This page has been fully proofread once and needs a second look.

ಮಿಂಚಿನಬಳ್ಳಿ
 
ಅಪಥ್ಯವಾಯಿತು. ಅದರ ಪರಿಣಾಮ ಈ ಹತ್ಯಾಕಾಂಡ. ನಾನು ತಪ್ಪು
ಮಾಡಿದೆ. ನಾನು ದಾರಿ ತಪ್ಪಿದೆ."
 

 
ಆಗ ಮೇಘನಾದನ ಸಾಂತ್ವನೆಯೇ ಅವನಿಗೆ ತಾರಕವಾಯಿತು :
*

 
"
ಮಹಾರಾಜ, ದೇವೇಂದ್ರನಿಗೂ ಹೆದರದ ನನ್ನ ತಂದೆ ಮನುಷ್ಯ ಮಾತ್ರ
ನಿಂದ ಕಂಗಾಲಾಗಿದ್ದಾನೆ ಎನ್ನುವ ಅಪವಾದಕ್ಕೆ ಎಡೆಬರಬಾರದು.
ಯುದ್ಧರಂಗಕ್ಕೆ ತೆರಳಿ ಶತ್ರುವನ್ನು ಸೋಲಿಸಲು ನನಗೆ ಅಪ್ಪಣೆಯಾಗಬೇಕು."
 
ಯುದ್ಧ -
 

 
ರಾವಣನ ಅನುಜ್ಞೆ ದೊರೆಯಿತು. ಮೇಘನಾದ ಮನೆಗೆ ಮರ- ಳಿದವನೆ
ರುದ್ರನನ್ನು ಆರಾಧಿಸಿ ಮಾರಣ ಹೋಮಕ್ಕೆ ತೊಡಗಿ- ದನು. ಕೆಂಪು ಬಟ್ಟೆ-
ಯನ್ನು ಧರಿಸಿ ಕುಳಿತಿರುವ ಯಜಮಾನನ ಇದಿರು ವಿಭೀತಕ(ತಾರೆ)ದ ಕಟ್ಟಿಗೆ
ಗಳಿಂದ ಜ್ವಲಿಸುತ್ತಿರುವ ಬೆಂಕಿ ಕಬ್ಬಿಣದ ಸಟ್ಟುಗದಿಂದ ಸುರಿದ ಆಹುತಿಗಳನ್ನು
ಕುಡಿದು ಜ್ವಾಲೆ- ಗಳನ್ನು ಗುಳಿತು. ಸರ್ವಾಂಗ ಕಪ್ಪು ಬಣ್ಣದ ಆಡಿನ ಬಲಿ-
ಯೊಡನೆ ಯಾಗವಿಧಾನ ಕೊನೆಗೊಂಡಿತು.
 

 
ಯಾಗಶಾಲೆಯಿಂದ ರಣಂಣಾಂಗಣಕ್ಕೆ ಬಂದ ಮೇಘನಾದ ಅದೃಶ್ಯನಾಗಿ
ಆಕಾಶದಲ್ಲಿ ನಿಂತು ರಾಮ-ಲಕ್ಷ್ಮಣರಮೇಲೆ, ಕಸಿಪಿ ಗಳಮೇಲೆ ಬಾಣಗಳ ಮಳೆ-
ಯನ್ನು ಸುರಿಸಿದನು. ಮುಗಿಲಿನಿಂದ ಧಾರಾಕಾರವಾಗಿ ಬಾಣಗಳು ಬರುತ್ತಿವೆ.
ಆದರೆ ಎತ್ತ ನೋಡಿದರೂ ಶತ್ರುವಿನ ಸುಳುವಿಲ್ಲ. ಕಪಿಸೇನೆ ಕಂಗಾಲಾಯಿತು.
ಅಷ್ಟರಲ್ಲಿ ಇಂದ್ರಜಿತ್ತು ಸಮಸ್ತ ಕಪಿಸೇನೆಯನ್ನೂ ರಾಮ-ಲಕ್ಷ್ಮಣರನ್ನೂ ನಾಗ
ಪಾಶದಿಂದ ಬಂಧಿಸಿ, ಶತ್ರುವಿಜಯದ ಉಬ್ಬಿನಿಂದ ಪುರಕ್ಕೆ ಮರಳಿದನು.
 

 
ರಾಮ-ಲಕ್ಷ್ಮಣರಿಗೆ, ಮಾರುತಿಗೆ ಈ ನಾಗಪಾಶ ಏನುಮಾಡ- ಬಲ್ಲದು ?
ಆದರೂ ಅಸಾಮರ್ಥ್ಯದ ಟನೆಯನ್ನಾಡಿದರು. ಅದು ದೇವಗುಹ್ಯವೊಂದರ
ಪೀಠಿಕೆಯಲ್ಲವೆ ?
 

 
ಇತ್ತ ರಾಕ್ಷಸಿಯರು ರಾವಣನ ಆಜ್ಞೆಯಂತೆ ಸೀತೆಗೆ ನಾಗಪಾಶ ಬದ್ಧನಾಗಿ
ಬಿದ್ದಿರುವ ರಾಮನನ್ನು ತೋರಿಸಿದರು. ಆದರೆ ಸಾತ್ವಿಕ ಸ್ವಭಾವದ ತ್ರಿಜಟೆ
ಅವಳನ್ನು ಸಮಾಧಾನಗೊಳಿಸಿದಳು.
 

 
ಕಪಿಗಳೆಲ್ಲ ಅಸಹಾಯರಾಗಿ ಬಿದ್ದಿದ್ದಾರೆ. ರಣಾಂಗಣ ನೀರವ, ನಿಷ್ಕಂಪ
ವಾಗಿದೆ. ಇಡಿಯ ವಾತಾವರಣವೆ ಸ್ತಬ್ಧವಾಗಿದೆ. ಅಷ್ಟರಲ್ಲಿ ಎಲ್ಲಿಂದಲೋ