This page has been fully proofread once and needs a second look.

ಮಿ೦ಚಿನಬಳ್ಳಿ
 
"ಮಹಾರಾಜ, ಯಾವ ಆಪತ್ತಿಗಾಗಿ ನನ್ನನ್ನು ಎಚ್ಚರಿಸ- ಬೇಕಾಯಿತು ? ಯಾವ ಲೋಕಪಾಲನನ್ನು ನಿನ್ನ ಕಾಲಬುಡ- ದಲ್ಲಿ ತಂದು ಕೆಡವಬೇಕು ? ಅಪ್ಪಣೆಯಾಗಬೇಕು."
 
"ಕುಂಭಕರ್ಣ ! ಲೋಕಪಾಲರಿಂದ ನಮಗೆ ಭಯವಿಲ್ಲ. ಸದ್ಯ ನಾವು ಹೆದರಬೇಕಾಗಿ ಬಂದದ್ದು ಮನುಷ್ಯರಿಂದ, ಮಂಗಗಳಿಂದ ! ರಾಮ-ಲಕ್ಷ್ಮಣರನ್ನು ತೀರಿಸುವ ಭಾರ ನಿನ್ನ ಮೇಲಿದೆ. ಅದಕ್ಕಾಗಿ ನಿ
ನ್ನನ್ನು ಎಚ್ಚರಿಸಬೇಕಾಯಿತು ?
ಯಾವ ಲೋಕಪಾಲನನ್ನು ನಿನ್ನ ಕಾಲಬುಡದಲ್ಲಿ ತಂದು ಕೆಡವಬೇಕು ?
ಅಪ್ಪಣೆಯಾಗಬೇಕು."
 
"
."
 
ನೀತಿಮಂತನಾದ
ಕುಂಭಕರ್ಣ ! ಲೋಕಪಾಲರಿಂದ ನಮಗೆ ಭಯವಿಲ್ಲ. ಸದ್ಯ ನಾವು
ಹೆದರಬೇಕಾಗಿ ಬಂದದ್ದು ಮನುಷ್ಯರಿಂದ, ಮಂಗಗಳಿಂದ ! ರಾಮ-ಲಕ್ಷ್ಮಣ
ರನ್ನು ತೀರಿಸುವ ಭಾರ ನಿನ್ನ ಮೇಲಿದೆ. ಅದಕ್ಕಾಗಿ ನಿನ್ನನ್ನು ಎಚ್ಚರಿಸಬೇಕಾ
 
ಯಿತು.
 
AY
 
ನೀತಿಮಂತನಾದ ಕುಂಭಕರ್ಣ
ಅಣ್ಣನನ್ನು ವಿರೋಧಿಸಿ ನುಡಿದನು :

 
"ಮಹಾವೀರನಾದ ರಾಮನೊಡನೆ ಕದನಕ್ಕೆ ತೊಡಗಿದೆಯಾ ? ಮಾಡ
ಬಾರದ ಕೆಲಸ ಮಾಡಿದಂತಾಯಿತು. ರಾಮನೊಡನೆ ಕಾದು ಬದುಕುವವರಿಲ್ಲ.
ಬಲಿಷ್ಠರೊಡನೆ ಸಂಧಿ, ದುರ್ಬಲ- ರೊಡನೆ ಕದನ, ಸಮಬಲರೊಡನೆ ಔದಾ
ಸೀನ್ಯ, ಇದು ರಾಜನೀತಿ, ಬಲಿಷ್ಠನಾದ ರಾಮಚಂದ್ರನೊಡನೆ ನೀನು ಹೂಡಿದ
ಯುದ್ಧ ರಾಜನೀತಿಗೆ ಮಸಿ ಬಳೆದಿದೆ. ರಾಮನ ಒಂದು ಬಾಣ ಮೂರು ಲೋಕ
ಗಳನ್ನು ದಹಿಸೀತು ! ಎಚ್ಚರಿಕೆ."
 

 
ರಾವಣನು ನಿಷ್ಠುರನಾಗಿಯೆ ಉತ್ತರಿಸಿದನು :
 

 
"ನಿನ್ನಂಥ ಬಂಧುಗಳನ್ನು ಪಡೆದ ರಾಜನ ಬಾಳು ಹಾಳು, ನಿಮ್ಮೆಲ್ಲರ
ರಾಜನಾದ ನನ್ನ ರಕ್ಷಣೆಗೆ ಉಪಯೋಗವಾಗದ ನಿನ್ನ ಬಲ ಇದ್ದರೇನು ? ಇರ
ದಿದ್ದರೇನು ? ಗುರುವಿನಂತಿರುವ ನಿನ್ನ ಒಡಹುಟ್ಟಿದ ಅಣ್ಣನನ್ನು ನಿಂದಿಸುವುದ
ರಿಂದ ನಿನ್ನ ಮೂರ್ಖ- ತನವನ್ನು ಹೊರಗೆಡವುತ್ತಿರುವೆ."
 

 
ಈ ಮಾತು ಕುಂಭಕರ್ಣನಿಗೆ ನಾಟಿತು. ಕೂಡಲೆ ಅವನು ತನ್ನ ಶೂಲ
ವನ್ನು ಕೊಡಹಿ ಎದ್ದು ನಿಂತು ಗರ್ಜಿಸಿದನು :
 

 
"ಮಹಾರಾಜ, ನನ್ನ ಬಂಧುಗಳ ನಿಧನಕ್ಕೆ ಸರಿಯಾದ ಪ್ರತೀ- ಕಾರವನ್ನು
ನಾನು ಮಾಡುವೆ. ಶತ್ರುವನ್ನು ಸೋಲಿಸಿ ನಿನ್ನನ್ನು ಸಂತೋಷಗೊಳಿಸಲು ನನ್ನ
ಸರ್ವ ಶಕ್ತಿಯಿಂದ ಪ್ರಯತ್ನಿಸುತ್ತೇನೆ. ನೀನು ನಿಶ್ಚಿಂತನಾಗಬೇಕು. ನಾನು
ಕೋಪಗೊಂಡೆನೆಂದರೆ ನನಗೆ ಮೂರು ಲೋಕಗಳು ಮೂರು ತುತ್ತು; ಸಪ್ತ
ಸಾಗರಗಳು ಒಂದು ಗುಟುಕು."
 

 
ಮಹೋದರ ಮಧ್ಯದಲ್ಲಿ ತಡೆದು ವಿನಂತಿಸಿಕೊಂಡನು :