This page has been fully proofread once and needs a second look.

ಸಂಗ್ರಹರಾಮಾಯಣ
 
ಬೀಸಿದ ಗಾಳಿ ಲಂಕೆಯನ್ನೇ ಏನು, ಭೂಮಂಡಲವನ್ನೇ ನಲುಗಿ ಸಿತು. ಎತ್ತ-
ಣಿಂದ ಬಂತು ಈ ಗಾಳಿ ? ಇದು ಯಾರ ಬರವಿನ ಮುನ್ಸೂಚನೆ ?
 

 
ಓ! ನಾಗವೈರಿಯಾದ ಗರುಡ ಗರಿಗೆದರಿದ್ದಾನೆ ! ಅದರಿಂದಲೇ
ಕೋಲಾಹಲ.
 
ಓ! ನಾಗವೈರಿಯಾದ
. ಕಪಿಗಳ ಮೈಯನ್ನು ಸುತ್ತಿರುವ ನಾಗಗಳು ಗರುಡ ಗರಿಗೆದರಿದ್ದಾನೆ ! ಅದರಿಂದಲೇ ಈ
ಕಪಿಗಳ ಮೈಯನ್ನು ಸುತ್ತಿರುವ ನಾಗಗಳು ಗರುಡನನ್ನು
- ನನ್ನು ಕಂಡು ವಿಲಿವಿಲಿ ಒದ್ದಾಡಿದವು. ಏನಾದರೇನು ? ಪಕ್ಷಿ-
ರಾಜನ ಕಣ್ಣು ತಪ್ಪಿಸಿ
ಅವುಗಳು ಬದುಕುವುದುಂಟಿ !
 

 
ಕಪಿಸೇನೆ ಪಾಶಮುಕ್ತವಾಗಿ ಎದ್ದು ನಿಂತಿತು. ರಾಮಚಂದ್ರನ ಪಾದ-
ಕೈ
ಕ್ಕೆರಗಿದ ಗರುಡ ಭಕ್ತಿ ವಾಣಿಯಿಂದ ಘೋಷಿಸಿದನು :
 

 
"ರಾಮಚಂದ್ರನಿಗೆ ಜಯವಾಗಲಿ"
 

 
ತನ್ನ ಪಾಲಿನ ಸೇವೆಯನ್ನು ಮಾಡಿ ಗರುಡ ತೆರಳಿದನು. ಕಪಿ ಗಳ ಜಯ
ಗರ್ಜನೆ ಶತ್ರುಗಳ ಕರ್ಣಭೇದಕವಾಗಿ ಮೊಳಗಿತು.
 

 
ಮತ್ತೆ ಪುನಃ ಮೇಘನಾದನ ಮನೆಯಲ್ಲಿ ಅಥರ್ವಣ ಮಂತ್ರ- ಗಳಿಂದ
ಮಾರಣ ಹೋಮ ನಡೆಯಿತು. ಹಿಂದಿನಂತೆಯೇ ಅದೃಶ್ಯನಾದ ಮೇಘನಾದ
ಮತ್ತೊಮ್ಮೆ ನಾಗಪಾಶದಿಂದ ಕಪಿ ಸೇನೆಯನ್ನು ಬಂಧಿಸಿ ಮರಳಿದನು. ರಾವ
ಣನು ಮಗನ ಪರಾ- ಕ್ರಮವನ್ನು ಮೆಚ್ಚಿ ಕೊಂಡಾಡಿದನು.
 

 
ನಗರದಲ್ಲಿ ಏನು ಕಾರಸ್ಥಾನ ನಡೆಯುತ್ತಿದೆ ಎಂದು ತಿಳಿಯಲು ಹೋಗಿದ್ದ
ವಿಭೀಷಣ ಮರಳಿ ರಣಾಂಗಣಕ್ಕೆ ಬಂದು ನೋಡಿದಾಗ ಕಪಿಗಳ ಈ ವಿಪನ್ನಾ
ವಸ್ಥೆ ಅವನಿಗೆ ಗೋಚರವಾಯಿತು. ಸುತ್ತಲೂ ಕತ್ತಲು, ಕಪಿಗಳೆಲ್ಲ ಬಿದ್ದಿ
ದ್ದಾರೆ. ಎಲ್ಲೂ ಯಾರೂ ಚೇತರಿಸಿಕೊಂಡಿರುವ ಸುಳಿವಿಲ್ಲ. ವಿಷಣ್ಣನಾದ
ವಿಭೀಷಣ "ಈ ಕುತ್ತಿನಿಂದ ಪಾರಾಗಿ ಉಳಿದವರು ಯಾರಾದರೂ ಇದ್ದೀರಾ ??
"
ಎಂದು ಕೂಗಿಕೊಂಡು ನಡೆದನು. ಮೆಲ್ಲನೆ ಹನುಮಂತ ಮುಂದೆ ಬಂದು
"ನಾನಿದ್ದೇನೆ" ಎಂದ.
 

 
ಇಬ್ಬರು ಎರಡು ಕೊಳ್ಳಿಯನ್ನು ಹೊತ್ತಿಸಿಕೊಂಡು ಆ ಕತ್ತಲಿ ನಲ್ಲಿ ಕಪಿ
ಸೇನೆಯನ್ನು ಪರೀಕ್ಷಿಸುತ್ತ ನಡೆದರು. ಸುಗ್ರೀವ-ಅಂಗದ-ನೀಲ-ಒಬ್ಬರೇ-
ಇಬ್ಬರೇ ಸಮಗ್ರ ಕಪಿಸೇನೆ ಬಿದ್ದು ಕೊಂಡಿದೆ. ಎಲ್ಲಿ ನೋಡಿದರೂ ಮೈ ಕೈ
ಮುರಿದುಕೊಂಡು ನೆತ್ತರು ತೊಯ್ದು ತೊಳಲಾಡುವ ಕಪಿಗಳ ಠಾರಾಶಿ. ಹೀಗೆಯೇ