪವಮಾನತನಯ
ಬದುಕಿದ್ದಾನೆಯೆ ವಿಭೀಷಣ ? ಅ೦ಜನೆಯ ಮಗ ಬದುಕಿದ್ದರೆ ನಾವೆಲ್ಲರೂ
ಬದುಕಿದಂತೆ. ಅವನೊಬ್ಬ ಸತ್ತರೆ ನಾವೆಲ್ಲ ಬದುಕಿದ್ದರೂ ಸತ್ತಂತೆ."
ಅಚ್ಚರಿಗೊಂಡ ವಿಭೀಷಣ ಕೇಳಿದನು:
 

 
"ಮಹಾತ್ಮನಾದ ಜಾಂಬವಂತನೆ, ನೀನು ಲಕ್ಷ್ಮಣನನ್ನೂ ಸುಗ್ರೀವ-
ನನ್ನ
ನನ್ನೂ ಅಂಗದನನ್ನೂ ವಿಚಾರಿಸದೆ ಹನುಮಂತನನ್ನೆ ವಿಚಾರಿಸುತ್ತಿರುವುದರ
ಕಾರಣವೇನು ?"
 

 
"ಕಾರಣವಿಷ್ಟೆ,
 
ಹನುಮಂತನೊಬ್ಬನೆ ತನ್ನ ಸಾಮರ್ಥ್ಯದಿಂದ ನಮ್ಮನ್ನು
ಬದುಕಿಸಬಲ್ಲವನು. ಇನ್ನಾರಿಂದಲೂ ಈ ಕಾರ್ಯ ಸಾಧ್ಯವಿಲ್ಲ. ಮಾರುತಿ
ನಮ್ಮ ಕಪಿಸೇನೆಯ ಉಸಿರು; ಜಗತ್ತಿನ ಉಸಿರು."
 

 
"ಪೂಜ್ಯನೆ, ನಿನ್ನ ವಿಶ್ವಾಸಕ್ಕೆ ಪಾತ್ರನಾದ ಹನುಮಂತ ಬದುಕಿದ್ದಾನೆ."
ಎಂದು ಮಾರುತಿ ಮೆಲ್ಲನೆ ಜಾಂಬವಂತನ ಪಾದ ಗಳನ್ನು ಹಿಡಿದು ಅದಮಿದನು.
ಸಂತಸಗೊಂಡ ಜಾಂಬವಂತ ನುಡಿದನು:
 

 
"ಬಂಧುವತ್ಸಲನಾದ ಹನಮಂತನೆ, ಸಾಯಹೊರಟ ಕಪಿಗಳನ್ನು
ಬದುಕಿಸು. ನಮ್ಮನ್ನು ಉದ್ಧರಿಸು. ರಾಮಚಂದ್ರನ ಪರಮ ಭಕ್ತನಲ್ಲವೆ
ನೀನು ? ವೇಮೇರುಪರ್ವತದ ಬಳಿ ಗಂಧ- ಮಾದನ ಪರ್ವತವಿದೆ. ಅಲ್ಲಿಂದ ನೀನು
ಶೀಘ್ರವಾಗಿ ಮೃತಸಂಜೀ- ವನಿ, ಸಂಧಾನಕರಣಿ, ಸವರ್ಣಕರಣಿ, ವಿಶಲ್ಯ ಕರಣಿ
ಎಂಬ ನಾಲ್ಕು ಗಿಡಮದ್ದುಗಳನ್ನು ತರಬೇಕು. ಆಗ ನಿನ್ನ ಸಾಹಸದಿಂದ
ಕೆ

ಪಿಗಳು ಉಳಿದಂತಾಗುವುದು."
 

 
ಒಡನೆ ಹನಮಂತನು ರಾಮಚರಣಗಳಿಗೆ ಮನದಲ್ಲಿ ಅಭಿನಂವಂದಿಸಿ
ಪರ್ವತಾಕಾರವಾಗಿ ಬೆಳೆದು ನಿಂತನು. ಆಗ ಲಂಕೆಯ ಬೆಟ್ಟದ ಮೇಲೆ
ಇನ್ನೊಂದು ಬೆಟ್ಟ ಮೂಡಿ ಬಂದಂತೆ ಕಾಣಿಸುತ್ತಿತ್ತು. ಹನುಮಂತನು