This page has not been fully proofread.

ಮಿಂಚಿನಬಳ್ಳಿ
 
ಬಿದ್ದಿರುವ ಸುಗ್ರೀವನನ್ನು ಎತ್ತಿಕೊಂಡು ಕುಂಭಕರ್ಣನು ರಾಜಧಾನಿಗೆ
ತೆರಳಿದನು. ರಾಕ್ಷಸರು ವಿಜಯಿಯಾದ ಕುಂಭಕರ್ಣನನ್ನು ಗಂಧ, ಪನ್ನೀರು-
ಗಳಿಂದ ಉಪಚರಿಸಿದರು. ಪನ್ನೀರಿನ ಕಣಗಳು ಸುಗ್ರೀವನ ಮೈಮೇಲೂ
ಚಿಮ್ಮಿ ಅವನಿಗೆ ತಿಳಿವು ಬಂತು. ಕಣ್ಣೆರೆದು ನೋಡಿದಾಗ ತಾನು ಕುಂಭ-
ಕರ್ಣನ ಕೈಯಲ್ಲಿ ಬಂಧಿತನಾಗಿರುವುದು ಅವನಿಗೆ ಅರಿವಾಯಿತು. ಕೂಡಲೆ
ಅವನು ಕುಂಭಕರ್ಣನ ಮೂಗನ್ನು ಕಚ್ಚಿ, ಕಿವಿಗಳನ್ನು ಹರಿದು ಆಕಾಶಕ್ಕೆ
ಹಾರಿದನು. ಸಂಭ್ರಾಂತನಾದ ಕುಂಭಕರ್ಣ ಅವನನ್ನು ಅಂಗೈಯಲ್ಲಿ ಹಿಡಿದು
ಕೆಳಕ್ಕೆ ತಳ್ಳಿದನು. ಆದರೆ ಸುಗ್ರೀವ ಅಷ್ಟರಲ್ಲಿ ಅವನ ಬೆರಳುಗಳೆಡೆಯಲ್ಲಿ
ನುಸುಳಿ ತಪ್ಪಿಸಿಕೊಂಡಿದ್ದನು !
 
ಕುಂಭಕರ್ಣನು ಸುಗ್ರೀವನನ್ನು ಕೊಲ್ಲುವುದಕ್ಕೆಂದು ಯಮದಂಡ-
ದಂತಿರುವ ತನ್ನ ಶೂಲವನ್ನೆತ್ತಿದನು. ಆಗ ಪಕ್ಕನೆ ಹನುಮಂತ ಕಾಣಿಸಿ-
ಕೊಂಡು ಶತ್ರುವಿನ ಕೈಯಿಂದ ಶೂಲವನ್ನು ಕಿತ್ತು ತುಂಡರಿಸಿದನು. ಅರ
ಮನೆಯಲ್ಲ ಹನುಮಂತನ ಅಟ್ಟಹಾಸ, ಸಿಂಹನಾದಗಳಿಂದ ತುಂಬಿತು. ಕುಪಿತ
ನಾವ ಕುಂಭಕರ್ಣ ಮಾರುತಿಯ ವಿಶಾಲವಾದ ಎದೆಯಮೇಲೆ ಬಲವಾಗಿ
ಮುಷ್ಟಿಯಿಂದ ಹೊಡೆದನು. ಅದಕ್ಕೆ ಪ್ರತಿಯಾಗಿ ಹನುಮಂತನೂ ಅವನೆ-
ದೆಯಮೇಲೆ ಗುದ್ದಿದನು. ವಜಾಹತವಾದ ಪರ್ವತದಂತೆ ಕುಂಭಕರ್ಣ
ಕುಸಿದುಬಿದ್ದ !
 
ಸ್ವಲ್ಪ ಸಮಯದಲ್ಲಿ ಚೇತರಿಸಿಕೊಂಡ ಕುಂಭಕರ್ಣ ದೊಡ್ಡ ಗಿರಿಶೃಂಗ-
ವೊಂದನ್ನು ಹಿಡಿದುಕೊಂಡು ಮುನ್ನುಗ್ಗಿದನು. ತನ್ನ ಕಾಲತುಳಿತದಿಂದಲೆ
ಕಪಿ ಕುಲವನ್ನು ಹಿಂಸಿಸುತ್ತ ರಾಮನ ಅಭಿಮುಖವಾಗಿ ಸಾಗಿದನು. ಆಗ
ಲಕ್ಷ್ಮಣನು ಬಾಣಗಳನ್ನು ಸುರಿದು ತಡೆಗಟ್ಟಿದನು. ಅವನು ಅದನ್ನು ಲಕ್ಷಿ
ಸದೆಯೆ ರಾಮನ ಬಳಿ ಸಾರಿ ತನ್ನ ಕೈಯಲ್ಲಿದ್ದ ಗಿರಿಶೃಂಗವನ್ನು ಎಸೆದನು.
ರಾಮನ ಬಾಣಗಳು ಅದನ್ನು ಭೇದಿಸಿದವು. ರಾಮನ ಯುದ್ಧಾಹ್ವಾನವನ್ನು
ಕೇಳಿದ ಕುಂಭಕರ್ಣ ಅಸಹನೆಯಿಂದ ಉತ್ತರಿಸಿದನು :
 
"ರಾಮಚಂದ್ರ! ನಾನು ವಿರಾಧನಲ್ಲ ಖರನೂ ಅಲ್ಲ. ನಿನ್ನ ಕೈಯಲ್ಲಿ
ಕಣ್ಣು ಕಳೆದುಕೊಂಡ ಕಾಗೆಯೂ ಅಲ್ಲ: ಯುದ್ಧಾ ಹ್ವಾನ ಕೊಡುವ ಮುನ್ನ
ಜಾಗ್ರತೆಯಿರಲಿ. ನಾನು ಕುಂಭಕರ್ಣ, ಇಂದ್ರಾದಿಗಳೂ ಕಂಡು ಕಾತರ-
ರಾಗುವ ನನ್ನ ತೋಳುಗಳನ್ನೊಮ್ಮೆ ನೋಡು."