2023-03-15 15:35:57 by ambuda-bot
This page has not been fully proofread.
ಮಿಂಚಿನ ಬಳ್ಳಿ
ಮುಂದೆ ಸಾಗಿದಾಗ ಜಾಂಬವಂತ ಕಾಣಿಸಿಕೊಂಡನು. ಬವಳಿಕೊಂಡು ಬಿದ್ದಿ
ರುವ ಆ ಮುದುಕನ ಮೇಲೆ ನೀರು ಚಿಮ್ಮಿ ವಿಭೀಷಣ ಮೆಲ್ಲನೆ ವಿಚಾರಿಸಿದನು.
"ಬದುಕಿರುವೆಯಾ ಜಾಂಬವಂತ."
೨೦೦
ಜಾಂಬವಂತ ಮೆಲ್ಲನೆ ಚೇತರಿಸಿಕೊಂಡು ನುಡಿದನು :
"ಯಾರಿಂದ ಅಂಜನೆ ಸುಪುತ್ರವತಿಯಾದಳೋ ಅಂಥ ಪವಮಾನತನಯ
ಬದುಕಿದ್ದಾನೆಯೆ ವಿಭೀಷಣ ? ಅ೦ಜನೆಯ ಮಗ ಬದುಕಿದ್ದರೆ ನಾವೆಲ್ಲರೂ
ಬದುಕಿದಂತೆ. ಅವನೊಬ್ಬ ಸತ್ತರೆ ನಾವೆಲ್ಲ ಬದುಕಿದ್ದರೂ ಸತ್ತಂತೆ."
ಅಚ್ಚರಿಗೊಂಡ ವಿಭೀಷಣ ಕೇಳಿದನು:
"ಮಹಾತ್ಮನಾದ ಜಾಂಬವಂತನೆ, ನೀನು ಲಕ್ಷ್ಮಣನನ್ನೂ ಸುಗ್ರೀವ-
ನನ್ನ ಅಂಗದನನ್ನೂ ವಿಚಾರಿಸದೆ ಹನುಮಂತನನ್ನೆ ವಿಚಾರಿಸುತ್ತಿರುವುದರ
ಕಾರಣವೇನು ?"
"ಕಾರಣವಿಷ್ಟೆ,
ಹನುಮಂತನೊಬ್ಬನೆ ತನ್ನ ಸಾಮರ್ಥ್ಯದಿಂದ ನಮ್ಮನ್ನು
ಬದುಕಿಸಬಲ್ಲವನು. ಇನ್ನಾರಿಂದಲೂ ಈ ಕಾರ್ಯ ಸಾಧ್ಯವಿಲ್ಲ. ಮಾರುತಿ
ನಮ್ಮ ಕಪಿಸೇನೆಯ ಉಸಿರು; ಜಗತ್ತಿನ ಉಸಿರು."
"ಪೂಜ್ಯನೆ, ನಿನ್ನ ವಿಶ್ವಾಸಕ್ಕೆ ಪಾತ್ರನಾದ ಹನುಮಂತ ಬದುಕಿದ್ದಾನೆ."
ಎಂದು ಮಾರುತಿ ಮೆಲ್ಲನೆ ಜಾಂಬವಂತನ ಪಾದಗಳನ್ನು ಹಿಡಿದು ಅದಮಿದನು.
ಸಂತಸಗೊಂಡ ಜಾಂಬವಂತ ನುಡಿದನು:
"ಬಂಧುವತ್ಸಲನಾದ ಹನಮಂತನೆ, ಸಾಯಹೊರಟ ಕಪಿಗಳನ್ನು
ಬದುಕಿಸು. ನಮ್ಮನ್ನು ಉದ್ಧರಿಸು. ರಾಮಚಂದ್ರನ ಪರಮ ಭಕ್ತನಲ್ಲವೆ
ನೀನು ? ವೇರುಪರ್ವತದ ಬಳಿ ಗಂಧಮಾದನ ಪರ್ವತವಿದೆ. ಅಲ್ಲಿಂದ ನೀನು
ಶೀಘ್ರವಾಗಿ ಮೃತಸಂಜೀವನಿ, ಸಂಧಾನಕರಣಿ, ಸವರ್ಣಕರಣಿ, ವಿಶಲ್ಯ ಕರಣಿ
ಎಂಬ ನಾಲ್ಕು ಗಿಡಮದ್ದುಗಳನ್ನು ತರಬೇಕು. ಆಗ ನಿನ್ನ ಸಾಹಸದಿಂದ
ಕೆಪಿಗಳು ಉಳಿದಂತಾಗುವುದು."
ಒಡನೆ ಹನಮಂತನು ರಾಮಚರಣಗಳಿಗೆ ಮನದಲ್ಲಿ ಅಭಿನಂದಿಸಿ
ಪರ್ವತಾಕಾರವಾಗಿ ಬೆಳೆದು ನಿಂತನು. ಆಗ ಲಂಕೆಯ ಬೆಟ್ಟದ ಮೇಲೆ
ಇನ್ನೊಂದು ಬೆಟ್ಟ ಮೂಡಿ ಬಂದಂತೆ ಕಾಣಿಸುತ್ತಿತ್ತು. ಹನುಮಂತನು