This page has not been fully proofread.

ಸಂಗ್ರಹರಾಮಾಯಕ
 
"ಕುಂಭಕರ್ಣ ! ನೀನು ಏಕಾಕಿಯಾಗಿ ಯುದ್ಧಕ್ಕೆ ಹೋಗಬಾರದು.
ನಾವೆಲ್ಲರೂ ನಿನ್ನ ಜತೆಗೆ ಬರುತ್ತೇವೆ. ಅದರ ಮೊದಲು ನಮ್ಮ ಮಾಯಾ
ವಿಧಾನಗಳಿಂದ ಸೀತೆಯನ್ನು ಮೋಸಗೊಳಿಸಬೇಕು."
 
ಆಗ ಕುಂಭಕರ್ಣನು "ನಿನ್ನಂಥವರ ದುರ್ಮಂತ್ರದಿಂದಲೆ ಲಂಕೆ ಹಾಳಾ
ಯಿತು" ಎಂದು ಅವನನ್ನು ಗದರಿಸಿ, ರಾವಣನನ್ನು ಅಭಿವಂದಿಸಿ ಯುದ್ಧಕ್ಕೆ
ತೆರಳಿದನು. ಅವನ ಜತೆಗೆ ರಾಕ್ಷಸಸೇನೆಯೂ ಭಾರಿ ಪ್ರಮಾಣದಲ್ಲಿ ಕಪಿ
ಗಳನ್ನಾಕ್ರಮಿಸಿತು.
 
Gra
 
ಮುಗಿಲೆತ್ತರಕ್ಕೆ ಬೆಳೆದು ನಿಂತ ಕುಂಭಕರ್ಣನ ಮಹಾ ಕಾಯವನ್ನು
ಕಂಡು ಕಪಿಗಳು ದಿಕ್ಕುಗೆಟ್ಟು ಓಡತೊಡಗಿದರು. ಕೆಲವರು ಸೇತು ದಾಟಿ
ಈಚೆಯ ದಡಕ್ಕೆ ಬಂದರು. ಕೆಲವರು ಮರ-ಬಂಡೆಗಳೆಡೆಯಲ್ಲಿ ಅವಿತು ಕುಳಿ
ತರು, ಯುವರಾಜ ಅಂಗದನ ಧೀರವಾಣಿ, ಓಡುತ್ತಿರುವ ಕಪಿಗಳಲ್ಲಿ ಯುದ್ಧೋ
ತ್ಸಾಹವನ್ನು ಚಿಗುರಿಸಿತು:
 
"ಜಗತ್ಪಭುವಾದ ರಾಮಚಂದ್ರನು ನಮ್ಮ ರಕ್ಷಕನಾಗಿರುವಾಗ, ಓ ನನ್ನ
ಪ್ರೀತಿಯ ಕಪಿಗಳೆ ! ಏಕೆ ಹೇಡಿಗಳಂತೆ, ಷಂಡರಂತೆ ಓಡುತ್ತಿರುವಿರಿ, ಬನ್ನಿ,
ರಾಮಚಂದ್ರನ ಸೇವೆಯಲ್ಲಿ ನಿಮ್ಮ ಪಾಲು ತನ್ನಿ, ಯುದ್ಧಕ್ಕೆ ಅಣಿಯಾಗಿ."
 
ಕಪಿಗಳಲ್ಲಿ ಮತ್ತೆ ಹುಮ್ಮಸು ಚಿಮ್ಮಿತು. ಕೈಗೆ ಸಿಕ್ಕಿದ್ದನ್ನು ಹಿಡಿದು
ಕೊಂಡು ಯುದ್ಧಕ್ಕೆ ಸಿದ್ಧರಾದರು. ಕಪಿಗಳೆಸೆದ ದೊಡ್ಡ ದೊಡ್ಡ ಬಂಡೆಗಳು
ಕೂಡ ಕುಂಭಕರ್ಣನ ಮೈಗೆ ತಾಗಿ ಮಣ್ಣು ಮುದ್ದೆಯಂತೆ ಪುಡಿಯಾದವು.
ಎದುರು ಬಂದ ಕಪಿಗಳ ಗುಂಪನ್ನೆ ಕುಂಭಕರ್ಣನು ಮುಷ್ಟಿಯಿಂದ ಅದುಮಿ
ಚೆಲ್ಲಿಬಿಡುತ್ತಿದ್ದನು. ಅನೇಕ ಕಪಿಗಳನ್ನು ಕಬಳಿಸಿದನು. ಕೆಲವರನ್ನು ಮುಸ್ಲಿ
 
ಯಿಂಲೆ ಚೂರ್ಣಗೊಳಿಸಿದನು.
 
ಹೀಗೆ ಕಪಿಗಳ ಸಮೂಹದ ನಾಶವನ್ನು ಕಂಡು ಸುಗ್ರೀವ, ಅಂಗದ,
ಜಾಂಬವಂತ ಈ ಮೂವರು ಯುದ್ಧಕ್ಕೆ ಮುಂದಾದರು. ಈ ಕಪಿತ್ರಯರ
ಶಿಲಾವರ್ಷದಿಂದ ಕುಂಭಕರ್ಣನು ಲವಮಾತ್ರವೂ ಕಂಪಿತನಾಗಲಿಲ್ಲ. ಪ್ರತಿ-
ಯಾಗಿ ಶಿಲಾಖಂಡಗಳೇ ಭಗ್ನವಾದುವು ! ಆಗ ಸುಗ್ರೀವನು ದೊಡ್ಡ ಬೆಟ್ಟ -
ವೊಂದನ್ನು ಶತ್ರುವಿನ ಮೇಲೆಸೆದನು. ಕುಂಭಕರ್ಣನು ನಗುತ್ತ ಅದನ್ನೆ ತಿರುಗಿಸಿ
ಸುಗ್ರೀವನ ಮೇಲೆಸೆದನು. ಪರ್ವತಾಹತನಾದ ಕಪಿರಾಜ ಕುಸಿದುಬಿದ್ದನು !
ಅಂಗದ, ಜಾಂಬವಂತರಿಗೆ ಅವನ ಒಂದು ಪ್ರಹಾರವೇ ಸಾಕಾಯಿತು.