2023-03-15 15:35:56 by ambuda-bot
This page has not been fully proofread.
ಮಿ೦ಚಿನಬಳ್ಳಿ
"ಮಹಾರಾಜ, ಯಾವ ಆಪತ್ತಿಗಾಗಿ ನನ್ನನ್ನು ಎಚ್ಚರಿಸಬೇಕಾಯಿತು ?
ಯಾವ ಲೋಕಪಾಲನನ್ನು ನಿನ್ನ ಕಾಲಬುಡದಲ್ಲಿ ತಂದು ಕೆಡವಬೇಕು ?
ಅಪ್ಪಣೆಯಾಗಬೇಕು."
"ಕುಂಭಕರ್ಣ ! ಲೋಕಪಾಲರಿಂದ ನಮಗೆ ಭಯವಿಲ್ಲ. ಸದ್ಯ ನಾವು
ಹೆದರಬೇಕಾಗಿ ಬಂದದ್ದು ಮನುಷ್ಯರಿಂದ, ಮಂಗಗಳಿಂದ ! ರಾಮ-ಲಕ್ಷ್ಮಣ
ರನ್ನು ತೀರಿಸುವ ಭಾರ ನಿನ್ನ ಮೇಲಿದೆ. ಅದಕ್ಕಾಗಿ ನಿನ್ನನ್ನು ಎಚ್ಚರಿಸಬೇಕಾ
ಯಿತು.
AY
ನೀತಿಮಂತನಾದ ಕುಂಭಕರ್ಣ ಅಣ್ಣನನ್ನು ವಿರೋಧಿಸಿ ನುಡಿದನು :
"ಮಹಾವೀರನಾದ ರಾಮನೊಡನೆ ಕದನಕ್ಕೆ ತೊಡಗಿದೆಯಾ ? ಮಾಡ
ಬಾರದ ಕೆಲಸ ಮಾಡಿದಂತಾಯಿತು. ರಾಮನೊಡನೆ ಕಾದು ಬದುಕುವವರಿಲ್ಲ.
ಬಲಿಷ್ಠರೊಡನೆ ಸಂಧಿ, ದುರ್ಬಲರೊಡನೆ ಕದನ, ಸಮಬಲರೊಡನೆ ಔದಾ
ಸೀನ್ಯ, ಇದು ರಾಜನೀತಿ, ಬಲಿಷ್ಠನಾದ ರಾಮಚಂದ್ರನೊಡನೆ ನೀನು ಹೂಡಿದ
ಯುದ್ಧ ರಾಜನೀತಿಗೆ ಮಸಿ ಬಳೆದಿದೆ. ರಾಮನ ಒಂದು ಬಾಣ ಮೂರು ಲೋಕ
ಗಳನ್ನು ದಹಿಸೀತು ! ಎಚ್ಚರಿಕೆ."
ರಾವಣನು ನಿಷ್ಠುರನಾಗಿಯೆ ಉತ್ತರಿಸಿದನು :
"ನಿನ್ನಂಥ ಬಂಧುಗಳನ್ನು ಪಡೆದ ರಾಜನ ಬಾಳು ಹಾಳು, ನಿಮ್ಮೆಲ್ಲರ
ರಾಜನಾದ ನನ್ನ ರಕ್ಷಣೆಗೆ ಉಪಯೋಗವಾಗದ ನಿನ್ನ ಬಲ ಇದ್ದರೇನು ? ಇರ
ದಿದ್ದರೇನು ? ಗುರುವಿನಂತಿರುವ ನಿನ್ನ ಒಡಹುಟ್ಟಿದ ಅಣ್ಣನನ್ನು ನಿಂದಿಸುವುದ
ರಿಂದ ನಿನ್ನ ಮೂರ್ಖತನವನ್ನು ಹೊರಗೆಡವುತ್ತಿರುವೆ."
ಈ ಮಾತು ಕುಂಭಕರ್ಣನಿಗೆ ನಾಟಿತು. ಕೂಡಲೆ ಅವನು ತನ್ನ ಶೂಲ
ವನ್ನು ಕೊಡಹಿ ಎದ್ದು ನಿಂತು ಗರ್ಜಿಸಿದನು :
"ಮಹಾರಾಜ, ನನ್ನ ಬಂಧುಗಳ ನಿಧನಕ್ಕೆ ಸರಿಯಾದ ಪ್ರತೀಕಾರವನ್ನು
ನಾನು ಮಾಡುವೆ. ಶತ್ರುವನ್ನು ಸೋಲಿಸಿ ನಿನ್ನನ್ನು ಸಂತೋಷಗೊಳಿಸಲು ನನ್ನ
ಸರ್ವ ಶಕ್ತಿಯಿಂದ ಪ್ರಯತ್ನಿಸುತ್ತೇನೆ. ನೀನು ನಿಶ್ಚಿಂತನಾಗಬೇಕು. ನಾನು
ಕೋಪಗೊಂಡೆನೆಂದರೆ ನನಗೆ ಮೂರು ಲೋಕಗಳು ಮೂರು ತುತ್ತು; ಸಪ್ತ
ಸಾಗರಗಳು ಒಂದು ಗುಟುಕು."
ಮಹೋದರ ಮಧ್ಯದಲ್ಲಿ ತಡೆದು ವಿನಂತಿಸಿಕೊಂಡನು :