We're performing server updates until 1 November. Learn more.

This page has not been fully proofread.

ಸಂಗ್ರಹರಾಮಾಯಣ
 
ಬೀಸಿದ ಗಾಳಿ ಲಂಕೆಯನ್ನೇ ಏನು, ಭೂಮಂಡಲವನ್ನೇ ನಲುಗಿಸಿತು. ಎತ್ತ-
ಣಿಂದ ಬಂತು ಈ ಗಾಳಿ ? ಇದು ಯಾರ ಬರವಿನ ಮುನ್ಸೂಚನೆ ?
 
ಕೋಲಾಹಲ.
 
ಓ! ನಾಗವೈರಿಯಾದ ಗರುಡ ಗರಿಗೆದರಿದ್ದಾನೆ ! ಅದರಿಂದಲೇ ಈ
ಕಪಿಗಳ ಮೈಯನ್ನು ಸುತ್ತಿರುವ ನಾಗಗಳು ಗರುಡನನ್ನು
ಕಂಡು ವಿಲಿವಿಲಿ ಒದ್ದಾಡಿದವು. ಏನಾದರೇನು ? ಪಕ್ಷಿರಾಜನ ಕಣ್ಣು ತಪ್ಪಿಸಿ
ಅವುಗಳು ಬದುಕುವುದುಂಟಿ !
 
ಕಪಿಸೇನೆ ಪಾಶಮುಕ್ತವಾಗಿ ಎದ್ದು ನಿಂತಿತು. ರಾಮಚಂದ್ರನ ಪಾದ-
ಕೈರಗಿದ ಗರುಡ ಭಕ್ತಿ ವಾಣಿಯಿಂದ ಘೋಷಿಸಿದನು :
 
"ರಾಮಚಂದ್ರನಿಗೆ ಜಯವಾಗಲಿ"
 
ತನ್ನ ಪಾಲಿನ ಸೇವೆಯನ್ನು ಮಾಡಿ ಗರುಡ ತೆರಳಿದನು. ಕಪಿಗಳ ಜಯ
ಗರ್ಜನೆ ಶತ್ರುಗಳ ಕರ್ಣಭೇದಕವಾಗಿ ಮೊಳಗಿತು.
 
ಮತ್ತೆ ಪುನಃ ಮೇಘನಾದನ ಮನೆಯಲ್ಲಿ ಅಥರ್ವಣ ಮಂತ್ರಗಳಿಂದ
ಮಾರಣ ಹೋಮ ನಡೆಯಿತು. ಹಿಂದಿನಂತೆಯೇ ಅದೃಶ್ಯನಾದ ಮೇಘನಾದ
ಮತ್ತೊಮ್ಮೆ ನಾಗಪಾಶದಿಂದ ಕಪಿಸೇನೆಯನ್ನು ಬಂಧಿಸಿ ಮರಳಿದನು. ರಾವ
ಣನು ಮಗನ ಪರಾಕ್ರಮವನ್ನು ಮೆಚ್ಚಿ ಕೊಂಡಾಡಿದನು.
 
ನಗರದಲ್ಲಿ ಏನು ಕಾರಸ್ಥಾನ ನಡೆಯುತ್ತಿದೆ ಎಂದು ತಿಳಿಯಲು ಹೋಗಿದ್ದ
ವಿಭೀಷಣ ಮರಳಿ ರಣಾಂಗಣಕ್ಕೆ ಬಂದು ನೋಡಿದಾಗ ಕಪಿಗಳ ಈ ವಿಪನ್ನಾ
ವಸ್ಥೆ ಅವನಿಗೆ ಗೋಚರವಾಯಿತು. ಸುತ್ತಲೂ ಕತ್ತಲು, ಕಪಿಗಳೆಲ್ಲ ಬಿದ್ದಿ
ದ್ದಾರೆ. ಎಲ್ಲೂ ಯಾರೂ ಚೇತರಿಸಿಕೊಂಡಿರುವ ಸುಳಿವಿಲ್ಲ. ವಿಷಣ್ಣನಾದ
ವಿಭೀಷಣ "ಈ ಕುತ್ತಿನಿಂದ ಪಾರಾಗಿ ಉಳಿದವರು ಯಾರಾದರೂ ಇದ್ದೀರಾ ??
ಎಂದು ಕೂಗಿಕೊಂಡು ನಡೆದನು. ಮೆಲ್ಲನೆ ಹನುಮಂತ ಮುಂದೆ ಬಂದು
"ನಾನಿದ್ದೇನೆ" ಎಂದ.
 
ಇಬ್ಬರು ಎರಡು ಕೊಳ್ಳಿಯನ್ನು ಹೊತ್ತಿಸಿಕೊಂಡು ಆ ಕತ್ತಲಿನಲ್ಲಿ ಕಪಿ
ಸೇನೆಯನ್ನು ಪರೀಕ್ಷಿಸುತ್ತ ನಡೆದರು. ಸುಗ್ರೀವ-ಅಂಗದ-ನೀಲ-ಒಬ್ಬರೇ-
ಇಬ್ಬರೇ ಸಮಗ್ರ ಕಪಿಸೇನೆ ಬಿದ್ದು ಕೊಂಡಿದೆ. ಎಲ್ಲಿ ನೋಡಿದರೂ ಮೈ ಕೈ
ಮುರಿದುಕೊಂಡು ನೆತ್ತರು ತೊಯ್ದು ತೊಳಲಾಡುವ ಕಪಿಗಳ ಠಾಶಿ. ಹೀಗೆಯೇ