This page has been fully proofread once and needs a second look.

ಮಿಂಚಿನಬಳ್ಳಿ
 
ಬಿದ್ದಿರುವ ಸುಗ್ರೀವನನ್ನು ಎತ್ತಿಕೊಂಡು ಕುಂಭಕರ್ಣನು ರಾಜಧಾನಿಗೆ
ತೆರಳಿದನು. ರಾಕ್ಷಸರು ವಿಜಯಿಯಾದ ಕುಂಭಕರ್ಣ ನನ್ನು ಗಂಧ, ಪನ್ನೀರು-
ಗಳಿಂದ ಉಪಚರಿಸಿದರು. ಪನ್ನೀರಿನ ಕಣಗಳು ಸುಗ್ರೀವನ ಮೈಮೇಲೂ
ಚಿಮ್ಮಿ ಅವನಿಗೆ ತಿಳಿವು ಬಂತು. ಕಣ್ಣೆತೆರೆದು ನೋಡಿದಾಗ ತಾನು ಕುಂಭ-
ಕರ್ಣನ ಕೈಯಲ್ಲಿ ಬಂಧಿತ- ನಾಗಿರುವುದು ಅವನಿಗೆ ಅರಿವಾಯಿತು. ಕೂಡಲೆ
ಅವನು ಕುಂಭ
ಅವನು ಕುಂಭ- ಕರ್ಣನ ಮೂಗನ್ನು ಕಚ್ಚಿ, ಕಿವಿಗಳನ್ನು ಹರಿದು ಆಕಾಶಕ್ಕೆ
ಹಾರಿ ದನು. ಸಂಭ್ರಾಂತನಾದ ಕುಂಭಕರ್ಣ ಅವನನ್ನು ಅಂಗೈಯಲ್ಲಿ ಹಿಡಿದು
ಕೆಳಕ್ಕೆ ತಳ್ಳಿದನು. ಆದರೆ ಸುಗ್ರೀವ ಅಷ್ಟರಲ್ಲಿ ಅವನ ಬೆರಳುಗಳೆಡೆಯಲ್ಲಿ
ನುಸುಳಿ ತಪ್ಪಿಸಿಕೊಂಡಿದ್ದನು !
 

 
ಕುಂಭಕರ್ಣನು ಸುಗ್ರೀವನನ್ನು ಕೊಲ್ಲುವುದಕ್ಕೆಂದು ಯಮ ದಂಡ-
ದಂತಿರುವ ತನ್ನ ಶೂಲವನ್ನೆತ್ತಿದನು. ಆಗ ಪಕ್ಕನೆ ಹನುಮಂತ ಕಾಣಿಸಿ-
ಕೊಂಡು ಶತ್ರುವಿನ ಕೈಯಿಂದ ಶೂಲವನ್ನು ಕಿತ್ತು ತುಂಡರಿಸಿದನು. ಅರ
ಮನೆಯಲ್ಲ ಹನುಮಂತನ ಅಟ್ಟ- ಹಾಸ, ಸಿಂಹನಾದಗಳಿಂದ ತುಂಬಿತು. ಕುಪಿತ
ನಾ ಕುಂಭಕರ್ಣ ಮಾರುತಿಯ ವಿಶಾಲವಾದ ಎದೆಯಮೇಲೆ ಬಲವಾಗಿ
ಮುಷ್ಟಿ ಯಿಂದ ಹೊಡೆದನು. ಅದಕ್ಕೆ ಪ್ರತಿಯಾಗಿ ಹನುಮಂತನೂ ಅವನೆ-
ದೆಯಮೇಲೆ ಗುದ್ದಿದನು. ವಜಾಜ್ರಾಹತವಾದ ಪರ್ವತದಂತೆ ಕುಂಭಕರ್ಣ
ಕುಸಿದುಬಿದ್ದ !
 

 
ಸ್ವಲ್ಪ ಸಮಯದಲ್ಲಿ ಚೇತರಿಸಿಕೊಂಡ ಕುಂಭಕರ್ಣ ದೊಡ್ಡ ಗಿರಿಶೃಂಗ-
ವೊಂದನ್ನು ಹಿಡಿದುಕೊಂಡು ಮುನ್ನುಗ್ಗಿದನು. ತನ್ನ ಕಾಲತುಳಿತದಿಂದಲೆ
ಕಪಿ ಕುಲವನ್ನು ಹಿಂಸಿಸುತ್ತ ರಾಮನ ಅಭಿ- ಮುಖವಾಗಿ ಸಾಗಿದನು. ಆಗ
ಲಕ್ಷ್ಮಣನು ಬಾಣಗಳನ್ನು ಸುರಿದು ತಡೆಗಟ್ಟಿದನು. ಅವನು ಅದನ್ನು ಲಕ್ಷಿ
ಸದೆಯೆ ರಾಮನ ಬಳಿ ಸಾರಿ ತನ್ನ ಕೈಯಲ್ಲಿದ್ದ ಗಿರಿಶೃಂಗವನ್ನು ಎಸೆದನು.
ರಾಮನ ಬಾಣಗಳು ಅದನ್ನು ಭೇದಿಸಿದವು. ರಾಮನ ಯುದ್ಧಾಹ್ವಾನವನ್ನು
ಕೇಳಿದ ಕುಂಭಕರ್ಣ ಅಸಹನೆಯಿಂದ ಉತ್ತರಿಸಿದನು :
 

 
"ರಾಮಚಂದ್ರ! ನಾನು ವಿರಾಧನಲ್ಲ ಖರನೂ ಅಲ್ಲ. ನಿನ್ನ ಕೈ ಯಲ್ಲಿ
ಕಣ್ಣು ಕಳೆದುಕೊಂಡ ಕಾಗೆಯೂ ಅಲ್ಲ: ಯುದ್ಧಾ ಹ್ವಾನ ಕೊಡುವ ಮುನ್ನ
ಜಾಗ್ರತೆಯಿರಲಿ. ನಾನು ಕುಂಭಕರ್ಣ, ಇಂದ್ರಾದಿಗಳೂ ಕಂಡು ಕಾತರ-
ರಾಗುವ ನನ್ನ ತೋಳುಗಳ- ನ್ನೊಮ್ಮೆ ನೋಡು."