This page has been fully proofread once and needs a second look.

ಸಂಗ್ರಹರಾಮಾಯಣ
 
ರಾಮನ ಬಾಣ ರಾಕ್ಷಸ ತೋರಿಸಿದ ತೋಳಿನೆಡೆಗೆ ಸಾಗಿತು. ಇಂದ್ರಾದಿ
ಗಳೂ ಕಂಡು ಬೆದರುವಂಥ ತೋಳು- ಪರ್ವತ ಶಿಖರ ದಂತೆ ಕಡಿದು ನೆಲಕ್ಕೆ
ಬಿತ್ತು. ಆಗ ಕುಂಭಕರ್ಣ ಎಡಗೈಯಿಂದ ಮರವೊಂದನ್ನು ಕಿತ್ತಿ ತಂದು
ಹೋರಾಡುವುದಕ್ಕೆ ಸಿದ್ಧನಾದನು. ರಾಮನ ಇನ್ನೊಂದು ಬಾಣ ಅದರ ಕತೆ
ಯನ್ನೂ ತೀರಿಸಿತು ! ಕಾಲಿನ ಒದೆತದಿಂದಲೇ ರಾಮನ ಸೈನ್ಯವನ್ನು ನಿರ್ನಾಮ
ಮಾಡು ವೆನೆಂದ ಕುಂಭಕರ್ಣ. ಆದರೆ ಅಷ್ಟರಲ್ಲಿ ರಾಮಚಂದ್ರನು ಪ್ರಯೋಗಿಸಿದ
ಅರ್ಧಚಂದ್ರವು ಕಾಲುಗಳನ್ನು ಕತ್ತರಿಸಿತ್ತು. ನೆಲ- ದಲ್ಲಿ ಬಿದ್ದು ವೇದನೆಯಿಂದ
ಹೊರಳುವ ರಾಕ್ಷಸನ ತೋಳು-ಕಾಲು ಗಳಿಂದ ಅನೇಕ ಕಪಿಸೇನೆ ನುಗ್ಗಾ-
ಯಿತು.
 
೧೯೭
 

 
ಕುಂಭಕರ್ಣನ ಕೈ ಕಾಲುಗಳು ಇನ್ನಿಲ್ಲವಾದರೂ ಶತ್ರುವನ್ನು ಗೆಲ್ಲ
ಬೇಕೆಂಬ ಛಲವಿದೆ. ಅವನು ಗುಹೆಯಂಥ ತನ್ನ ಬಾಯನ್ನು ತೆರೆದು ರಾಮ
ನನ್ನು ನುಂಗಲು ಬಂದನು. ತೆರೆದ ಬಾಯಿತುಂಬ ರಾಮನ ಬಾಣಗಳು
ತುಂಬಿಕೊಂಡವು. ಇನ್ನೊಂದು ಬಾಣ ಅವನ ತಲೆಯನ್ನೂ ಕತ್ತರಿಸಿತು.
ತಲೆಯ ಭಾರಕ್ಕೆ ನೆಲ ಬಿರಿಯಿತು ! ಯುದ್ಧಕ್ಕಾಗಿ ನಿದ್ರೆಯಿಂದೆಚ್ಚತ್ತ ಕುಂಭಕರ್ಣ ದೀರ್ಘ ನಿದ್ರೆ-
ಕರ್ಣ ದೀರ್ಘ ನಿದ್ರೆ
ಯನ್ನನುಭವಿಸಿದ. ಎಂದೆಂದಿಗೂ ಎಚ್ಚರಾಗದ ನಿದ್ದೆ !

ಯಾವ ರಾವಣನೂ ಎಬ್ಬಿಸಲಾಗದ ನಿದ್ದೆ !
 

 
ಮಹಾಪ್ರಮಾಣದ ರಾಕ್ಷಸನ ದೇಹವನ್ನು ರಾಮಚಂದ್ರ ಸಮುದ್ರಕ್ಕೆಸೆ
ದನು. ಕುಂಭಕರ್ಣನ ಮೈಯನ್ನು ಹೊತ್ತ ಕಡಲು ದಡಮೀರಿ ಹರಿಯಿತು !
ದೇವತೆಗಳು ಪ್ರಭು ರಾಮಚಂದ್ರನ ಮೇಲೆ ಹೂಮಳೆಗರೆದರು.
 

 
ಅಂಜನೆಯ ಮಗ ಸಂಜೀವನ ತಂದನು
 

 
ಕುಂಭಕರ್ಣನ ಮರಣದ ವಾರ್ತೆ ಅರಮನೆಗೆ ತಲುಪಿತು. ರಾವಣನ
ದುಃಖದ ಹೊನಲು ಕಟ್ಟೆಯೊಡೆದು ಹರಿಯಿತು:
 

 
"ಓ ನನ್ನ ಪ್ರೀತಿಯ ತಮ್ಮನೆ ! ಓ ಮಹಾವೀರ ಕುಂಭಕರ್ಣನೆ, ನನ್ನನ್ನು
ಬಿಟ್ಟು ಎಲ್ಲಿ ಹೋದೆ ? ನನ್ನನ್ನೂ ಕರೆದುಕೊ. ನಾನೂ ನಿನ್ನ ಜತೆ ಬರುವೆ
ನನ್ನ ಅವಿವೇಕದ ಫಲವನ್ನು ನಾನೀಗ ಕಾಣು- ತ್ತಿದ್ದೇನೆ. ಸತ್ಯವಾದಿಯಾದ
ವಿಭೀಷಣ ನಮ್ಮ ಕುಲದ ಭೂಷಣ, ಕಾಮಿಯಾದ ನನಗೆ ಅವನ ಉಪದೇಶವೂ